Deleted Msg Read: ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನೂ ನೋಡುವುದು ಹೇಗೆ…? ಹೊಸ ಫೀಚರ್ ಬಿಡುಗಡೆ

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಈ ಫೀಚರ್ ಮೂಲಕ ತಿಳಿದುಕೊಳ್ಳಬಹುದು

WhatsApp Deleted Message Read: ಸದ್ಯದ ಡಿಜಿಟಲ್ ದುನಿಯಾದಲ್ಲಿ WhatsApp ಬಳಸದವರಿಲ್ಲ ಎಂದರೆ ತಪ್ಪಗಲಾರದು. ಎಲ್ಲರು ಕೂಡ ವಾಟ್ಸಾಪ್ ಅನ್ನು ಬಳಸುತ್ತಾರೆ. ಚಾಟಿಂಗ್, ಕಾಲ್, ವಿಡಿಯೋ ಶೇರ್, ಆಡಿಯೋ ಶೇರ್ ಹೀಗೆ ಎಲ್ಲವನ್ನು ಕೂಡ ವಾಟ್ಸಾಪ್ ನ ಮೂಲಕ ಮಾಡುತ್ತಾ ತಮ್ಮ ಪ್ರೀತಿ ಪಾತ್ರರಾದವರ ಜೊತೆ ಹತ್ತಿರವಿರಲು ವಾಟ್ಸಾಪ್ ಸಹಾಯಮಾಡುತ್ತದೆ. ಇದೀಗ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಲಭ್ಯವಾಗಲಿದೆ. ಹೌದು ಈ ಹೊಸ ಫೀಚರ್ ಮೂಲಕ ವಾಟ್ಸಾಪ್ ನಲ್ಲಿ ಡಿಲೀಟ್ ಆದ ಸಂದೇಶಗಳನ್ನ ಓದಬಹುದಾಗಿದೆ 

WhatsApp New Feature
Image Credit: Timeoutdubai

ವಾಟ್ಸಾಪ್ ನಲ್ಲಿ ಹೊಸ ಅಪ್ಡೇಟ್
ಇಡೀ ವಿಶ್ವದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಎನ್ನುವ ಹೆಗ್ಗಳಿಕೆಯನ್ನು WhatsApp ಪಡೆದುಕೊಂಡಿದೆ. ಇನ್ನು ಮೆಟಾ ಮಾಲೀಕತ್ವದ ವಾಟ್ಸಾಪ್ ನಲ್ಲಿ ಈಗಾಗಲೇ ಹತ್ತು ಹಲವು ವಿಭಿನ್ನ ವಾಟ್ಸಾಪ್ ಫೀಚರ್ ಗಳು ಲಭ್ಯವಾಗಿದೆ. ಈಗಾಗಲೇ ಸಾಕಷ್ಟು ಬಳಕೆದಾರರು ವಾಟ್ಸಾಪ್ ನ ಎಲ್ಲ ಫೀಚರ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಬಳಕೆದಾರರು ಈ ಫೀಚರ್ ಗಾಗಿ ಸಾಕಷ್ಟು ದಿನದಿಂದ ಕಾಯುತ್ತಿದ್ದಾರೆ ಎನ್ನಬಹುದು. ವಾಟ್ಸಾಪ್ ಹೊಸ ಫೀಚರ್ ನ ಬಗ್ಗೆ ಮಾಹಿತಿ ಇಲ್ಲಿದೆ.

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ನೋಡಬಹುದು
ಇನ್ನು WhatsApp Chatting ಮಾಡುವ ಸಮಯದಲ್ಲಿ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ವೇಳೆ ಆಫ್ಲೈನ್ ನಲ್ಲಿ ಇದ್ದ ಸಮಯದಲ್ಲಿ ಯಾರಾದರೂ ಕಳುಹಿಸಿದ ಸಂದೇಶವನ್ನು Delete ಮಾಡಿದರೆ ಅದನ್ನು ನಮಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ WhatsApp Deleted Message ಅನ್ನು ತಿಳಿಯಲು ಒಂದು ಹೊಸ ಫೀಚರ್ ಪರಿಚಯವಾಗಿದೆ. ನೀವು ವಾಟ್ಸಾಪ್ ನಲ್ಲಿ ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳುವ ಮೂಲಕ Delete ಆಗಿರುವ ಸಂದೇಶವನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

WhatsApp Delete Message
Image Credit: Tyla

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ನೋಡಲು ಈ ಟ್ರಿಕ್ ಬಳಸಿ
Google play Store ನಲ್ಲಿ ಲಭ್ಯವಿರುವ ಕೆಲ App ಗಳ ಮೂಲಕ ವಾಟ್ಸಾಪ್ ನಲಿ ಡಿಲೀಟ್ ಆದ ಮೆಸೇಜ್ ಅನ್ನು ನೋಡಬಹುದು. ನೀವು WAMR, Whats Deleted, Deleted WhatsApp message ಥರ್ಡ್ ಪಾರ್ಟಿ ಆಪ್ ಗಳ ಮೂಲಕ ಡಿಲೀಟ್ ಆದ ಮೆಸೇಜ್ ಅನ್ನು ನೋಡಬಹುದು.

•ಮೊದಲು ಗೂಗಲ್ ಪ್ಲೇ ಸ್ಟೋರ್‌ ಗೆ ಹೋಗಿ.

Join Nadunudi News WhatsApp Group

•ಸರ್ಚ್ ನಲ್ಲಿ ‘WhatsApp Delete Message’ ಎಂದು ಟೈಪ್ ಮಾಡಿ.

ಗೂಗಲ್ ಪ್ಲೇ ಸ್ಟೋರ್‌ನಿಂದ WhatsApp Removed ಅಪ್ಲಿಕೇಶನ್ ಅನ್ನು ಡೌನ್‌ ಲೋಡ್ ಮಾಡಿ.

•ವಿವಿಧ ರೀತಿಯ ಅಪ್ಲಿಕೇಶನ್‌ ಗಳನ್ನು ತಕ್ಷಣವೇ ಪ್ರದರ್ಶಿಸಲಾಗುತ್ತದೆ.

•ಉತ್ತಮ ರೇಟಿಂಗ್ ಮತ್ತು ಪ್ರತಿಕ್ರಿಯೆಯೊಂದಿಗೆ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿ ಮತ್ತು ಡೌನ್‌ಲೋಡ್ ಮಾಡಿ.

•ಅಪ್ಲಿಕೇಶನ್‌ ನ ಸೆಟ್ಟಿಂಗ್‌ ಗಳನ್ನು ಪೂರ್ಣಗೊಳಿಸಿ ಮತ್ತು ಅನುಮತಿ ನೀಡಿ.

•ನಂತರ ಯಾವ ಅಪ್ಲಿಕೇಶನ್ Notification Save ಮಾಡಬೇಕೋ ಅದನ್ನು ಆಯ್ಕೆಮಾಡಿ.

•ಅಂದರೆ, ನೀವು WhatsApp Notification Save ಬಯಸಿದರೆ, WhatsApp ಮೇಲೆ ಕ್ಲಿಕ್ ಮಾಡಿ. NEXT ಆಯ್ಕೆಯನ್ನು ಒತ್ತಿರಿ.

Join Nadunudi News WhatsApp Group