WhatsApp AI Feature: ವಾಟ್ಸಾಪ್ ಬಳಸುವವರಿಗೆ ಬಂತು ಅದ್ಭುತ ಫೀಚರ್, ತಕ್ಷಣ ಈ ಕೆಲಸ ಮಾಡಿ.

ವಾಟ್ಸಾಪ್ ಬಳಸುವವರಿಗೆ ಬಂತು ಅದ್ಭುತ ಫೀಚರ್

WhatsApp New AI Feature: ವಿಶ್ವದೆಲ್ಲೆಡೆ WhatsApp ಅನ್ನು ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್ ಅನ್ನು ಬಳಸುತ್ತಾರೆ ಎಂದರೆ ತಪ್ಪಾಗಲಾರದು. ಈಗಂತೂ ಮೆಟಾ ಮಾಲೀಕತ್ವದ ವಾಟ್ಸಾಪ್ ಬಳಕೆದಾರರಿಗೆ ಹೆಚ್ಚಿನ ಫೀಚರ್ ಅನ್ನು ನೀಡುತ್ತಿದೆ. ಬಳಕೆದಾರರು ವಾಟ್ಸಾಪ್ ಪರಿಚಯಿಸಿರುವ ಎಲ್ಲ ಫೀಚರ್ ಗಳ ಲಾಭವನ್ನು ಪಡೆಯುತ್ತಿದ್ದಾರೆ.

ಸದ್ಯ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಸೇರಿಕೊಂಡಿದೆ. ನೀವು ಈ ಹೊಸ ಫೀಚರ್ ನ ಮೂಲಕ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ನಾವೀಗ ಮೆಟಾ ಪರಿಚಯಿಸಲಿರುವ ವಾಟ್ಸಾಪ್ ನ ಬಿಗ್ಗೆಸ್ಟ್ ಫೀಚರ್ ನ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಈ ಲೇಖನವನ್ನು ಓದುವ ಮೂಲಕ ವಾಟ್ಸಾಪ್ ನ ಹೊಸ ಫೀಚರ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

WhatsApp New AI Feature
Image Credit: Original Source

ವಾಟ್ಸಾಪ್ ಬಳಸುವವರಿಗೆ ಬಂತು ಅದ್ಭುತ ಫೀಚರ್
ಸದ್ಯ AI ತಂತ್ರಜ್ಞಾನ ಎಷ್ಟರ ಮಟ್ಟಿದೆ ಬೆಳೆದಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸದ್ಯ ಎಲ್ಲದರಲ್ಲೂ ಕೂಡ AI ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇನ್ನು AI ಕ್ಷೇತ್ರವನ್ನು ಈಗಾಗಲೇ ಪ್ರಮುಖ ಟೆಕ್ ತಂತ್ರಜ್ಞಾನಗಳು ಪ್ರವೇಶಿಸಿವೆ ಎನ್ನಬಹುದು. ಗೂಗಲ್ ಮತ್ತು ಆಪಲ್‌ ನಂತಹ ಕಂಪನಿಗಳು AI ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿವೆ. ಪ್ರಸ್ತುತ, AI ಕ್ಷೇತ್ರದಲ್ಲಿ ChatGPT ಮತ್ತು Google Bot ವೇಗವಾಗಿ ಮುನ್ನಡೆಯುತ್ತಿವೆ. ಈ ಸಾಲಿನಲ್ಲಿ ಮೆಟಾ ಕೂಡ ಮುಂದುವರಿಯುತ್ತಿದೆ. ಮೆಟಾ ತನ್ನ ಎಲ್ಲಾ ಪ್ಲಾಟ್‌ ಫಾರ್ಮ್‌ಗ ಳಲ್ಲಿ AI ಪರಿಕರಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ. ಇದರಲ್ಲಿ ವಾಟ್ಸಾಪ್ ಕೂಡ ಇದೆ.

ವಾಟ್ಸಾಪ್ ನಲ್ಲಿ AI ಟೂಲ್ ತರಲು ಇದೀಗ ಮೆಟಾ ಮುಂದಾಗಿದೆ. ಈ ಹೊಸ AI ಉಪಕರಣವು ಬಳಕೆದಾರರಿಗೆ ಅದ್ಭುತ ಅನುಭವವನ್ನು ಒದಗಿಸುತ್ತದೆ. ಪ್ರಸ್ತುತ, ಚಾಟ್ ಜಿಪಿಟಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು WhatsApp AI ನಲ್ಲಿಯೂ ಒದಗಿಸಲಾಗಿದೆ. ಫೋಟೋ ವಿನ್ಯಾಸ ವೈಶಿಷ್ಟ್ಯವನ್ನು AI ಮೂಲಕ WhatsApp ನಲ್ಲಿ ಬಳಸಬಹುದು. ಕೃತಕ ಬುದ್ಧಿಮತ್ತೆಯು ನಿಮ್ಮ ಕಲ್ಪನೆಯ ಯಾವುದೇ ವಿಷಯವನ್ನು ಫೋಟೋವಾಗಿ ಪರಿವರ್ತಿಸಬಹುದು. ಇನ್ನು ಈ ನೂತನ ಫೀಚರ್ ಕೆಲ ವಾಟ್ಸಾಪ್ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಶೀಘ್ರದಲ್ಲೇ ಎಲ್ಲ ಬಳಕೆದಾರರಿಗೂ ಈ ಫೀಚರ್ ಲಭ್ಯವಾಗಲಿದೆ.

WhatsApp New AI Feature
Image Credit: Indiatvnews

ವಾಟ್ಸಾಪ್ ನಲ್ಲಿ AI ಟೂಲ್ ಬಳಸುವುದು ಹೇಗೆ…?
•WhatsApp ನಲ್ಲಿ AI ಟೂಲ್ ಬಳಸಲು, ಬಳಕೆದಾರರು ಮೊದಲು ತಮ್ಮ WhatsApp ಅನ್ನು ನವೀಕರಿಸಬೇಕಾಗುತ್ತದೆ.

Join Nadunudi News WhatsApp Group

•ನಂತರ ನಿಮ್ಮ ಚಾಟ್ ಇಂಟರ್‌ ಫೇಸ್‌ ನ ಮೇಲ್ಭಾಗದಲ್ಲಿ ನೀವು ನೇರಳೆ ಮತ್ತು ನೀಲಿ ಬಣ್ಣದಲ್ಲಿ ವಿಶಿಷ್ಟವಾದ ವೃತ್ತಾಕಾರದ ಐಕಾನ್ ಅನ್ನು ನೋಡುತ್ತೀರಿ.

•ಈ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಮೆಟಾ AI ಅನ್ನು ಪ್ರವೇಶಿಸಬಹುದು.

•ವೈಯಕ್ತಿಕ ಅಥವಾ ಗುಂಪು ಚಾಟ್‌ ಗಳಲ್ಲಿರಲಿ, “@” ನಂತರ “ಮೆಟಾ AI” ಎಂದು ಟೈಪ್ ಮಾಡುವ ಮೂಲಕ ಜನರು ಚಾಟ್ ಬೋಟ್ ಸೇವೆಗಳನ್ನು ಪ್ರವೇಶಿಸಬಹುದು.

Whatsapp New Feature Updates
Image Credit: Indiatvnews

Join Nadunudi News WhatsApp Group