Whatsapp Paid: ವಾಟ್ಸಾಪ್ ಬಳಸುವವರು ಇನ್ನುಮುಂದೆ ಈ ಸೌಲಭ್ಯ ಬಳಸಲು ಶುಲ್ಕ ಕಟ್ಟಬೇಕು, ಇನ್ಮುಂದೆ ವಾಟ್ಸಾಪ್ ಉಚಿತವಲ್ಲ

ಇನ್ನು ಮುಂದೆ ವಾಟ್ಸಪ್ ನ ಈ ಕೆಲಸಕ್ಕೆ ಹಣ ಪಾವತಿಸುವುದು ಅವಶ್ಯಕ ಆಗಿದೆ

Fee For Whatsapp Data Backup In Google Drive: ಮೆಟಾ (Meta) ಮಾಲೀಕತ್ವದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸಪ್ (WhatsApp) ತನ್ನ ಬಳಕೆದಾರರ ಸಹಾಯಕ್ಕಾಗಿ ಹಲವು ಫೀಚರ್ಸ್ ಗಳನ್ನೂ ಈಗಾಗಲೇ ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿ ವಾಟ್ಸಪ್ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

ಆದರೆ ಈಗ ವಾಟ್ಸಪ್ ಬಳಕೆದಾರರಿಗೆ ಒಂದು ಶಾಕಿಂಗ್ ಮಾಹಿತಿಯನ್ನು ನೀಡಿದೆ. ಅದೇನೆಂದರೆ ಮುಂದಿನ ವರ್ಷದಿಂದ ಗೂಗಲ್ ಡ್ರೈವ್‌ನಲ್ಲಿ ಉಚಿತ ಅನಿಯಮಿತ ಬ್ಯಾಕಪ್‌ಗಳನ್ನು ನೀಡುವುದಿಲ್ಲ ಎಂದು ಹೇಳಿದೆ. ಪ್ರಸ್ತುತ, ಆಂಡ್ರಾಯ್ಡ್ ವಾಟ್ಸಪ್​ ಬಳಕೆದಾರರು ತಮ್ಮ ಚಾಟ್ ಬ್ಯಾಕಪ್ ಡೇಟಾವನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಈ ಸೇವೆಗಳು ಪ್ರಸ್ತುತ ಉಚಿತವಾಗಿದೆ. ಆದರೆ ಇನ್ನುಮುಂದೆ ಈ ಸೌಲಭ್ಯ ಸಿಗದು ಎನ್ನಲಾಗಿದೆ.

Whatsapp Chat Backup Fee
Image Credit: pcmag

ಗೂಗಲ್ ಡ್ರೈವ್‌ನಲ್ಲಿ ಉಚಿತ ಅನಿಯಮಿತ ಬ್ಯಾಕಪ್‌ಗಳು ದೊರೆಯದು

ವಾಟ್ಸಪ್ ಇನ್ನು ಮುಂದೆ ಬ್ಯಾಕ್‌ ಅಪ್‌ ಸೀಮಿತ ಸಂಗ್ರಹಣೆ ಕೋಟಾವನ್ನು ಮಾತ್ರ ಪಡೆಯುತ್ತವೆ. ಗೂಗಲ್ ಡ್ರೈವ್‌ನಲ್ಲಿ ಒದಗಿಸಲಾದ 15GB ಸಂಗ್ರಹದ ಮಿತಿಯನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಸ್ಟೋರೇಜ್ ಹೆಚ್ಚಿಸಬೇಕಾದರೆ ಹಣ ಕೊಡಬೇಕು. ಚಾಟ್ ಬ್ಯಾಕ್‌ಅಪ್‌ಗಳಿಗಾಗಿ ಗೂಗಲ್ ಡ್ರೈವ್‌ನಲ್ಲಿ ಜಾಗವನ್ನು ನಿಗದಿಪಡಿಸುವ ನಿಯಮವು 2024 ರ ಆರಂಭದಿಂದ ಜಾರಿಗೆ ಬರಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿ 2.23.26.7 ರಲ್ಲಿ ಇದರ ಬಗ್ಗೆ ಮಾಹಿತಿ ನೀಡಲಾಗಿದೆ.

Whatsapp Data Backup In Google Drive
Image Credit: Kaspersky

ಹೆಚ್ಚುವರಿ ಸಂಗ್ರಹಣೆಗಾಗಿ ಪಾವತಿಸಬೇಕಾಗುತ್ತದೆ

Join Nadunudi News WhatsApp Group

ಗೂಗಲ್ ಡ್ರೈವ್‌ ನಲ್ಲಿನ ವಾಟ್ಸಪ್​ ಬ್ಯಾಕಪ್‌ಗಳು ಇನ್ನುಮುಂದೆ ಅನಿಯಮಿತ ಸಂಗ್ರಹಣೆಯನ್ನು ಉಚಿತವಾಗಿ ನೀಡುವುದಿಲ್ಲ ಎಂದು ಹೇಳಿದೆ. ಹೆಚ್ಚುವರಿ ಸಂಗ್ರಹಣೆಗಾಗಿ ನೀವು ಪಾವತಿಸಬೇಕಾಗುತ್ತದೆ. ಬಳಕೆದಾರರು ಎಷ್ಟು ಸ್ಟೋರೇಜ್ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ವಾಟ್ಸಪ್​ ಸೆಟ್ಟಿಂಗ್‌ ಗಳಲ್ಲಿ ಸ್ಟೋರೇಜ್ ಆಯ್ಕೆಯನ್ನು ಪರಿಶೀಲಿಸಬಹುದು. ಚಾಟ್ ಬ್ಯಾಕಪ್ ಸಂಗ್ರಹಣೆಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕುರಿತು ವಾಟ್ಸಪ್​ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆ .

Join Nadunudi News WhatsApp Group