WhatsApp: ವಾಟ್ಸಾಪ್ ನಲ್ಲಿ ಇಂತಹ ಮೆಸೇಜ್ ಕಳುಹಿಸುವಂತಿಲ್ಲ, ಎಚ್ಚರಿಕೆ ನೀಡಿದ ಚುನಾವಣಾ ಆಯೋಗ.

ವಾಟ್ಸಾಪ್ ನಲ್ಲಿ ಚುನಾವಣಾ ಪ್ರಚಾರ ಮಾಡಿದರೆ ಶಿಕ್ಷೆಯನ್ನ ಕೊಡಲಾಗುತ್ತದೆ ಎಂದು ಚುನಾವಣಾ ಆಯೋಗ ಆದೇಶವನ್ನ ಹೊರಡಿಸಿದೆ.

WhatsApp Group Admins And Election: ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದ್ದಂತೆ ಹೊಸ ಹೊಸ ನಿಯಮಗಳು ಜಾರಿ ಆಗುತ್ತಿದೆ. ವಾಟ್ಸಾಪ್ (WhatsApp)ಬಳಕೆದಾರರಿಗೂ ಚುನಾವಣಾ ಆಯೋಗದಿಂದ ಎಚ್ಚರಿಕೆ ಬಂದಿದೆ. ಇದು ಬಹುಮುಖ್ಯವಾಗಿ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಅನ್ವಯವಾಗಲಿದೆ.

WhatsApp Group Admins And Election
Image Source: News18

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಹೊಸ ಸುದ್ದಿ
ವಾಟ್ಸಾಪ್ ಗ್ರೂಪ್ ನಲ್ಲಿ ಮತ ಕೇಳಿದರೆ ಅಡ್ಮಿನ್ ಮೇಲೆ ಕ್ರಮ ಕೈಗೊಳ್ಳಲಾಗುವುದು. ಫೋನ್ ಪೆ, ಗೂಗಲ್ ಪೆ ಸೇರಿದಂತೆ ಇತರ ಎಲ್ಲ ಅಕೌಂಟ್ ಗಳಿಂದ ಒಂದೇ ಖಾತೆಯಿಂದ ಅನೇಕರಿಗೆ ಪದೇ ಪದೇ ಹಣ ಪಾವತಿಸುವುದು ಕಂಡು ಬಂದಲ್ಲಿ ಕೇಸ್ ದಾಖಲಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಚುನಾವಣೆ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಎಚ್ಚರಿಕೆ ನೀಡಿದ್ದು ಮತಯಾಚನೆ ಸಂದೇಶ ಬಂದರೆ ದೂರು ಕೊಡಿ ಎಂದು ಹೇಳಿದ್ದಾರೆ.

WhatsApp Group Admins And Election
Image Source: India.com

ವಾಟ್ಸಾಪ್ ಗ್ರೂಪ್ ನಲ್ಲಿ ಮತ ಕೇಳಿದರೆ ಅಡ್ಮಿನ್ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಿಧಾನಸಭಾ ಚುನಾವಣೆ ಅಂಗವಾಗಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಮ್ಮಿಕೊಂಡ ಕಾರ್ಯಾಗಾರರಲ್ಲಿ ಮಾತನಾಡಿದ ಅವರು ಸೋಶಿಯಲ್ ಮೀಡಿಯಾ ಬಳಕೆದಾರರ ಮೇಲೆ ನಿಗಾ ವಹಿಸುವಂತೆ ಹೇಳಿದೆ.

ವಾಟ್ಸಾಪ್ ಗ್ರೂಪ್ ನಲ್ಲಿ ಮತ ಕೇಳಿದರೆ ಅಡ್ಮಿನ್ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಅಲ್ಲದೆ ಗೂಗಲ್ ಪೆ, ಫೋನ್ ಪೆ ಸೇರಿದಂತೆ ಇತರ ಅಕ್ಕೌಂಟ್ ಗಳಿಂದ ಬೇರೆ ಖಾತೆಗಳಿಗೆ ಹಣ ಸಂದಾಯವಾದ ಬಗ್ಗೆ ಪ್ರಕರಣ ದಾಖಲಾದಲ್ಲಿ ತನಿಖೆ ನಡೆಸಲಾಗುವುದು. ಒಂದೇ ಖಾತೆಯಿಂದ ಸುಮಾರು 50 ರಿಂದ 100 ಮಂದಿಗೆ ಪದೇ ಪದೇ ಹಣ ಪಾವತಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Join Nadunudi News WhatsApp Group

WhatsApp Group Admins And Election
Image Source: Indiatimes.com

Join Nadunudi News WhatsApp Group