Chat List: ವಾಟ್ಸಾಪ್ ಚಾಟ್ ಮಾಡುವವರಿಗೆ ಹೊಸ ಯೋಜನೆ ಬಿಡುಗಡೆ, ಹೊಸ ಡಿಸೈನ್ ನಲ್ಲಿ ಚಾಟ್ ಮಾಡಿ.

ಹೊಸ ವಾಟ್ಸಾಪ್ ಚಾಟ್ ಲಿಸ್ಟ್ ಬಿಡುಗಡೆ ಆಗಿದೆ ಮತ್ತು ಈಗ ಜನರು ಹೊಸ ಡಿಸೈನ್ ಮೂಲಕ ಚಾಟ್ ಮಾಡಬಹುದು.

WhatsApp Chat List New Design: ವಾಟ್ಸಾಪ್ (WhatsApp) ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿದೆ. ದೇಶದಾದ್ಯಂತ ವಾಟ್ಸಾಪ್ ಅನ್ನು ಎಷ್ಟೋ ಮಿಲಿಯನ್ ಜನರು ಬಳಸುತ್ತಿದ್ದಾರೆ. ಇತ್ತೀಚೆಗಂತೂ ವಾಟ್ಸಾಪ್ ನಲ್ಲಿ ಅನೇಕ ಫೀಚರ್ ಗಳು ಬಿಡುಗಡೆಗೊಂಡಿದೆ.

ವಾಟ್ಸಾಪ್ ನಲ್ಲಿ ಈಗ ಹಣದ ವಹಿವಾಟುಗಳು ಕೂಡ ನಡೆಯುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಸಾಲು ಸಾಲು ಅಪ್ಡೇಟ್ ಗಳನ್ನೂ ನೀಡುತ್ತಿದೆ. ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಿದೆ. ಈ ಹೊಸ ಫೀಚರ್ ನ ಬಗ್ಗೆ ಮಾಹಿತಿ ತಿಳಿಯೋಣ.

WhatsApp Chat List New Design
Image Source: Gudgets Now

ವಾಟ್ಸಾಪ್ ಸೆಟಿಂಗ್ಸ್ ನ ಚಾಟ್ ಲಿಸ್ಟ್ ನಲ್ಲಿ ಬದಲಾವಣೆ
ಈಗಾಗಲೇ ವಾಟ್ಸಾಪ್ ಹತ್ತು ಹಲವು ಹೊಸ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರು ಹೊಸ ಹೊಸ ಫೀಚರ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಇದೀಗ ವಾಟ್ಸಾಪ್ ಅನ್ನು ಹೊಸದಾಗಿ ಮಾಡಲು ಕಂಪನಿ ಯೋಜನೆ ಹೂಡಿದೆ.

ವಾಟ್ಸಾಪ್ ನ ಸೆಟ್ಟಿಂಗ್ಸ್ (WhatsApp Setting) ನಲ್ಲಿ ಬದಲಾವಣೆ ತರಲು ಮುಂದಾಗಿದೆ. ವಾಟ್ಸಾಪ್ ನ ಚಾಟಿಂಗ್ ಲಿಸ್ಟ್ (WhatsApp Chatting List) ನಲ್ಲಿ ಹೊಸ ಮಾದರಿಯನ್ನು ತರಲು ವಾಟ್ಸಪ್ ನಿರ್ಧರಿಸಿದೆ. ಮೊದಲಿಗೆ IOS ಬಳಕೆದಾದರಿಗೆ ಈ ಆಯ್ಕೆ ಸಿಗಲಿದೆ.

WhatsApp Chat List New Design
Image Source: India Today

ಫೇಸ್ ಬುಕ್ ನಲ್ಲಿ ವಾಟ್ಸಾಪ್ ಸ್ಟೇಟಸ್
ಫೇಸ್ ಬುಕ್ ಹಾಗೂ ವಾಟ್ಸಾಪ್ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿದೆ. ಇದೀಗ ವಾಟ್ಸಾಪ್ ಹಾಗು ಫೇಸ್ ಬುಕ್ ನಲ್ಲಿ ಹೊಸ ನವೀಕರಣ ಬಂದಿದೆ. ಹಾಗೆಯೆ ಇನ್ನುಮುಂದೆ ನಿಮ್ಮ ವಾಟ್ಸಾಪ್ ಹಾಗೂ ಫೇಸ್ ಬುಕ್ ಸ್ಟೋರಿಗಳು ಒಂದೇ ಆಗಿರಲು ಇದೀಗ ವಾಟ್ಸಾಪ್ ನಲ್ಲಿ ಹೊಸ ಅಪ್ಡೇಟ್ ಬಂದಿದೆ. ಇನ್ನುಮುಂದೆ ಫೇಸ್ ಬುಕ್ ನಲ್ಲಿ ನಿಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ಕೂಡ ಸ್ಟೋರಿ ಆಗಿ ಮಾಡಿಕೊಳ್ಳಬಹುದು.

Join Nadunudi News WhatsApp Group

WhatsApp Chat List New Design
Image Source: Tv9

ವಾಟ್ಸಾಪ್ ನಲ್ಲಿ ಚಾಟಿಂಗ್ ಲಾಕ್ ಫೀಚರ್
ವಾಟ್ಸಾಪ್ ನಲ್ಲಿ ಇನ್ನು ಸಾಕಷ್ಟು ಅಪ್ಡೇಟ್ ಗಳು ಬಿಡುಗಡೆಯಾಗಿದೆ. ವಾಟ್ಸಾಪ್ ಬಳಕೆದಾರರ ಚಾಟಿಂಗ್ ನಲ್ಲಿ ಇನ್ನು ಮುಂದೆ ಗೌಪ್ಯತೆ ಕಾಪಾಡುವ ದ್ರಷ್ಟಿಯಲ್ಲಿ ಚಾಟಿಂಗ್ ಲಾಕ್ ಫೀಚರ್ ಕೂಡ ಬರಲಿದೆ. ಹಾಗೆಯೆ ವಾಟ್ಸಾಪ್ ಸ್ಟೇಟಸ್ ನಲ್ಲಿ ಕೂಡ ಅನೇಕ ಬದಲಾವಣೆಗಳು ಆಗಿವೆ. ಇನ್ನು ಮುಂದೆ ವಾಟ್ಸಾಪ್ ಸ್ಟೇಟಸ್ ನಲ್ಲಿ ಫೋಟೋ, ವಿಡಿಯೋದ ಜೊತೆಗೆ ವಾಯ್ಸ್ ರೆಕಾರ್ಡ್ ಅನ್ನು ಕೂಡ ಹಾಕಬಹುದಾಗಿದೆ.

WhatsApp Chat List New Design
Image Source: GIZBOT

Join Nadunudi News WhatsApp Group