WhatsApp Chat: ವಾಟ್ಸಪ್ಪ್ ಬಳಸುವವರಿಗೆ ವರ್ಷದ ಬಿಗ್ ಅಪ್ಡೇಟ್, ಇನ್ನಷ್ಟು ಸೇಫ್ ಆಗಿರಲಿದೆ ನಿಮ್ಮ ಚಾಟ್

ಪರ್ಸನಲ್ ಚಾಟ್ ಅನ್ನು ಸೇಫ್ ಆಗಿರಿಸಲು ವಾಟ್ಸಾಪ್ ನಲ್ಲಿ ನೂತನ ಫೀಚರ್ ಬಿಡುಗಡೆ

WhatsApp Chat Lock Feature: WhatsApp ಇದೀಗ ವಿಶ್ವದೆಲ್ಲೆಡೆ ಜನಪ್ರಿಯ ಚಾಟಿಂಗ್ ಚಾಟಿಂಗ್ ಅಪ್ಲಿಕೇಶನ್ ಆಗಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರಿಗೆ ವಾಟ್ಸಾಪ್ ಈಗಾಗಲೇ ಅನೇಕ ಫೀಚರ್ ಅನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರಿಗೆ ಹೊಸ ಹೊಸ ಅನುಭವವನ್ನು ನೀಡುತ್ತಿದೆ. ಇದೀಗ ವಾಟ್ಸಾಪ್ ಮತ್ತೊಂದು ಬಹುನಿರೀಕ್ಷಿತ ಅಪ್ಡೇಟ್ ಅನ್ನು ಪರಿಚಯಿಸಲಿದೆ.

ಈ ಹೊಸ ಅಪ್ಡೇಟ್ ನಿಂದ ಬಳಕೆದಾರರಿಗೆ ಸಾಕಷ್ಟು ಉಪಯೋಗ ಆಗಲಿದೆ. ಇನ್ನು ಮುಂದೆ ನಿಮ್ಮ ಪರ್ಸನಲ್ ಚಾಟ್ ನ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ. ಅಷ್ಟಕ್ಕೂ ವಾಟ್ಸಾಪ್ ಪರಿಚಯಿಸಿರುವ ನೂತನ ಫೀಚರ್ ಯಾವುದು…? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

WhatsApp Chat Lock Feature
Image Credit: Theguardian

ವಾಟ್ಸಾಪ್ ನಲ್ಲಿ ಬಹುನಿರೀಕ್ಷಿತ  ಫೀಚರ್ ಬಿಡುಗಡೆ
ಈ ವರ್ಷದ ಆರಂಭದಿಂದಲೇ ವಾಟ್ಸಾಪ್ ನಲ್ಲಿ ಸಾಕಷ್ಟು ಅಪ್ಡೇಟ್ ಗಳು ಬಿಡುಗಡೆಗೊಂಡಿದ್ದವು. ಬಳಕೆದಾರರು ಈಗಾಗಲೇ ಕೆಲವು ಅಪ್ಡೇಟ್ ಗಳನ್ನೂ ಬಳಸಿಕೊಳ್ಳುತ್ತಿರಬಹುದು. ವಾಟ್ಸಾಪ್ ಅಪ್ಲಿಕೇಶನ್ ಅನ್ನು ದೇಶದಲ್ಲಿ ಈಗಾಗಲೇ ಅದೆಷ್ಟೋ ಮಿಲಿಯನ್ ಗಳಷ್ಟು ಜನರು ಬಳಸುತ್ತಿದ್ದಾರೆ.

ಸಾಮಾನ್ಯವಾಗಿ ಕೆಲವರು ವಾಟ್ಸಾಪ್ ಓಪನ್ ಮಾಡದೆ ಅವರ ದಿನ ನಿತ್ಯದ ಜೀವನ ಆರಂಭವಾಗುವುದೇ ಇಲ್ಲ. ಇನ್ನು ಗುಡ್ ಮಾರ್ನಿಂಗ್ ಸಂದೇಶದ ಮೂಲಕವೇ ವಾಟ್ಸಾಪ್ ಬಳಕೆದಾರರ ದಿನ ಪ್ರಾರಂಭವಾಗುತ್ತದೆ. ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಅಪ್ಡೇಟ್ ಅನ್ನು ಪರಿಚಯಿಸುತ್ತಿದೆ. ಈ ಹೊಸ ಅಪ್ಡೇಟ್ ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಈ ಹೊಸ ಫೀಚರ್ ಯಾವುದಿರಬಹುದು ಎಂದು ತಿಳಿದುಕೊಳ್ಳೋಣ.

New Privacy Features
Image Credit: Timeoutdubai

ಇನ್ನುಮುಂದೆ ನಿಮ್ಮ ಪರ್ಸನಲ್ ಚಾಟ್ ಇನ್ನಷ್ಟು ಸೇಫ್…!
ಇನ್ನು ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ನಲ್ಲಿರುವ ಮೆಸ್ಸೇಜ್, ವಿಡಿಯೋ ಇತ್ಯಾದಿಗಳನ್ನು ಯಾರು ನೋಡದೆ ಇರಲಿ ಎಂದು ಬಯಸುತ್ತಾರೆ. ಇದಕ್ಕಾಗಿ ಅನೇಕ ಅಪ್ಲಿಕೇಶನ್ ಅನ್ನು ಕೂಡ ಬಳಸುತ್ತಾರೆ. ತಮ್ಮ ವೈಯಕ್ತಿಕ ಮಾಹಿತಿ ಯಾರಿಗೂ ತಿಳಿಯಬಾರದು ಎನ್ನುವ ಆಸೆ ವಾಟ್ಸಾಪ್ ಬಳಕೆದಾರರಿಗೆ ಇರುವುದು ಸಾಮಾನ್ಯ.

Join Nadunudi News WhatsApp Group

ಇದೀಗ ವಾಟ್ಸಾಪ್ ಚಾಟ್ ಗಳನ್ನೂ ಗೌಪ್ಯವಾಗಿಟ್ಟುಕೊಳ್ಳಲು ಹೊಸ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಲಿದೆ. ಈ ಹೊಸ ಫೀಚರ್ ನ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಚಾಟ್ ಗಳನ್ನೂ ಲಾಕ್ ಮಾಡಿ ಇಟ್ಟುಕೊಳ್ಳುವ ಮೂಲಕ ಮೆಸೇಜ್ ಗಳನ್ನೂ ಗೌಪ್ಯವಾಗಿಟ್ಟುಕೊಳ್ಳಬಹುದು. ಈ ಗೌಪ್ಯತೆಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ಅಥವಾ ಪಾಸ್ ವರ್ಡ್ ಸೌಲಭ್ಯ ವಾಟ್ಸಾಪ್ ನಲ್ಲಿ ಸಿಗಲಿದೆ.

Join Nadunudi News WhatsApp Group