WhatsApp Pin: ವಾಟ್ಸಾಪ್ ನಲ್ಲಿ ಚಾಟ್ ಮಾಡುವವರಿಗೆ ಹೊಸ ಯೋಜನೆ, ಈಗ ನಿಮ್ಮ ಚಾಟ್ ಗೆ ಟೈಮರ್ ಫಿಕ್ಸ್ ಮಾಡಿ.

ವಾಟ್ಸಾಪ್ ಪಿನ್ ಚಾಟ್ ನಲ್ಲಿ ಮತ್ತೊಂದು ಅಪ್ಡೇಟ್ ಪರಿಚಯಿಸಿದ ವಾಟ್ಸಾಪ್.

WhatsApp Pin Duration: ಜನಪ್ರಿಯ ಚಾಟಿಂಗ್ ಅಪ್ಪ್ಲಿಕೆಯೇಷನ್ ಆಗಿರುವ WhatsApp ಇದೀಗ ಹೊಸ ಹೊಸ ಫೀಚರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಪ್ರತಿ ನಿತ್ಯ ಹೊಸ ಹೊಸ ಅಪ್ಡೇಟ್ ಗಳ ಮೂಲಕ ವಾಟ್ಸಾಪ್ ಬಳಕೆದಾರರನ್ನು ಸೆಳೆಯುತ್ತಿದೆ. ವಾಟ್ಸಾಪ್ ಇದೀಗ ತನ್ನ ಚಾಟಿಂಗ್ ಸಿಸ್ಟಮ್ ನಲ್ಲಿ ಸಂಪೂರ್ಣ ಬದಲಾವಣೆ ತರಲು ಸಜ್ಜಾಗಿದೆ. ಚಾಟಿಂಗ್ ಸಿಸ್ಟಮ್ ನಲ್ಲಿ ಕೂಡ ಹೊಸ ಹೊಸ ಅಪ್ಡೇಟ್ ಗಳು ಈಗಾಗಲೇ ಗ್ರಾಹಕರಿಗೆ ತಲುಪಿದೆ.

ವಾಟ್ಸಾಪ್ ಬಳಕೆದಾರರ ಭದ್ರತೆಗಾಗಿ ಹೊಸ ಫೀಚರ್ ಬಿಡುಗಡೆ
ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು ಆದರೆ, ಎಡಿಟ್ ಮಾಡುವಂತಹ ಆಯ್ಕೆ ಇಲ್ಲ. ಆದರೆ ಈಗ ಮೆಟಾ ಒಡೆತನದ ಈ ಆಪ್ ಎಡಿಟ್ ಸೆಂಟ್ ಮೆಸೇಜ್ ಎಂಬ ನೂತನ ಅಪ್ಡೇಟ್ ಪರಿಚಯಿಸಿದೆ.

New feature release for security of WhatsApp users
Image Credit: Hindustantimes

ಎಡಿಟ್ ಸೆಂಟ್ ಮೆಸೇಜ್ ಆಯ್ಕೆಯ ಮೂಲಕ ಕಳುಹಿಸದ ಮೆಸೇಜ್ ಅನ್ನು ಎಡಿಟ್ ಮಾಡಬಹುದಾಗಿದೆ. ಈಗಾಗಲೇ ಈ ಆಯ್ಕೆ ಆಂಡ್ರಾಯ್ಡ್ ಬೀಟಾ ವರ್ಷನ್ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗುತ್ತಿದೆ. ವಾಟ್ಸಾಪ್ ಎಡಿಟ್ ಸೆಂಟ್ ಮೆಸೇಜ್ ಆಯ್ಕೆಗೆ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ವಾಟ್ಸಾಪ್ ಪಿನ್ ಚಾಟ್ ನಲ್ಲಿ ಮತ್ತೊಂದು ಅಪ್ಡೇಟ್
ಇನ್ನು ವಾಟ್ಸಾಪ್ ನಲ್ಲಿ ಈಗಾಗಲೇ ಚಾಟ್ ಪಿನ್ ಫೀಚರ್ ಬಿಡುಗಡೆಗೊಂಡಿದೆ. ಚಾಟ್ ಪಿನ್ ಫೀಚರ್ ನ ಮೂಲಕ ಬಳಕೆದಾರರು ತಮ್ಮ ವೈಯಕ್ತಿಕ ಚಾಟ್ ಗಳನ್ನೂ ಪಿನ್ ಮಾಡಿ ಇಟ್ಟುಕೊಳ್ಳಬಹುದಾಗಿದೆ.

