Wife Property Rights: ಪತಿಯ ಮರಣದ ನಂತರ ಪತಿಯ ಯಾವ ಯಾವ ಆಸ್ತಿಯ ಮೇಲೆ ಪತ್ನಿಗೆ ಹಕ್ಕಿದೆ…? ಕಾನೂನು ನಿಯಮ

ಪತಿಯ ಮರಣದ ನಂತರ ಪತಿಯ ಯಾವ ಯಾವ ಆಸ್ತಿಯ ಮೇಲೆ ಪತ್ನಿಗೆ ಹಕ್ಕಿದೆ...?

Wife Property Rights In Husband Property: ದೇಶದಲ್ಲಿ ಆಸ್ತಿಯ ವಿಚಾರವಾಗಿ ಸಾಕಷ್ಟು ಗೊಂದಲಗಳು ಏರ್ಪಡುತ್ತವೆ. ಈಗಲೂ ಕೂಡ ಆಸ್ತಿಯ ಹಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರದ ಅದೆಷ್ಟೋ ಜನರಿದ್ದಾರೆ. ಸಾಮಾನ್ಯವಾಗಿ ಹಣಕಾಸಿನ ವಿಚಾರವಾಗಿ, ಆಸ್ತಿಯ ವಿಚಾರವಾಗಿ ಹೆಣ್ಣು ಮಕ್ಕಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುವುದಿಲ್ಲ.

ಆದರೆ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ. ಹಣಕಾಸಿನ ವಿಚಾರದಿಂದ ಹೆಣ್ಣುಮಕ್ಕಳನ್ನು ದೂರ ಇಡುವವರೇ ಹೆಚ್ಚು. ಇನ್ನು ಹೆಂಡತಿಗೆ ತನ್ನ ಗಂಡನ ಆಸ್ತಿಯ ಹಕ್ಕಿನ ಬಗ್ಗೆ ತಿಳಿದಿರುವುದು ಅಗತ್ಯವಾಗಿರುತ್ತದೆ. ಯಾವುದಾದರು ಕಾರಣದಿಂದ ಗಂಡ ಮರಣ ಹೊಂದಿದರೆ, ಆಕೆಗೆ ಆರ್ಥಿಕ ಬೆಂಬಲ ಅಗತ್ಯವಾಗಿರುತ್ತದೆ. ಇದೀಗ ನಾವು ಪತಿಯ ಮರಣದ ನಂತರ ಪತಿಯ ಯಾವ ಯಾವ ಆಸ್ತಿಯ ಮೇಲೆ ಪತ್ನಿಗೆ ಹಕ್ಕಿದೆ…? ಎಂದು ನೋಡೋಣ.

High Court New Verdict
Image Credit: Livelaw

ಪತಿಯ ಮರಣದ ನಂತರ ಪತಿಯ ಯಾವ ಯಾವ ಆಸ್ತಿಯ ಮೇಲೆ ಪತ್ನಿಗೆ ಹಕ್ಕಿದೆ…?
ಮೃತ ಪತಿಯ ಆಸ್ತಿ ಪಡೆಯುವ ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಪತಿ ನಿಧನದ ನಂತರ ಪತ್ನಿಗೆ ಆಸ್ತಿ ಪಡೆಯುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪತಿ ಮೃತಪಟ್ಟರೆ ಹೆಂಡತಿಯು ತನ್ನ ಜೀವಿತಾವಧಿಯಲ್ಲಿ ಮೃತ ಗಂಡನ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಎಲ್ಲಾ ಹಕ್ಕನ್ನು ಹೊಂದಿದ್ದಾಳೆ.

ಅವಳು ತನ್ನ ಜೀವನದುದ್ದಕ್ಕೂ ಆ ಆಸ್ತಿಯಿಂದ ಬರುವ ಆದಾಯವನ್ನು ಬಳಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಗಂಡನ ಆಸ್ತಿಯ ಬಾಡಿಗೆಯನ್ನು ಸಂಗ್ರಹಿಸಲು ಮತ್ತು ಅದನ್ನು ಬಳಸಲು ಹೆಂಡತಿಗೆ ಸಂಪೂರ್ಣ ಹಕ್ಕು ಇರುತ್ತದೆ. 1989 ರಲ್ಲಿ ತನ್ನ ತಂದೆಯ ಮರಣದ ನಂತರ ಹಲವಾರು ಒಡಹುಟ್ಟಿದವರ ನಡುವೆ ಆಸ್ತಿ ವಿಭಜನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

Wife Property Rights In Husband Property
Image Credit: Homecapital

Join Nadunudi News WhatsApp Group

Join Nadunudi News WhatsApp Group