WhatsApp Hack: ವಾಟ್ಸಾಪ್ ಚಾಟ್ ಮಾಡುವವರಿಗೆ ಎಚ್ಚರಿಕೆ, ಈ ಸೆಟ್ಟಿಂಗ್ ಮಾಡದಿದ್ದರೆ ಹ್ಯಾಕ್ ಆಗಲಿದೆ ನಿಮ್ಮ ವಾಟ್ಸಾಪ್.

ವಾಟ್ಸಾಪ್ ಬಳಸುವವರು ಈ ಸೆಟ್ಟಿಂಗ್ ಮಾಡದಿದ್ದರೆ ವಾಟ್ಸಾಪ್ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಿದೆ

WhatsApp Two Step Verification: ಇತ್ತೀಚೆಗಂತೂ ವಾಟ್ಸಾಪ್ (WhatsApp) ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದು. ಮಿಲಿಯನ್ ನಷ್ಟು ಜನರು ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ. ಇನ್ನು ಈ ವಾಟ್ಸಾಪ್ ಬಳಕೆಯು ಕೆಲವೊಮ್ಮೆ ಅಪಾಯವನ್ನು ಕೂಡ ತಂದೊಡ್ಡುತ್ತದೆ ಎನ್ನುವುದರ ಬಗ್ಗೆ ನಿಮಗೆ ಅರಿವಿರಲಿ.

ಈಗಂತೂ ತಂತ್ರಜ್ಞಾನಗಳ ಬೆಳವಣಿಗೆ ಹೆಚ್ಚಾಗಿದೆ. ತಂತ್ರಜ್ಞಾನಗಳ ಬೆಳವಣಿಗೆ ಜೊತೆಗೆ ಹ್ಯಾಕರ್ ಗಳ ಹಾವಳಿ ಕೂಡ ಹೆಚ್ಚುತ್ತಿದೆ. ಮುಖ್ಯವಾಗಿ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಹ್ಯಾಕಿಂಗ್ ಪ್ರೋಸೆಸ್ ಇತ್ತೀಚಿಗೆ ಹೆಚ್ಚುತ್ತಿದೆ. ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಆಗುವುದರಿಂದ ತಪ್ಪಿಸಿಕೊಳ್ಳಬಹುದು. ನಿಮ್ಮ ವಾಟ್ಸಾಪ್ ಹ್ಯಾಕ್ ಆಗದೆ ಇರವು ನೀವು ಒಂದು ಸೆಟಿಂಗ್ ಮಾಡುವ ಅಗತ್ಯವಾಯಿದೆ.

WhatsApp Multi Account Feature
Image Credit: Techgup

ವಾಟ್ಸಾಪ್ ಚಾಟ್ ಮಾಡುವವರಿಗೆ ಎಚ್ಚರಿಕೆ
ನಮ್ಮ ಮೊಬೈಲ್ ಸಾಧನವನ್ನು ಸುರಕ್ಷಿತವಾಗಿರಿಸಲು ನಾವು ಸ್ಕ್ರೀನ್ ಲಾಕ್ ಪಿನ್ ಅನ್ನು ಅಳವಡಿಸಿರುತ್ತೇವೆ. ಅದರಂತೆಯೇ ಗೌಪ್ಯತೆಯ ಸುರಕ್ಷತೆಗಾಗಿ ನೀವು ನಿಮ್ಮ WhatsApp ಖಾತೆಗೆ PIN ಅನ್ನು ಸಹ ಹೊಂದಿಸಬಹುದು. ವಾಸ್ತವವಾಗಿ WhatsApp PIN ಅನ್ನು ಹೊಂದಿಸಲು ಎರಡು ಮಾರ್ಗಗಳಿವೆ, ಮೊದಲನೆಯದು ನಿಮ್ಮ WhatsApp ಖಾತೆಗೆ PIN ಅನ್ನು ಹೊಂದಿಸುವುದು. ಇದಲ್ಲದೆ ನಿಮ್ಮ WhatsApp ಖಾತೆಯನ್ನು ತೆರೆದ ತಕ್ಷಣ ಸಂದೇಶವನ್ನು (SMS) ಸ್ವೀಕರಿಸಲು ಹೊಂದಿಸುವುದನ್ನು ಎರಡು-ಹಂತದ ಪರಿಶೀಲನೆ (Two Step Verification) ಎಂದು ಕರೆಯಲಾಗುತ್ತದೆ.

