WhatsApp Trick: ವಾಟ್ಸಪ್ ನಲ್ಲಿ ಬಂತು ಇನ್ನೊಂದು ಅದ್ಭುತ ಫೀಚರ್, ಫೋನ್ ನೋಡದೆ ಯಾರ ಮೆಸೇಜ್ ಬಂದಿದೆ ಎಂದು ತಿಳಿಯಬಹುದು

ಈ ವಿಧಾನದ ಮೂಲಕ ವಾಟ್ಸಾಪ್ ನೋಡದೆ ಯಾರು ಮೆಸೇಜ್ ಮಾಡಿದ್ದಾರೆ ಮತ್ತು ಏನು ಮೆಸೇಜ್ ಮಾಡಿದ್ದಾರೆ ಎಂದು ತಿಳಿಯಬಹುದು

WhatsApp Message Tone Setting: ಮೊಬೈಲ್ ಬಳಸುವ ಪ್ರತಿಯೊಬ್ಬರೂ ಬಳಸುವ ಸಾಮಾನ್ಯ Application ಅಂದರೆ ಅದು WhatsApp. ಮೆಟಾ (Meta) ಮಾಲೀಕತ್ವದ ವಾಟ್ಸಾಪ್ ಅನ್ನು ಮಿಲಿಯನ್ ನಷ್ಟು ಜನರು ಬಳಸುತ್ತಾರೆ. ಸೋಶಿಯಲ್ ಮೀಡಿಯಾ ಆಪ್ ಗಳಲ್ಲಿ ವಾಟ್ಸಾಪ್ ಟ್ರೆಂಡ್ ನಲ್ಲಿದೆ. ವಾಟ್ಸಾಪ್ ದೂರದಲ್ಲಿರುವವರನ್ನು ಕೂಡ ಹತ್ತಿರದಲ್ಲಿರುಸುತ್ತದೆ. ಪ್ರೀತಿ ಪಾತ್ರರೊಂದಿಗೆ ಸದಾ ಸಂಪರ್ಕದಲ್ಲಿರಲು ವಾಟ್ಸಪ್ ಅನ್ನು ಬಳಸುತ್ತಾರೆ.

WhatsApp Message Tone Setting
Image Credit: Trengo

ವಾಟ್ಸಾಪ್ ನಲ್ಲಿದೆ ಅದ್ಭುತ ಟ್ರಿಕ್
ಇನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ಸಾಕಷ್ಟು ಅಪ್ಡೇಟ್ ಅನ್ನು ನೀಡುತ್ತಿದೆ. ಬಳಕೆದಾರರು ಹೊಸ ಹೊಸ ಅಪ್ಡೇಟ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ವಾಟ್ಸಾಪ್ ಅನ್ನು ದಿನ ನಿತ್ಯ ಬಳಸುತ್ತಿದ್ದರು ಕೂಡ ವಾಟ್ಸಾಪ್ ನ ಬಗ್ಗೆ ಸಾಕಷ್ಟು ಮಾಹಿತಿ ತಿಳಿದಿರುವುದಿಲ್ಲ. ವಾಟ್ಸಾಪ್ ನಲ್ಲಿ ಸಾಕಷ್ಟು ಫೀಚರ್ ಗಳಿರುತ್ತದೆ. ಆದರೆ ಅದರ ಬಗ್ಗೆ ಮಾಹಿತಿ ತಿಳಿಯದೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದೀಗ ನಾವು ಹೆಚ್ಚಿನ ಜನರಿಗೆ ತಿಳಿದಿರದಂತಹ ವಾಟ್ಸಾಪ್ ನ ಅದ್ಭುತ ಟ್ರಿಕ್ ನ ಬಗ್ಗೆ ಹೇಳಲಿದ್ದೇವೆ.

