Chat Pin: ವಾಟ್ಸಾಪ್ ಚಾಟ್ ಮಾಡುವವರಿಗೆ ಬಿಗ್ ಅಪ್ಡೇಟ್, ಈಗ ಪಿನ್ ಮಾಡಿ ನೀವು ಮಾಡಿದ ಚಾಟ್

ವಾಟ್ಸಾಪ್ ಬಳಕೆದಾರರಿಗಾಗಿ Chat Pin ಫೀಚರ್ ಬಿಡುಗಡೆಯಾಗಿದೆ

WhatsApp Chat Pin Feature Update: ಮೆಟಾ ಮಾಲೀಕತ್ವದ WhatsApp ದಿನ ನಿತ್ಯ ಹೊಸ್ದ ಹೊಸ ಫೀಚರ್ ನ ಮೂಲಕ ಬಳಕೆದಾರರನ್ನು ತಲುಪುತ್ತಿದೆ. ವಾಟ್ಸಾಪ್ ಬಳಕೆದಾರರು ಸದ್ಯ ಹೆಚ್ಚಿನ ಫೀಚರ್ ಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಸದ್ಯ ವಾಟ್ಸಾಪ್ ಚಾಟ್ ನಲ್ಲಿ ಸಂಪೂರ್ಣ ಬದಲಾವಣೆ ಆಗಿದೆ ಎನ್ನಬಹುದು. ಮೆಸೇಜ್ ಎಡಿಟಿಂಗ್, ವಿಡಿಯೋ ಮೆಸೇಜ್, ಗ್ರೂಪ್ ವಾಯ್ಸ್ ಕಾಲ್ ಸೇರಿದಂತೆ ಅನೇಕ ಫೀಚರ್ ಗಳು ಬಳಕೆದಾರರ ಗಮನ ಸೆಳೆಯುತ್ತಿದೆ. ಸದ್ಯ ವಾಟ್ಸಾಪ್ ಬಳಕೆದಾರರಿಗಾಗಿ ಪ್ರಯೋಜನಕಾರಿ ಫೀಚರ್ ಒಂದು ಬಿಡುಗಡೆಯಾಗಿದೆ. ವಾಟ್ಸಾಪ್ ಹೊಸ ಫೀಚರ್ ನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

WhatsApp Chat Pin Feature
Image Credit: Mypunepulse

ವಾಟ್ಸಾಪ್ ನಲ್ಲಿ ಸೇರಿಕೊಂಡ ಹೊಸ ಫೀಚರ್
ಇನ್ನು ವಾಟ್ಸಾಪ್ ನಲ್ಲಿ ಈಗಾಗಲೇ Chat Pin ಫೀಚರ್ ಬಿಡುಗಡೆಗೊಂಡಿದೆ. ಚಾಟ್ ಪಿನ್ ಫೀಚರ್ ನ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಚಾಟ್ ಗಳನ್ನೂ ಪಿನ್ ಮಾಡಿ ಇಟ್ಟುಕೊಳ್ಳಬಹುದಾಗಿದೆ. ಇದೀಗ ಮೆಟಾ ಮಾಲೀಕತ್ವದ ವಾಟ್ಸಾಪ್ ಪಿನ್ ಚಾಟ್ ನಲ್ಲಿ ಮತ್ತೊಂದು ಅಪ್ಡೇಟ್ ಅನ್ನು ಜಾರಿಗೊಳಿಸಿದೆ. ಬಳಕೆದಾರರು ಚಾಟ್ ಮತ್ತು ಗ್ರೂಪ್ ನಲ್ಲಿ ಪಿನ್ ಮಾಡಿ ಇಟ್ಟಿರುವ ಮುಖ್ಯ ಸಂದೇಶಗಳಿಗೆ ಟೈಮರ್ ಅಳವಡಿಸಲು ಸಾಧ್ಯವಾಗಲಿದೆ. ಪಿನ್ ಮಾಡಿರುವ ಸಂದೇಶಗಳು ಇಷ್ಟು ದಿನ ಮಾತ್ರ ಇರಲಿ ಎಂದು ಟೈಮರ್ ಸೆಟ್ ಮಾಡಬಹುದಾಗಿದೆ.

