WhatsApp: ವಾಟ್ಸಾಪ್ ನಲ್ಲಿ ನಿಮ್ಮ ಫೋಟೋ ಸ್ಟಿಕ್ಕರ್ ಆಗಲಿದೆ, ವಾಟ್ಸಾಪ್ ಬಳಸುವವರಿಗೆ ಹೊಸ ಅಪ್ಡೇಟ್.

ವಾಟ್ಸಾಪ್ ಚಾಟಿಂಗ್ ನಲ್ಲಿ ಹೊಸ ಫೀಚರ್, ಇನ್ನುಮುಂದೆ ನಿಮ್ಮ ಫೋಟೋವನ್ನು ಸ್ಟಿಕ್ಕರ್ ಆಗಿ ಬದಲಿಸಿಕೊಳ್ಳಬಹುದು.

WhatsApp Sticker Maker: ವಾಟ್ಸಾಪ್ ಇತ್ತೀಚಿಗೆ ಹೊಸ ಹೊಸ ಫೀಚರ್ ಗಳ ಮೂಲಕ ಜನರನ್ನು ಆಕರ್ಷಿಸುತ್ತಿದೆ. ವಾಟ್ಸಾಪ್ ಇತ್ತೀಚಿಗೆ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸಿದೆ. ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಚಾಟಿಂಗ್ ಸಿಸ್ಟಮ್ ನಲ್ಲಿ ಸಂಪೂರ್ಣ ಬದಲಾವಣೆ ಆಗಲಿದೆ.

ಇದೀಗ ವಾಟ್ಸಾಪ್ ಚಾಟಿಂಗ್ ಸಿಸ್ಟಮ್ ನಲ್ಲಿ ಹೊಸ ಫೀಚರ್ ಅನ್ನು ತಂದಿದೆ. ಈ ಹೊಸ ಫೀಚರ್ ನ ವಿಶೇಷತೆಯನ್ನು ತಿಳಿಯೋಣ.

ವಾಟ್ಸಾಪ್ ಚಾಟಿಂಗ್ ನಲ್ಲಿ ಹೊಸ ಫೀಚರ್
ಮೆಟಾ ಮಾಲೀಕತ್ವದ ವಾಟ್ಸಾಪ್ ಇದೀಗ ಹೊಸ ಫೀಚರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇದೀಗ ದಿನೇ ದಿನೇ ಹೊಸ ಅಪ್ಡೇಟ್ ಗಳನ್ನೂ ಹೊಂದಿದೆ. ಭಾರತದಲ್ಲಿ ಅದೆಷ್ಟೋ ಮಿಲಿಯನ್ ಗಳಷ್ಟು ಜನರು ವಾಟ್ಸಾಪ್ ಅನ್ನು ಬಳಸುತ್ತಾರೆ. ಇದೀಗ ವಾಟ್ಸಾಪ್ ಹೊಸ ಅಪ್ಡೇಟ್ ಅನ್ನು ಪರಿಚಯಿಸಲಾಗಿದೆ.

WhatsApp Sticker Maker
Image Source: Digit

ವಾಟ್ಸಾಪ್ ನಲ್ಲಿ ಸ್ಟಿಕ್ಕರ್ ಮೇಕರ್ ಟೂಲ್ ಫೀಚರ್ (WhatsApp Sticker Maker Tool Feature) 
ನೀವು ವಾಟ್ಸಾಪ್ ನಲ್ಲಿ ಚಾಟ್ ಮಾಡುವಾಗ ಸ್ಟಿಕ್ಕರ್ಸ್ ಗಳನ್ನೂ ಬಳಸುವುದು ಸಾಮಾನ್ಯವಾದ ವಿಷಯ. ಇನ್ನು ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಸ್ಮೈಲಿ ಎಮೋಜಿಗಳು ಇರುತ್ತವೆ. ಹಾಗೆಯೆ ಹೊಸ ಹೊಸ ಸ್ಟಿಕ್ಕರ್ ಗಳು ಕೂಡ ಇರುತ್ತವೆ.

ಇದೀಗ ವಾಟ್ಸಾಪ್ ನಲ್ಲಿ ಸ್ಟಿಕ್ಕರ್ ಮೇಕರ್ ಟೂಲ್ ಫೀಚರ್ ಬಿಡುಗಡೆಗೊಳ್ಳಲಿದೆ. ಈ ಫೀಚರ್ ನಿಂದಾಗಿ ನೀವು ನಿಮ್ಮ ಫೋಟೋವನ್ನು ಸ್ಟಿಕ್ಕರ್ ಆಗಿ ಬದಲಾಯಿಸಿಕೊಳ್ಳಬಹುದು. ಆಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರದಲ್ಲೆ ಈ ಫೀಚರ್ ಲಭ್ಯ ಆಗಲಿದೆ.

Join Nadunudi News WhatsApp Group

WhatsApp Sticker Maker
Image Source: Fotor

ಸ್ಟಿಕ್ಕರ್ ಮೇಕರ್ ಟೂಲ್ ಬಳಸುವ ವಿಧಾನ
ಐಫೋನ್ ಗಳಲ್ಲಿ ಸ್ಟಿಕರ್ ಮೇಕರ್ ಟೂಲ್ ಗಳ ಮೂಲಕ ಬಳಸಲಾಗುತ್ತದೆ. ನಿಮ್ಮ ಫೋಟೋಗಳನ್ನು ಸ್ಟಿಕ್ಕರ್ ಆಗಿ ಮಾಡಿಕೊಳ್ಳುವ ವಿಧಾನದ ಬಗ್ಗೆ ತಿಳಿಯೋಣ. ಮೊದಲು ಸ್ಟಿಕ್ಕರ್ ಮಾಡಲು ಬಯಸುವ ಫೋಟೋದಿಂದ ಸಬ್ಜೆಕ್ಟ್ ಗಳನ್ನೂ ತೆಗೆಯಬೇಕಾಗುತ್ತದೆ.

ಹೊರತೆಗೆದ ಫೋಟೋವನ್ನು ವಾಟ್ಸಾಪ್ ನಲ್ಲಿ ಪೇಸ್ಟ್ ಮಾಡಿದಾಗ ಆ ಫೋಟೋ ಸ್ಟಿಕ್ಕರ್ ಆಗಿ ಬದಲಾಗುತ್ತದೆ. ವಾಟ್ಸಾಪ್ ನೊಂದಿಗೆ iOS 16 ಅಥವಾ ನಂತರದ ಬಳಕೆದಾರರಿಗೆ ಈ ಫೀಚರ್ ಅನ್ನು ಹೊರತರಲಾಗಿದೆ.

WhatsApp Sticker Maker
Image Source: Filecr

Join Nadunudi News WhatsApp Group