WhatsApp Call: ಕೇಂದ್ರ ಸರ್ಕಾರದ ಆದೇಶಕ್ಕೆ ಹೆದರಿದ ವಾಟ್ಸಾಪ್, ಇಂತಹ ಕರೆಗಳಿಗೆ ನಿರ್ಬಂಧ ಹೇರಿದ ವಾಟ್ಸಾಪ್.

ಜನರ ಸುರಕ್ಷತೆಯ ಉದ್ದೇಶದಿಂದ ಸ್ಕ್ಯಾಮ್ ಕಾಲ್ ಕರೆಗಳಿಗೆ ನಿರ್ಬಂಧ ಹೇರಿದ ವಾಟ್ಸಾಪ್.

WhatsApp Scam Call: ಅಪರಿಚಿತ ನಂಬರ್ ಇಂದ ಯಾರಿಗಾದರೂ ಕರೆ ಬಂದರೆ ಆ ಕರೆಯನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಆದರೆ ಕೆಲವು ಜನರು ಅಪರಿಚಿತ ನಂಬರ್ ನಿಂದ ಕರೆ ಬಂದರೆ ಬೇಗನೆ ರಿಸೀವ್ ಮಾಡಿ ಮಾತನಾಡುತ್ತಾರೆ. ಇದರಿಂದ ತೊಂದರೆಗಳು ಆಗಲಿವೆ.

ಸದ್ಯ ವಾಟ್ಸಾಪ್ (WhatsApp) ನಲ್ಲಿ ನಕಲಿ ಕರೆಗಳು ಬರುತ್ತಿದೆ ಮತ್ತು ಇಂತಹ ಕರೆಗಳನ್ನ ಸ್ವೀಕಾರ ಮಾಡಿದ ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ನಕಲಿ ಕರೆಗಳಿಗೆ ಮೋಸಹೋದ ಜನರು ಹಣವನ್ನ ಕಾಳೆದುಕೊಂಡಿದ್ದು ಸಾಕಷ್ಟು ದೂರುಗಳನ್ನ ಕೂಡ ನೀಡಿದ್ದಾರೆ. 

WhatsApp Scam Call
Image Source: News18

ಅಪರಿಚಿತ ಸಂಖ್ಯೆಗಳಿಂದ ಕರೆ
ನೀವು ಅಪರಿಚಿತ ಸಂಖ್ಯೆಗಳಾದ + 84, +62,+ 60 ಸಂಖ್ಯೆಯಿಂದ ಕರೆ ಪಡೆಯುತ್ತಿದ್ದರೆ, ಇಂತಹ ಕರೆಗಳು ನಿಮ್ಮನ್ನು ಬಲೆಗೆ ಬೀಳಿಸುವ ಮೂಲಕ ಹಣವನ್ನು ಸುಲಿಗೆ ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರವು ಎಚ್ಚರಿಕೆಯನ್ನು ನೀಡಿದೆ.

ಕಳೆದ ಕೆಲವು ತಿಂಗಳುಗಳಿಂದ + 84,+62,+ 60 ರಿಂದ ಪ್ರಾರಂಭವಾಗುವ ವಾಟ್ಸಾಪ್ ಸಂಖ್ಯೆಗಳಿಂದ ಬರುವ ಕರೆಗಳಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಮಲೇಷ್ಯಾ, ಕೀನ್ಯಾ, ವಿಯೇಟ್ನಾಮ್ ಮತ್ತು ಇಥಿಯೋಪಿಯಾದಿಂದ ಇಂತಹ ಕರೆಗಳು ಬರುತ್ತಿವೆ. ಈ ಐ ಎಸ್ ಡಿ ಸಂಖ್ಯೆಗಳಿಂದ ಬರುವ ಕರೆಗಳು ಸಾಮಾನ್ಯವಾಗಿ ವಿಡಿಯೋ ಕರೆಗಳಾಗಿವೆ. ಇದಲ್ಲದೆ, ಭಾರತೀಯ ಕೋಡ್ ಸಂಖ್ಯೆಗಳಿಂದ ಬರುವ ಅಪರಿಚಿತ ಕರೆಗಳು ಸಹ ಅಪಾಯಕಾರಿ.

ಮೆಟಾ ಒಡೆತನದ ವಾಟ್ಸಾಪ್ ಭಾರತೀಯ ಬಳಕೆದಾರರ ಸುರಕ್ಷತೆಗಾಗಿ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಾಟ್ಸಾಪ್ ಸಂಖ್ಯೆಗೆ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತೀಯ ಬಳಕೆದಾರರ ಗೌಪ್ಯ ಮಾಹಿತಿಯನ್ನು ಸಂರಕ್ಷಿಸಲು ಹಾಗು ಸುರಕ್ಷತೆಯನ್ನು ಖಾತರಿಪಡಿಸಲು ವಾಟ್ಸಪ್ ಮುಂದಾಗಿದೆ. ವಾಟ್ಸ್ ಅಂತಾರಾಷ್ಟ್ರೀಯ ಸ್ಪ್ಯಾಮ್ ಖಾಲಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ.

Join Nadunudi News WhatsApp Group

WhatsApp Scam Call
Image Source: News18

ಅಪರಿಚಿತ ಕರೆಗಳನ್ನು ಸ್ವೀಕರಿಸಿದರೆ ಬೆದರಿಕೆಗೆ ಒಳಗಾಗುತ್ತೀರಿ  
+ 84, +62,+ 60 ಈ ಸಂಖ್ಯೆಗಳಿಂದ ವೀಡಿಯೊ ಕರೆಗಳನ್ನು ವಾಟ್ಸಾಪ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿದೆ ಮತ್ತು ಕರೆಯನ್ನು ಸ್ವೀಕರಿಸುವ ಮೂಲಕ ನೀವು ಏನನ್ನಾದರೂ ಅರ್ಥಮಾಡಿಕೊಳ್ಳುವ ಹೊತ್ತಿಗೆ, ಈ ಸೈಬರ್ ದರೋಡೆಕೋರರು ತಮ್ಮ ಕೆಲಸವನ್ನು ಮಾಡಿದ್ದಾರೆ.

ಅವರಿಗೆ ಬೇಕಾಗಿರುವುದು ನಿಮ್ಮ ಮುಖ ಗೋಚರಿಸುವ ಕೆಲವು ಸೆಕೆಂಡುಗಳ ವೀಡಿಯೊ. ಇದರ ನಂತರ, ನಿಮ್ಮ ಮುಖವನ್ನು ಅಶ್ಲೀಲ ವೀಡಿಯೊಗಳಿಂದ ಸಂಪಾದಿಸಲಾಗುತ್ತದೆ ಮತ್ತು ನಂತರ ನಿಮ್ಮನ್ನು ಬ್ಲ್ಯಾಕ್ಮೇಲ್ ಮಾಡುವ ಆಟ ಪ್ರಾರಂಭವಾಗುತ್ತದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಬೆದರಿಕೆ ಹಾಕಲಾಗಿದೆ. ಈ ಕಾರಣದಿಂದ ಅಪರಿಚಿತ ಕರೆಯನ್ನು ಸ್ವೀಕರಿಸಬಾರದು.

WhatsApp Scam Call
Image Source: News18

Join Nadunudi News WhatsApp Group