WhatsApp New Feature: ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವವರಿಗೆ ಬಿಗ್ ಅಪ್ಡೇಟ್, ಇನ್ಮುಂದೆ ಬರಲಿದೆ ನೋಟಿಫಿಕೇಶನ್

ವಾಟ್ಸಾಪ್ ನಲ್ಲಿ Mention Feature ಬಿಡುಗಡೆ, ಸ್ಟೇಟಸ್ ಹಾಕುವವರಿಗೆ ಬಿಗ್ ಅಪ್ಡೇಟ್

WhatsApp Mention Feature Update: ದೇಶದಲ್ಲಿ ಮೆಟಾ ಮಾಲೀಕತ್ವದ WhatsApp ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಬಳಕೆದಾರರಿಗೆ ಹೊಸ ಹೊಸ ಫೀಚರ್ ಅನ್ನು ನೀಡುವ ಮೂಲಕ ಗ್ರಾಹಕರನ್ನು ಇನ್ನಷ್ಟು ಸೆಳೆಯುತ್ತಿದೆ.ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್ ಅನ್ನು ಬಳಸುವುದು ಸಹಜ. ವಾಟ್ಸಾಪ್ ಬಳಸದೆ ಕೆಲವರ ದಿನ ಆರಂಭವಾಗುವುದಿಲ್ಲ ಎಂದರೆ ತಪ್ಪಾಗಲಾರದು.

ಇನ್ನು ಈ ಹಿಂದೆ ಬಳಸುತ್ತಿದ್ದಂತಹ ವಾಟ್ಸಾಪ್ ಗು ನಾವು ಈಗ ಬಳಸುತ್ತಿರುವ ವಾಟ್ಸಾಪ್ ಗು ಬಹಳ ವ್ಯತ್ಯಾಸವಿದೆ. ವಾಟ್ಸಾಪ್ ಸಂಪೂರ್ಣವಾಗಿ ಬದಲಾಗಿದೆ ಎಂದರೆ ತಪ್ಪಾಗಲಾರದು. Whatsapp Chatting ನಿಂದ ಹಿಡಿದು WhatsApp Status ನಲ್ಲಿ ಕೂಡ ಸಂಪೂರ್ಣ ಬದಲಾವಣೆ ಆಗಿದೆ. ಸದ್ಯ ಮೆಟಾ ಮಾಲೀಕತ್ವದ WhatsApp Status ನಲ್ಲಿ ಹೊಸ ಅಪ್ಡೇಟ್ ಅನ್ನು ಪರಿಚಯಿಸಿದೆ. Privacy Status Upload ಮಾಡುವವರಿಗೆ ಈ ನೂತನ ಫೀಚರ್ ಸಾಕಷ್ಟು ಸಹಾಯವಾಗಲಿದೆ.

WhatsApp Mention Feature
Image Credit: India Today

WhatsApp Status ನಲ್ಲಿ ಇನ್ನೊಂದು ಬಿಗ್ ಅಪ್ಡೇಟ್
ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದರೆ ಅದು 24 ಗಂಟೆಗಳ ಬಳಿಕ ಕ್ಯಾನ್ಸಲ್ ಆಗುತ್ತದೆ. ಈ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಅನೇಕ ರೀತಿಯ ವೈಶಿಷ್ಟ್ಯಗಳು ಇವೆ. ಸ್ಟೇಟಸ್ ಅಪ್ಲೋಡ್ ಮಾಡುವಾಗ ಯಾರಿಗೆ ಮಾತ್ರ ಸ್ಟೇಟಸ್ ಹಾಕಬೇಕು ಎನ್ನುವ ಆಯ್ಕೆಯ ಬಳಕೆದಾರರಿಗೆ ಸಿಗುತ್ತದೆ. ಇನ್ನು ಕೆಲವೊಂದು ಸಮಯದಲ್ಲಿ ಬಳಕೆದಾರರು ತಮಗೆ ಬೇಕಾದ ವ್ಯಕ್ತಿಗಳಿಗೆ ಮಾತ್ರ ಸ್ಟೇಟಸ್ ಅನ್ನು ಹಾಕಲು ಬಯಸುತ್ತಾರೆ.

ಈ ಸಮಯದಲ್ಲಿ ನಾವು ಯಾರಿಗೆ ಸ್ಟೇಟಸ್ ಹಾಕಲು ಬಯಸುತ್ತೀರೋ ಅವರನ್ನು ಬಿಟ್ಟು ಬೇರೆಯವರನ್ನು ಹೈಡ್ ಮಾಡಬೇಕಾಗುತ್ತದೆ. ಇನ್ನು ನೀವು ಯಾರು ನೋಡಬೇಕು ಎಂದು ಸ್ಟೇಟಸ್ ಹಾಕಿರುತ್ತಿರೋ ಅವರು ನೋಡದೆ ಇದ್ದಾಗ ವಾಟ್ಸಾಪ್ ಸ್ಟೇಟಸ್ ಅವಧಿ ಕೇವಲ 24 ಗಂಟೆ ಆಗಿದ್ದರಿಂದ ಅದು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತದೆ. ಆದರೆ ಇನ್ನುಮುಂದೆ ಈ ಸಮಸ್ಯೆ ಎದುರಾಗುವುದಿಲ್ಲ. ಕಾರಣ ಇದಕ್ಕಾಗಿ ಹೊಸ ಫೀಚರ್ ಪರಿಚಯವಾಗಿದೆ.

WhatsApp Mention Feature Update
Image Credit: Techrafiki

ವಾಟ್ಸಾಪ್ ನಲ್ಲಿ Mention Feature ಬಿಡುಗಡೆ
ಇನ್ನುಮುಂದೆ ನೀವು ಯಾರಿಗೆ ಪ್ರತ್ಯೇಕವಾಗಿ ಸ್ಟೇಟಸ್ ಅನ್ನು ಹಾಕುತ್ತಿರೋ ಅವರಿಗೆ ನೋಟಿಫಿಕೇಶನ್ ತಲುಪುತ್ತದೆ. ನೀವು ನಿಮ್ಮ ಸ್ಟೇಟಸ್ ಅನ್ನು ಪೋಸ್ಟ್ ಮಾಡುವಾಗ ನೀವು ನಮೂದಿಸುವ ಸಂಪರ್ಕವು ತಕ್ಷಣವೇ ನೋಟಿಫಿಕೇಶನ್ ಅನ್ನು ಸ್ವೀಕರಿಸುತ್ತದೆ.

Join Nadunudi News WhatsApp Group

ಈ ಮೂಲಕ ಅವರು ನಿಮ್ಮ ಸ್ಟೇಟಸ್ ಅನ್ನು ನೋಡಲು ಸಹಾಯವಾಗುತ್ತದೆ. ಇನ್ನುಮುಂದೆ ನೀವು ಸ್ಟೇಟಸ್ ಹಾಕಿದರೆ ಅವರು ನೋಡಿದ್ದರೋ ಇಲ್ಲವೋ ಎಂದು ಪದೇ ಪದೇ ವ್ಯುವ್ ಚೆಕ್ ಮಾಡುವ ಅಗತ್ಯ ಇರುವಿಲ್ಲ. ಯಾರು ನೋಡಿದ್ದಾರೆ ಎನ್ನುವ ಬಗ್ಗೆ ವಾಟ್ಸಾಪ್ ನಿಮಗೆ ನೋಟಿಫಿಕೇಶನ್ ಕಳುಹಿಸುತ್ತದೆ.

WhatsApp New Feature Update
Image Credit: Beebom

Join Nadunudi News WhatsApp Group