ಫೋನ್ ನೋಡದೆಯೇ ವಾಟ್ಸಾಪ್ ನಲ್ಲಿ ಯಾರು ಸಂದೇಶ ಕಳುಹಿಸಿದ್ದಾರೆ ಎನ್ನುವುದನ್ನು ತಿಳಿಯಬಹುದು
ಇದೀಗ ನಾವು ವಾಟ್ಸಾಪ್ ನ ಬಗ್ಗೆ ಈವರೆಗೂ ತಿಳಿದಿರದ ಒಂದು ಫೀಚರ್ ನ ಬಗ್ಗೆ ಮಾಹಿತಿ ತಿಳಿಯೋಣ. ನಾವು ವಾಟ್ಸಾಪ್ ನಲ್ಲಿ ಬರುವಂತಹ ಸಂದೇಶ ಯಾರು ಕಳುಹಿಸಿದ್ದಾರೆ ಎಂದು ಫೋನ್ ನೋಡದೆಯೂ ಕೂಡ ತಿಳಿದುಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ..? ಹೌದು ಇದು ಸಾಧ್ಯ, ವಾಟ್ಸಾಪ್ ನಲ್ಲಿ ನೀವು ವಿಭಿನ್ನ ಸಂಪರ್ಕಗಳಿಗೆ ವಿಭಿನ್ನ ಸಂದೇಶ ಟೋನ್‌ ಗಳನ್ನು ಹೊಂದಿಸುವ ಆಯ್ಕೆಯನ್ನು ಆರಿಸುವ ಮೂಲಕ ಫೋನ್ ನೋಡದೆಯೇ ವಾಟ್ಸಾಪ್ ನಲ್ಲಿ ಯಾರು ಸಂದೇಶ ಕಳುಹಿಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು.

Whatsapp New Feature 2024
Image Credit: business-standard

ಈ ರೀತಿಯಾಗಿ ನೀವು ಸಂಪರ್ಕಕ್ಕೆ ಟೋನ್ ಅನ್ನು ಸೆಟ್ ಮಾಡಿಕೊಳ್ಳಿ
•ಮೊದಲನೆಯದಾಗಿ ವಾಟ್ಸಾಪ್ ನ ಇತ್ತೀಚಿನ ಆವೃತ್ತಿಯನ್ನು ನವೀಕರಿಸಿಕೊಳ್ಳಿ.

•ನೀವು ಯಾರ ಸಂದೇಶಕ್ಕೆ ಟೋನ್ ಅನ್ನು ಸೆಟ್ ಮಾಡಲು ಬಯಸುತ್ತೀರೋ ಆ ಸಂದೇಶವನ್ನು ತೆರೆಯಿರಿ.

Join Nadunudi News WhatsApp Group

•ಮೇಲ್ಭಾಗದಲ್ಲಿ ಗೋಚರಿಸುವ ಸಂಪರ್ಕದ ಹೆಸರನ್ನು ಟ್ಯಾಪ್ ಮಾಡಿದ ನಂತರ, ಚಾಟ್ ಮಾಹಿತಿ ಪರದೆಯು ತೆರೆಯುತ್ತದೆ.

•ಅಲ್ಲಿ ನೀವು ಕಸ್ಟಮ್ ಅಧಿಸೂಚನೆಗಳ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಟ್ಯಾಪ್ ಮಾಡಿ.

•ಮೇಲ್ಭಾಗದಲ್ಲಿ ಯೂಸ್ ಕಸ್ಟಮ್ ನೋಟಿಫಿಕೇಶನ್‌ ಗಳ ಆಯ್ಕೆಯ ಪಕ್ಕದಲ್ಲಿ ಗೋಚರಿಸುವ ಪೆಟ್ಟಿಗೆಯನ್ನು ನೀವು ಪರಿಶೀಲಿಸಿದ ತಕ್ಷಣ ನೀವು ಹೊಸ ಆಯ್ಕೆಗಳನ್ನು ಪಡೆಯುತ್ತೀರಿ.

•ಇಲ್ಲಿ ನೀವು ಚಾಟ್ ಮತ್ತು ಕರೆಗಾಗಿ ಟೋನ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group