WhatsApp New: ವಾಟ್ಸಪ್ ಬಳಸುವವರಿಗೆ ಇನ್ನೊಂದು ಬಿಗ್ ಅಪ್ಡೇಟ್, 2024 ರ ಇನ್ನೊಂದು ಹೊಸ ಫೀಚರ್ ಲಾಂಚ್.

ವಾಟ್ಸಾಪ್ ಬಳಕೆದಾರರಿಗೆ 2024 ರ ಇನ್ನೊಂದು ಹೊಸ ಫೀಚರ್ ಲಾಂಚ್

WhatsApp New Feature Launch: ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಇತ್ತೀಚಿಗೆ ಅತ್ಯಾಕರ್ಷಕ ಫೀಚರ್ ಅನ್ನು ನೀಡುವ ಮೂಲಕ ಇನ್ನಷ್ಟು ಬಳಕೆದಾರರರನ್ನು ಪಡೆದಿದೆ. ಕಳೆದ ವರ್ಷದಿಂದ ವಾಟ್ಸಾಪ್ ನಿಂದ ಅನೇಕ ಹೊಸ ಹೊಸ ಫೀಚರ್ ಗಳು ಬರುತ್ತಿವೆ. ಹಿಂದಿನ ವಾಟ್ಸಾಪ್ ಗೂ ಈಗಿನ ವಾಟ್ಸಾಪ್ ಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನಬಹುದು.

ವಾಟ್ಸಾಪ್ ಈಗಾಗಲೇ ತನ್ನ ಸಂಪೂರ್ಣ ಚಾಟಿಂಗ್ ಸಿಸ್ಟಮ್ ಅನ್ನು ಬಲಾಯಿಸಿಕೊಂಡಿದೆ ಎನ್ನಬಹುದು. ಇನ್ನು 2024 ರ ಆರಂಭದಿಂದಲೂ ಮೆಟಾ ಹೊಸ ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ. ಸದ್ಯ ವಾಟ್ಸಾಪ್ ನಲ್ಲಿ ಇದೀಗ ಮಗದೊಂದು ಹೊಚ್ಚ ಹೊಸ ಫೀಚರ್ ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ಈ ಹೊಸ ಫೀಚರ್ ನ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

WhatsApp New Feature Launch
Image Credit: Techcrunch

ವಾಟ್ಸಪ್ಪ್ ಬಳಸುವವರಿಗೆ ಇನ್ನೊಂದು ಬಿಗ್ ಅಪ್ಡೇಟ್
ವಾಟ್ಸಾಪ್ ನ ಈ ಹೊಸ ವೈಶಿಷ್ಟ್ಯವು ನಿರ್ದಿಷ್ಟವಾಗಿ ಗುಂಪು ಸಂದೇಶಗಳನ್ನು ಗುರಿಯಾಗಿರಿಸಿಕೊಂಡಿದೆ. ಗುಂಪು ಸಂದೇಶಗಳಲ್ಲಿ ಈವೆಂಟ್‌ ಗಳನ್ನು ಯೋಜಿಸಲು ಈ ಹೊಸ ವೈಶಿಷ್ಟ್ಯವು ಉಪಯುಕ್ತವಾಗಿದೆ. ಈ ವೈಶಿಷ್ಟ್ಯದ ಸಹಾಯದಿಂದ ಗುಂಪಿನ ಸದಸ್ಯರು ಖಾಸಗಿ ಸಭೆಗಳನ್ನು ಹೊಂದಿಸಬಹುದು. ಇಮೇಲ್ ಮೂಲಕ ಆಹ್ವಾನಗಳನ್ನು ಕಳುಹಿಸುವ ವಿವಿಧ ‘ಇ-ವೈಟ್’ ಸೇವೆಗಳಿವೆ ಎಂದು ತಿಳಿದಿದೆ. ವಾಟ್ಸಾಪ್ ತಂದಿರುವ ಈ ಹೊಸ ಫೀಚರ್ ‘ಇ-ವೈಟ್’ ರೀತಿಯಲ್ಲಿ ಕೆಲಸ ಮಾಡುತ್ತದೆ.

WhatsApp Latest Update
Image Credit: Nairametrics

2024 ರ ಇನ್ನೊಂದು ಹೊಸ ಫೀಚರ್ ಲಾಂಚ್
ವಾಟ್ಸಾಪ್ ಗುಂಪಿನಲ್ಲಿರುವ ಸದಸ್ಯರಿಗೆ ಹುಟ್ಟುಹಬ್ಬದ ಪಾರ್ಟಿಗಳು ಅಥವಾ ಯಾವುದೇ ಸಭೆಯನ್ನು ಏರ್ಪಡಿಸಬಹುದು. ಈವೆಂಟ್ ಅನ್ನು ರಚಿಸಿದ ನಂತರ ಅದನ್ನು ಗುಂಪು ಮಾಹಿತಿ ಪುಟಕ್ಕೆ ಪಿನ್ ಮಾಡಲಾಗುತ್ತದೆ. ಗುಂಪು ಚಾಟ್ ಥ್ರೆಡ್ ಅನ್ನು ಸಹ ರಚಿಸಲಾಗುತ್ತದೆ. ಇದರೊಂದಿಗೆ ಸಂದೇಶವು ಯಾರಿಗಾದರೂ ತಲುಪಿದೆಯೇ ಎಂದು ಯಾರಾದರೂ ತಿಳಿದುಕೊಳ್ಳಬಹುದು.

ಇದಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಉತ್ತರಿಸಬಹುದು ಮತ್ತು ದೃಢೀಕರಿಸಬಹುದು. ಅಲ್ಲದೆ, ಸಭೆಯ ಸಮಯವನ್ನು ಗುಂಪಿನಲ್ಲಿರುವ ಸದಸ್ಯರಿಗೆ ತಿಳಿಸಲಾಗುತ್ತದೆ. ಪ್ರಸ್ತುತ ಈ ಹೊಸ ವೈಶಿಷ್ಟ್ಯವು WhatsApp ಸಮುದಾಯಗಳಲ್ಲಿನ ಗುಂಪುಗಳಿಗೆ ಹೊರತರುತ್ತಿದೆ. ನಂತರ ಈ ಹೊಸ ವೈಶಿಷ್ಟ್ಯವನ್ನು ಎಲ್ಲಾ ಗುಂಪುಗಳಿಗೆ ಸೇರಿಸಲಾಗುತ್ತದೆ.

Join Nadunudi News WhatsApp Group

WhatsApp New Feature Update
Image Credit: Jagran

Join Nadunudi News WhatsApp Group