WhatsApp New Update
Image Credit: Ladbible

ಈ ಸೆಟ್ಟಿಂಗ್ ಮಾಡದಿದ್ದರೆ ಹ್ಯಾಕ್ ಆಗಲಿದೆ ನಿಮ್ಮ ವಾಟ್ಸಾಪ್
•ನಿಮ್ಮ WhatsApp ನಲ್ಲಿ ಪಿನ್ ರಚಿಸಲು ಮೊದಲು ನಿಮ್ಮ WhatsApp ಖಾತೆಯನ್ನು ತೆರೆಯಿರಿ ಮತ್ತು ಸೆಟ್ಟಿಂಗ್‌ ಗಳ ಆಯ್ಕೆಗೆ ಹೋಗಿ. ಇಲ್ಲಿ Account ಆಯ್ಕೆಯನ್ನು ಟ್ಯಾಪ್ ಮಾಡಿ ನಂತರ “ಎರಡು-ಹಂತದ ಪರಿಶೀಲನೆ” ಆಯ್ಕೆಮಾಡಿ. ಅದರಲ್ಲಿ “ಸಕ್ರಿಯಗೊಳಿಸು” ಆಯ್ಕೆಯನ್ನು ಆರಿಸಿ, ಆರು-ಅಂಕಿಯ PIN ಅನ್ನು ರಚಿಸಿ ಮತ್ತು ಖಚಿತಪಡಿಸಲು ಅದನ್ನು ಮರು-ನಮೂದಿಸಿ.

•ನೀವು ಪಿನ್ ಮರೆಯಬಹುದು ಎಂಬ ಅನುಮಾನವಿದ್ದರೆ ಪಿನ್ ಹಿಂಪಡೆಯಲು ಅಥವಾ ಮರುಹೊಂದಿಸಲು ಇಮೇಲ್ ವಿಳಾಸವನ್ನು ಕೂಡ ಸೇರಿಸಬಹುದು. ನೀವು ಇಮೇಲ್ ಸೇರಿಸಲು ಬಯಸದಿದ್ದರೆ, “ಸ್ಕಿಪ್” ಟ್ಯಾಪ್ ಮಾಡಬಹುದು.

Join Nadunudi News WhatsApp Group

•ನಂತರ ನೀವು ನಿಮ್ಮ WhatsApp ಖಾತೆಯಲ್ಲಿ ಎರಡು-ಹಂತದ ಪರಿಶೀಲನೆಯನ್ನು ಆನ್ ಮಾಡಲು ನಿಗದಿತ ಆಯ್ಕೆಯನ್ನು ಆರಿಸಿಕೊಳ್ಳಿ. ಈ ಆಯ್ಕೆಯನ್ನು ಆಯ್ಕೆ ಮಾಡಿದ ನಂತರ ನೀವು ಯಾವುದೇ ಹೊಸ ಫೋನ್‌ ನಲ್ಲಿ ನಿಮ್ಮ WhatsApp ಸಂಖ್ಯೆಯನ್ನು ನಮೂದಿಸಿದಾಗ SMS ಪರಿಶೀಲನೆ ಕೋಡ್ ಜೊತೆಗೆ ಈ ಆರು-ಅಂಕಿಯ PIN ಅನ್ನು ನಮೂದಿಸಬೇಕಾಗುತ್ತದೆ.

Join Nadunudi News WhatsApp Group