WhatsApp: ಈಗ ಒಂದು ವಾಟ್ಸಾಪ್ ಎರಡು ಮೊಬೈಲ್ ನಲ್ಲಿ ಬಳಸಬಹುದು, ಹೊಸ ಫೀಚರ್ ಬಿಡುಗಡೆ.

ಈಗ ಒಂದು ವಾಟ್ಸಾಪ್ ಅನ್ನು ಎರಡು ಮೊಬೈಲ್ ನಲ್ಲಿ ಬಳಸಬಹುದಾದದ ಹೊಸ ಫೀಚರ್ ಜಾರಿಗೆ ಬಂದಿದೆ.

WhatsApp Companion Mode Feature: ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ (WhatsApp) ಇದೀಗ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರಿಗಾಗಿ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸಿದೆ.

ಇದೀಗ ವಾಟ್ಸಾಪ್ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇನ್ನುಮುಂದೆ ನೀವು ನಿಮ್ಮ ವಾಟ್ಸಾಪ್ ಅಕೌಂಟ್ ಅನ್ನು ಒಂದಕ್ಕಿಂತ ಹೆಚ್ಚಿನ ಡಿವೈಸ್ ಗಳಲ್ಲಿ ಉಪಯೋಗಿಸುವಂತೆ ಹೊಸ ಫೀಚರ್ ಅನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ವಾಟ್ಸಾಪ್ ನ ಈ ಹೊಸ ಫೀಚರ್ ಬಗ್ಗೆ ಮಾಹಿತಿ ತಿಳಿಯೋಣ.

WhatsApp Companion Mode Feature
Image Source: Gadget

ವಾಟ್ಸಾಪ್ ನಲ್ಲಿ ಹೊಸ ಫೀಚರ್
ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ ಗಳನ್ನೂ ಪರಿಚಯಿಸಿದೆ. ಇನ್ನು ವಾಟ್ಸಪ್ ತನ್ನ ಚಾಟಿಂಗ್ ಸಿಸ್ಟಮ್ ಅಲ್ಲಿ ಕೂಡ ಬದಲಾವಣೆಯನ್ನು ತಂದಿದೆ. ವಾಟ್ಸಾಪ್ ಸ್ಟೇಟಸ್ ನಲ್ಲಿ ಕೂಡ ಹೊಸ ಹೊಸ ಫೀಚರ್ ಗಳು ಬಂದಿವೆ. ಇದೀಗ ವಾಟ್ಸಾಪ್ ನಲ್ಲಿ ಕಂಪ್ಯಾನಿಯನ್ ಮೋಡ್ ಎನ್ನುವ ಹೊಸ ಫೀಚರ್ ಬಿಡುಗಡೆಗೊಳ್ಳಲಿದೆ. ವಾಟ್ಸಾಪ್ ನ ಈ ಹೊಸ ಫೀಚರ್ ಬಗ್ಗೆ ಮಾಹಿತಿ ತಿಳಿಯೋಣ.

WhatsApp Companion Mode Feature
Image Source: Youtube

ವಾಟ್ಸಾಪ್ ಕಂಪ್ಯಾನಿಯನ್ ಮೋಡ್ ಫೀಚರ್ (WhatsApp Companion Mode Feature) 
ವಾಟ್ಸಾಪ್ ಇದೀಗ ಕಂಪ್ಯಾನಿಯನ್ ಮೋಡ್ ಅನ್ನು ಪರಿಚಯಿಸಿದೆ. ಈ ಫೀಚರ್ ನಿಂದಾಗಿ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್ ಗಳಲ್ಲಿ ವಾಟ್ಸಾಪ್ ಅನ್ನು ಬಳಸಬಹುದು. ಇದೀಗ ವಾಟ್ಸಾಪ್ ಬಳಕೆದಾರರು ಒಂದಕ್ಕಿಂತ ಹೆಚ್ಚಿನ ಸ್ಮಾರ್ಟ್ ಫೋನ್ ನಲ್ಲಿ ಒಂದೇ ಅಕೌಂಟ್ ಅನ್ನು ಬಳಸಬಹುದು.

ಈಗಾಗಲೇ ವಾಟ್ಸಾಪ್ ಮೆಟಾ ಅಪ್ಲಿಕೇಶನ್ ನಲ್ಲಿ ಈ ಫೀಚರ್ ಬಿಡುಗಡೆಯಲ್ಲಿದೆ. ಈ ಹೊಸ ವೈಶಿಷ್ಟ್ಯವನ್ನು ಪಡೆಯಲು ನೀವು ವಾಟ್ಸಾಪ್ ನ ಹೊಸ ಆವೃತ್ತಿಯನ್ನು ಪಡೆಯಬೇಕು. ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್ ಗಳಲ್ಲಿ ವಾಟ್ಸಾಪ್ ಅನ್ನು ಬಳಸಲು ಬಳಕೆದಾರರು QR ಕೋಡ್ ಅನ್ನು ಸ್ಕಾನ್ ಮಾಡಬೇಕಾಗುತ್ತದೆ.

Join Nadunudi News WhatsApp Group

WhatsApp Companion Mode Feature
Image Source: ABP news

Join Nadunudi News WhatsApp Group