ಇದೀಗ ಮೆಟಾ ಮಾಲೀಕತ್ವದ ವಾಟ್ಸಾಪ್ ಪಿನ್ ಚಾಟ್ ನಲ್ಲಿ ಮತ್ತೊಂದು ಅಪ್ಡೇಟ್ ಅನ್ನು ಜಾರಿಗೊಳಿಸಿದೆ. ಪಿನ್ ಚಾಟ್ ನಲ್ಲಿ ಅಳವಡಿಸಲಾದ ಮತ್ತೊಂದು ಫೀಚರ್ ನ ಬಗ್ಗೆ ಮಾಹಿತಿ ತಿಳಿಯೋಣ.

Join Nadunudi News WhatsApp Group

New feature release for security of WhatsApp users
Image Credit: Economictimes

ವಾಟ್ಸಾಪ್ ಪಿನ್ ಡ್ಯುರೇಷನ್ ಆಯ್ಕೆ
WaBetaInfo ವಾಟ್ಸಾಪ್ ನ ಈ ಹೊಸ ಫೀಚರ್ ನ ಬಗ್ಗೆ ವರದಿ ಮಾಡಿದೆ. WhatsApp Pin Duration ಆಯ್ಕೆ ಇನ್ನುಮುಂದೆ ಬಳಕೆದಾರರಿಗೆ ಲಭ್ಯವಾಗಲಿದೆ. ಬಳಕೆದಾರರು ಚಾಟ್ ಮತ್ತು ಗ್ರೂಪ್ ನಲ್ಲಿ ಪಿನ್ ಮಾಡಿ ಇಟ್ಟಿರುವ ಮುಖ್ಯ ಸಂದೇಶಗಳಿಗೆ ಟೈಮರ್ ಅಳವಡಿಸಲು ಸಾಧ್ಯವಾಗಲಿದೆ. ಪಿನ್ ಮಾಡಿರುವ ಸಂದೇಶಗಳು ಇಷ್ಟು ದಿನ ಮಾತ್ರ ಇರಲಿ ಎಂದು ಟೈಮರ್ ಸೆಟ್ ಮಾಡಬಹುದಾಗಿದೆ.

ವಾಟ್ಸಾಪ್ ಪಿನ್ ಡ್ಯುರೇಷನ್ ಗೆ ಮೂರು ಆಯ್ಕೆಗಳು ಲಭ್ಯ
ವಾಟ್ಸಾಪ್ ಬೀಟಾ ಆಂಡ್ರಾಯ್ಡ್ ಬಳಕೆದಾರರಿಗೆ ಈ ಅಪ್ಡೇಟ್ ಲಭ್ಯವಾಗಲಿದೆ. ವಾಟ್ಸಾಪ್ ನಲ್ಲಿ ಪಿನ್ ಮಾಡಿರುವ ಮೆಸ್ಸೇಜ್ ಗಳಿಗೆ ಟೈಮರ್ ಸೆಟ್ ಮಾಡಲು ಮೂರು ಆಯ್ಕೆಗಳನ್ನು ನೀಡಲಾಗುತ್ತದೆ.

New feature release for security of WhatsApp users
Image Credit: Mashable

24 ಗಂಟೆಗಳು, ಏಳು ದಿನಗಳು ಹಾಗೂ 30 ದಿನಗಳ ಎನ್ನುವ ಮೂರು ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಬಳಕೆದಾರರು ಅಗತ್ಯಕ್ಕೆ ಅನುಗುಣವಾಗಿ ನಿಮ್ಮ ಇಚ್ಛೆಯಂತೆ ಟೈಮರ್ ಅನ್ನು ಸೆಟ್ ಮಾಡಿಕೊಳ್ಳಬಹುದು.

Join Nadunudi News WhatsApp Group