Meta In India: ವಾಟ್ಸಾಪ್ ಜೊತೆಗೆ Facebook ಮತ್ತು Instagram ಭಾರತದಲ್ಲಿ ಬಂದ್ ಆಗಲಿದೆ, ಆತಂಕದಲ್ಲಿ ಜನರು

ಭಾರತದಲ್ಲಿ ಬಂದ್ ಆಗುವ ಭೀತಿಯಲ್ಲಿ ವಾಟ್ಸಾಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್

WhatsApp Ban In India: ಸದ್ಯ ದೇಶದಲ್ಲಿ ಇದೀಗ ವಾಟ್ಸಾಪ್ ಬ್ಯಾನ್ ಆಗುವ ಭೀತಿಯಲ್ಲಿದೆ. ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಬ್ಯಾನ್ ಆದರೆ ಸಾಕಷ್ಟು ನಷ್ಟವಾಗಲಿದೆ. ಹಲವು ಕಾರಣದಿಂದ ಭಾರತದಲ್ಲಿ ವಾಟ್ಸಾಪ್ ಬ್ಯಾನ್ ಆಗುವ ಸಾಧ್ಯತೆ ಹೆಚ್ಚಿದೆ.

ಇದೀಗ ವಾಟ್ಸಾಪ್ ಜೊತೆಗೆ ಇನ್ನಿತರ ಸೋಶಿಯಲ್ ಮೀಡಿಯಾ ಆಪ್ ಗಳು ಕೂಡ ಬ್ಯಾನ್ ಆಗುವ ಭೀತಿಯನ್ನು ಎದುರಿಸುವಂತಾಗಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಕೂಡ ಬ್ಯಾನ್ ನ ಭೀತಿಯನ್ನು ಎದುರಿಸುತ್ತಿದೆ. ಇನ್ನು ಸೋಶಿಯಲ್ ಮೀಡಿಯಾ App ಗಳು ದಿಢೀರ್ ಬ್ಯಾನ್ ಗೆ ಕಾರಣ ಏನಿರಬಹುದು ಎನ್ನುವುದು ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.

WhatsApp Latest News
Image Credit: Theverge

ವಾಟ್ಸಾಪ್ ನ ಜೊತೆಗೆ ಈ ಆಪ್ ಗಳು ಕೂಡ ಬ್ಯಾನ್ ಆಗಲಿದೆಯೇ…?
ಐಟಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ವಾಟ್ಸಾಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಭೇದಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ವಿಷಯದಲ್ಲಿ ಒತ್ತಡ ಹೇರಿದರೆ ದೇಶ ತೊರೆಯುವುದಾಗಿ (ಎಕ್ಸಿಟ್ ಇಂಡಿಯಾ) ವಾಟ್ಸಾಪ್ ಬೆದರಿಕೆ ಹಾಕಿದೆ. ಇದರೊಂದಿಗೆ ಅದೇ ಕಂಪನಿಗೆ ಸೇರಿದ ಫೇಸ್‌ ಬುಕ್ ಮತ್ತು ಇನ್‌ ಸ್ಟಾಗ್ರಾಮ್ ಕೂಡ ದೇಶವನ್ನು ತೊರೆಯಬಹುದು.

WhatsApp, Facebook ಮತ್ತು Instagram ಪ್ರಪಂಚದಾದ್ಯಂತದ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗಿವೆ. ಇದು ಜನರ ನಡುವಿನ ಸಂವಹನಕ್ಕೆ ಮಾತ್ರವಲ್ಲದೆ ಅನೇಕ ಅಧಿಕೃತ ಮತ್ತು ಕಚೇರಿ ಕೆಲಸಗಳಿಗೂ ಉತ್ತಮ ಮಾಧ್ಯಮವಾಗಿದೆ. ಆದರೆ ಮೆಟಾ ಒಡೆತನದ ವಾಟ್ಸಾಪ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಭಾರತ ಬಿಟ್ಟು ಹೋಗಬಹುದು ಎಂಬ ವರದಿಗಳಿವೆ. ಇದರ ಹಿಂದಿನ ಕಾರಣ ಎಂಡ್-ಟು-ಎಂಡ್ ಎನ್‌ ಕ್ರಿಪ್ಶನ್ ಗೌಪ್ಯತೆ ವೈಶಿಷ್ಟ್ಯವಾಗಿದೆ. ಇದು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನಿಯಮಗಳು 2021 ಗೆ ವಿರುದ್ಧವಾಗಿದೆ.

WhatsApp Ban In India
Image Credit: ABP Live

Facebook ಮತ್ತು Instagram ಕೂಡ ಬ್ಯಾನ್ ಆಗುತ್ತಾ…!
WhatsApp ಪ್ರಕಾರ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವೈಶಿಷ್ಟ್ಯವನ್ನು ತೆಗೆದುಹಾಕಲು ಭಾರತ ಸರ್ಕಾರದಿಂದ ಒತ್ತಡವಿದ್ದರೆ, ಅದು ಖಂಡಿತವಾಗಿಯೂ ಭಾರತಕ್ಕೆ ವಿದಾಯ ಹೇಳುತ್ತದೆ. ಐಟಿ ನಿಯಮಗಳು 2021 ರ ನಿಯಮ 4(2) ರ ಅಡಿಯಲ್ಲಿ ಭಾರತ ಸರ್ಕಾರ ಮತ್ತು WhatsApp ನಡುವೆ ಸಮರ ನಡೆಯುತ್ತಿದೆ.

Join Nadunudi News WhatsApp Group

ಈ ನಿಯಮದ ಪ್ರಕಾರ, WhatsApp ಪ್ಲಾಟ್‌ ಫಾರ್ಮ್ ನಿರ್ದಿಷ್ಟ ಸಂದೇಶದ ಮೂಲವನ್ನು ಬಹಿರಂಗಪಡಿಸಬೇಕಾಗುತ್ತದೆ. ಮೆಟಾ ಭಾರತದ ಐಟಿ ನಿಯಮಾವಳಿಗಳು- 2021 ಗೆ ಸವಾಲು ಹಾಕಿದೆ. ಈ ನಿಟ್ಟಿನಲ್ಲಿ, ನ್ಯಾಯಾಲಯದಲ್ಲಿ ವೈರಲ್ ಸುದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮ ಕೈಗೊಂಡಿರುವುದಾಗಿ WhatsApp ಹೇಳಿದೆ. ಅದಾಗ್ಯೂ, ಬಳಕೆದಾರರ ಗೌಪ್ಯತೆಯ ಹಕ್ಕಿನ ಅಡಿಯಲ್ಲಿ ಕಂಪನಿಯು ಅದರ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ತೆಗೆದುಹಾಕಲು ಸಾಧ್ಯವಿಲ್ಲ ಎಂದಿದೆ.

WhatsApp Ban
Image Credit: Timesnownews

Join Nadunudi News WhatsApp Group