ವಾಟ್ಸಾಪ್ ಪಿನ್ ಡ್ಯುರೇಷನ್ ಗೆ ಮೂರು ಆಯ್ಕೆಗಳು ಲಭ್ಯ
ವಾಟ್ಸಾಪ್ ಬೀಟಾ ಆಂಡ್ರಾಯ್ಡ್ ಬಳಕೆದಾರರಿಗೆ ಈ ಅಪ್ಡೇಟ್ ಲಭ್ಯವಾಗಲಿದೆ. ವಾಟ್ಸಾಪ್ ನಲ್ಲಿ ಪಿನ್ ಮಾಡಿರುವ ಮೆಸ್ಸೇಜ್ ಗಳಿಗೆ ಟೈಮರ್ ಸೆಟ್ ಮಾಡಲು ಮೂರು ಆಯ್ಕೆಗಳನ್ನು ನೀಡಲಾಗುತ್ತದೆ. 24 ಗಂಟೆಗಳು, ಏಳು ದಿನಗಳು ಹಾಗೂ 30 ದಿನಗಳ ಎನ್ನುವ ಮೂರು ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಬಳಕೆದಾರರು ಅಗತ್ಯಕ್ಕೆ ಅನುಗುಣವಾಗಿ ನಿಮ್ಮ ಇಚ್ಛೆಯಂತೆ ಟೈಮರ್ ಅನ್ನು ಸೆಟ್ ಮಾಡಿಕೊಳ್ಳಬಹುದು.

WhatsApp Chat Pin Latest Update
Image Credit: Techcult

WhatsApp Chat Pin ನ ಬಗ್ಗೆ ತಿಳಿದುಕೊಳ್ಳಿ
ಇನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶವನ್ನು ಪಿನ್ ಮಾಡಲು ಕೆಲವು ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. WhatsApp Group ನಲ್ಲಿ ಸಂದೇಶವನ್ನು ಯಾರೆಲ್ಲ ಪಿನ್ ಮಾಡಬಹುದು ಎನ್ನುವುದನ್ನು ಗ್ರೂವ್ಪ್ ಅಡ್ಮಿನ್ ಗಳು ನಿಯಂತ್ರಿಸಬಹುದು. ಇನ್ನು ವಾಟ್ಸಾಪ್ ತನ್ನ ಪಿನ್ ಫೀಚರ್ ಅನ್ನು ಚಾನೆಲ್ ಅಪ್ಡೇಟ್ ಗೂ ನೀಡಲಿದೆಯೇ..? ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

Join Nadunudi News WhatsApp Group

WhatsApp ಪರಿಚಯಿಸಿದ ಹೊಸ PIN ಆಯ್ಕೆಯು ಟೆಲಿಗ್ರಾಮ್‌ ಗಿಂತ ಭಿನ್ನವಾಗಿದೆ. ಏಕೆಂದರೆ ಟೆಲಿಗ್ರಾಮ್‌ ನಲ್ಲಿನ ಪಿನ್ ಆಯ್ಕೆಯು ಬಹು ಸಂದೇಶಗಳನ್ನು ಪಿನ್ ಮಾಡಲು ನಿಮಗೆ ಅನುಮತಿಸುತ್ತದೆ ಆದರೆ ವಾಟ್ಸಾಪ್ ನಿಮಗೆ ಒಂದು ಸಮಯದಲ್ಲಿ ಒಂದು ಸಂದೇಶವನ್ನು ಮಾತ್ರ ಪಿನ್ ಮಾಡಲು ಅನುಮತಿಸುತ್ತದೆ.

Join Nadunudi News WhatsApp Group