WhatsApp Scam: ವಾಟ್ಸಾಪ್ ಬಳಸುವವರಿಗೆ ರಾಮ್ ಮಂದಿರದಿಂದ ಎಚ್ಚರಿಕೆ, ಈ ಸಂದೇಶ ಬಂದರೆ ಎಚ್ಛೆತ್ತುಕೊಳ್ಳಿ

ರಾಮ ಮಂದಿರ ಹೆಸರಿನಲ್ಲಿ ಈ ರೀತಿ ಸಂದೇಶ ಬಂದರೆ ಅಪ್ಪಿತಪ್ಪಿಯೂ ಓಪನ್ ಮಾಡಬೇಡಿ

WhatsApp Scam By Using Name Of Ram Mandir Inaugural: ಸದ್ಯ ದೇಶದಲ್ಲಿ ರಾಮ ಮಂದಿರ ಉದ್ಘಾಟನೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನೇನು ಏಳು ದಿನಗಳಲ್ಲಿ ಹಿಂದೂಗಳ ಹಲವು ವರ್ಷದ ಕನಸು ಈಡೇರಲಿದೆ. ಕೋಟ್ಯಾಂತರ ಭಕ್ತರು ಈ ರಾಮ ಮಂದಿರ ಉದ್ಘಾಟನೆಗಾಗಿ ಕಾಯುತ್ತಿದ್ದಾರೆ.

ಸದ್ಯ ಸೈಬರ್ ಕ್ರಿಮಿನಲ್ಸ್ ಇದೀಗ ರಾಮ ಮಂದಿರ ಉಧ್ಘಟನೆಯ ವಿಷಯವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹೌದು, ಇದೀಗ ವಂಚಕರು ರಾಮ ಮಂದಿರದ ಹೆಸರಿನಲ್ಲಿ ವಂಚನೆ ಆರಂಭಿಸಲು ಸಿದ್ದರಾಗಿದ್ದಾರೆ. ಜನರಿಂದ ಹಣವನ್ನು ಕೊಳ್ಳೆ ಹೊಡೆಯಲು ಇದೀಗ ಹೊಸ ಸ್ಕೀಮ್ ಹಾಕಿಕೊಂಡಿದ್ದಾರೆ.

WhatsApp Scam By Using Name Of Ram Mandir Inaugural
Image Credit: Times Now

ರಾಮ ಮಂದಿರದ ಹೆಸರಿನಲ್ಲಿ ವಂಚನೆ ಸ್ಟಾರ್ಟ್
ಜನವರಿ 22 ರಂದು ಮೋದಿ ನೇತೃತ್ವದಿಂದ ರಾಮ ಮಂದಿರ ಅದ್ದೂರಿಯಾಗಿ ಉದ್ಘಾಟನೆಯಾಗಲಿದೆ. ಈ ಶುಭ ಗಳಿಗೆಗಾಗಿ ಕೋಟ್ಯಾಂತರ ಭಕ್ತಾಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ WhatsApp ನಲ್ಲಿ ರಾಮನ ಹೆಸರಿನಲ್ಲಿ ಸಂದೇಶ ಕಳುಹಿಸುವುದು ಕಂಡುಬರುತ್ತಿದೆ. ಸದ್ಯ ಸೈಬರ್ ಕ್ರಿಮಿನಲ್ಸ್ ಇದೀಗ ರಾಮನ ಹೆಸರನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಮೋಸ ಮಾಡಲು ಹೊಂಚು ಹಾಕುತ್ತಿದ್ದಾರೆ. ಅಯೋಧ್ಯ ರಾಮನ ಹೆಸರಿನಲ್ಲಿ ಯಾವುದೇ ಸಂದೇಶ ಬಂದರು ನೀವು ಎಚ್ಚರದಿಂದಿರಿ.

ಈ ರೀತಿಯಾಗಿ ವಾಟ್ಸಾಪ್ ಸಂದೇಶ ಬಂದರೆ ತಪ್ಪಿಯೂ ಓಪನ್ ಮಾಡಬೇಡಿ
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ವಿಐಪಿ ಟಿಕೆಟ್ ಹೆಸರಿನಲ್ಲಿ ಎಪಿಕೆ ಫೈಲ್ ವಾಟ್ಸಾಪ್ ಗೆ ರವಾನೆಯಾಗುತ್ತಿದೆ. ಇವುಗಳ ಬಗ್ಗೆ ಎಚ್ಚರಿಕೆವಹಿಸಿ. ನೀವು ಇದನ್ನು ಕ್ಲಿಕ್ ಮಾಡಿದರೆ, ನಿಮ್ಮ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್ ಖಾತೆಯ ವಿವರಗಳು ಕಳ್ಳತನವಾಗಬಹುದು. ಈ ಬಗ್ಗೆ ಟಿಎಸ್‌ ಆರ್‌ ಟಿಸಿ ಎಂಡಿ ಸಜ್ಜನರ್ ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group

“ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಐಪಿ ಟಿಕೆಟ್ ಬೇಕೇ..? ಹೌದು ಎಂದಾದರೆ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಈ ಎಪಿಕೆ ಫೈಲ್ ಅನ್ನು ನೇರವಾಗಿ ಡೌನ್‌ಲೋಡ್ ಮಾಡಿ” ಎನ್ನುವ ಸಂದೇಶ ನಿಮ್ಮ ವಾಟ್ಸಾಪ್ ನಲ್ಲಿ ಬಂದಿದ್ದಾರೆ ತಪ್ಪಿಯೂ ಆ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ನೀವು ಲಿಂಕ್ ಓಪನ್ ಮಾಡಿದರೆ, ನಿಮ್ಮ ಎಲ್ಲ ವೈಯಕ್ತಿಕ ಮಾಹಿತಿ, ಬ್ಯಾಂಕ್ ನ ವಿವರ ಹ್ಯಾಕರ್ ಕೈತಲುಪುತ್ತದೆ ಎಚ್ಚರ.

Join Nadunudi News WhatsApp Group