WhatsApp Feature: ನಂಬರ್ ಸೇವ್ ಮಾಡದೆ ವಾಟ್ಸಾಪ್ ನಲ್ಲಿ ಫೈಲ್ ಶೇರ್ ಮಾಡುವುದು ಹೇಗೆ…? ಇಲ್ಲಿದೆ ವಿಧಾನ.

ವಾಟ್ಸಾಪ್ ನಲ್ಲಿ ಫೈಲ್ ಶೇರ್ ಮಾಡಲು ನಂಬರ್ ಸೇವೆ ಮಾಡುವ ಅಗತ್ಯವಿಲ್ಲ

WhatsApp New Update For File Sharing: WhatsApp ಅನ್ನು ವಿಶ್ವದೆಲ್ಲೆಡೆ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್ ಅನ್ನು ಬಳಸುತ್ತಾರೆ ಎಂದರೆ ತಪ್ಪಾಗಲಾರದು. ಈಗಂತೂ ಮೆಟಾ ಮಾಲೀಕತ್ವದ ವಾಟ್ಸಾಪ್ ಬಳಕೆದಾರರಿಗೆ ಹೆಚ್ಚಿನ ಫೀಚರ್ ಅನ್ನು ನೀಡುತ್ತಿದೆ. ಬಳಕೆದಾರರು ವಾಟ್ಸಾಪ್ ಪರಿಚಯಿಸಿರುವ ಎಲ್ಲ ಫೀಚರ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಸೇರಿಕೊಂಡಿದೆ. ನೀವು ಈ ಹೊಸ ಫೀಚರ್ ನ ಮೂಲಕ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.

WhatsApp New Update For File Sharing
Image Credit: Gadgetbridge

ವಾಟ್ಸಾಪ್ ನಲ್ಲಿ ಫೈಲ್ ಶೇರ್ ಮಾಡಲು ನಂಬರ್ ಸೇವೆ ಮಾಡುವ ಅಗತ್ಯವಿಲ್ಲ
ಸದ್ಯ ವಾಟ್ಸಾಪ್ ಇದೀಗ ಬಳಕೆದಾರರಿಗಾಗಿ ದೊಡ್ಡ ಗಾತ್ರದ ಫೈಲ್ ಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುವಂತಹ ಹೊಸ Feature ಅನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಬಳಕೆದಾರರು ಈ ವೈಶಿಷ್ಟ್ಯವನ್ನು ಬಹಳ ಸುಲಭವಾಗಿ ಬಳಸಬಹುದು. ವಾಟ್ಸಾಪ್ ಇದಕ್ಕಾಗಿ Nearby Share ಫೀಚರ್ ಅನ್ನು ಪರಿಚಯಿಸಿದೆ.

Nearby Share ಫೀಚರ್ ನ ಮೂಲಕ ಡೇಟಾದ ಬದಲು ಎರಡು ಸಾಧನಗಳು ಒಂದಕ್ಕೊಂದು ಹತ್ತಿರವಿದ್ದರೆ ಅವುಗಳ ನಡುವೆ ಸುಲಭವಾಗಿ ಡೇಟಾವನ್ನು ವರ್ಗಾಯಿಸಬಹುದು. Android, Windows ಮತ್ತು ChromeOS PC ಗಳಲ್ಲಿ ಫೈಲ್-ಹಂಚಿಕೆಯನ್ನು ಪ್ರಸ್ತುತ ಸಕ್ರಿಯಗೊಳಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಈ ವೈಶಿಷ್ಟ್ಯವು ಬಳಕೆದಾರರಿಗೆ 2GB ವರೆಗಿನ ಫೈಲ್‌ ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ.

Whatsapp Latest News Update
Image Credit: India

ನಂಬರ್ ಸೇವ್ ಮಾಡದೆ ವಾಟ್ಸಾಪ್ ನಲ್ಲಿ ಫೈಲ್ ಶೇರ್ ಮಾಡುವುದು ಹೇಗೆ…?
ಈ ನೂತನ ಫೈಲ್ ಹಂಚಿಕೆ ವೈಶಿಷ್ಟ್ಯವು ಪ್ರಸ್ತುತ WhatsApp ಬೀಟಾ ಆಂಡ್ರಾಯ್ಡ್ 2.24.2.17 ಅಪ್‌ ಡೇಟ್‌ ನಲ್ಲಿ ಲಭ್ಯವಿದೆ ಎಂದು WABetaInfo ವರದಿ ಮಾಡಿದೆ. WhatsApp ಫೈಲ್‌ ಗಳನ್ನು ವರ್ಗಾಯಿಸಲು ಮತ್ತು ಸ್ವೀಕರಿಸಲು ಪ್ರತ್ಯೇಕ ವಿಭಾಗವನ್ನು ಹೊಂದಿದೆ. ಮೊದಲನೆಯದಾಗಿ ನೀವು ಸಂಪರ್ಕ ಪಟ್ಟಿಯಲ್ಲಿರುವ ಯಾವುದೇ ಬಳಕೆದಾರರಿಗೆ ಕಳುಹಿಸಬೇಕಾದ ಫೈಲ್ ವರ್ಗಾವಣೆ ವಿನಂತಿಯನ್ನು ರಚಿಸಬೇಕಾಗಿದೆ.

ನಂತರ ಬಳಕೆದಾರರು ವಿನಂತಿಯನ್ನು ಸ್ವೀಕರಿಸಬೇಕು. WhatsApp ಫೈಲ್ ವರ್ಗಾವಣೆಗಳು ಪಠ್ಯ ಸಂದೇಶಗಳು ಮತ್ತು ಕರೆಗಳಂತೆಯೇ ಎಂಡ್-ಟು-ಎಂಡ್ ಎನ್‌ ಕ್ರಿಪ್ಟ್ ಆಗಿರುತ್ತವೆ. ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯನ್ನು ಸೇರಿಸದಿದ್ದರೆ, ಹೊಸ ವೈಶಿಷ್ಟ್ಯದ ಸಹಾಯದಿಂದ ನೀವು ಅವರಿಗೆ ಫೈಲ್‌ ಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ನೀವು ಫೋಟೋಗಳು ಅಥವಾ ವೀಡಿಯೊಗಳನ್ನು ವರ್ಗಾಯಿಸಲು ಯಾವುದೇ ಅಪರಿಚಿತ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group