UPI New Update: UPI ಬಳಸುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಯಾವುದೇ ಇಂಟರ್ನೆಟ್ ಅಗತ್ಯ ಇಲ್ಲ.

UPI ಬಳಕೆದಾರರಿಗೆ ಬಿಗ್ ಅಪ್ಡೇಟ್, ಇನ್ಮುಂದೆ ಇಂಟರ್ನೆಟ್ ಇಲ್ಲದೆ UPI ಮಾಡಬಹುದು

Without Internet Using UPI Payment: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಜನರು UPI ಅನ್ನು ಉಪಯೋಗಿಸಿಕೊಂಡು ಹಣವನ್ನು ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ವರ್ಗಾವಣೆ ಮಾಡುತ್ತಿದ್ದಾರೆ. ಇದೀಗ ಯಾರು ಸಹ ಹಣವನ್ನು ಕೈಯಲ್ಲಿ ಹಿಡಿದು ಪ್ರಯಾಣ ಮಾಡುವುದಿಲ್ಲ.

ಫೋನ್ ನಲ್ಲಿ UPI ( Google pay, Phone pay, Paytm,) ಅಂತಹ ಅಪ್ಲಿಕೇಶನ್ ಗಳ ಮೂಲಕ ಹಣವನ್ನು ಪಾವತಿಸುತ್ತಾರೆ. ಇದೀಗ UPI ಬಳಕೆದಾರರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ನೀವು UPI ಬಳಸುತ್ತಿದ್ದಾರೆ ಈ ಲೇಖನವನ್ನು ಓದುವ ಮೂಲಕ ಮಾಹಿತಿ ತಿಳಿದುಕೊಳ್ಳಿ.

Without Internet Using UPI Payment
Image Credit: Aajtak

UPI ಬಳಸುವವರಿಗೆ ಗುಡ್ ನ್ಯೂಸ್
ಯಾವುದೇ ಅಂಗಡಿಗೆ ಹೋದರೂ ನೀವು UPI ಮೂಲಕ ಹಣವನ್ನು ಸುಲಭವಾಗಿ ಪಾವತಿಸಬಹುದು. ಆದರೆ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅಥವಾ ಇಂಟರ್ನೆಟ್ ಸಮಸ್ಯೆಗಳ ಕಾರಣದಿಂದ UPI ಮೂಲಕ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ.

ಇನ್ನು ಅನೇಕ ಬಾರಿ ಹೋಟೆಲ್ ಅಥವಾ ಎಲ್ಲಿಗಾದರೂ ಹೋಗಿ ಇಂಟರ್ನೆಟ್ ಸಮಸ್ಯೆಯ ಕಾರಣದಿಂದ UPI ಮೂಲಕ ಹಣ ಪಾವತಿ ಮಾಡಲು ಆಗದೆ ತೊಂದರೆಗೆ ಸಿಲುಕಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನು ಇಂದು ನಾವು ನೀವು ಸುಲಭವಾಗಿ ಇಂಟರ್ನೆಟ್ ಇಲ್ಲದೆ ಸಹ UPI ಮೂಲಕ ಪೇಮೆಂಟ್ ಅನ್ನು ಪಾವತಿ ಮಾಡಬಹುದು. ಅದು ಹೇಗೆ ಎಂದು ನೀವು ಯೋಚಿಸುತ್ತಿದ್ದೀರಾ, ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

UPI transactions without Internet
Image Credit: Jagranjosh

ಇನ್ಮುಂದೆ ಯಾವುದೇ ಇಂಟರ್ನೆಟ್ ಅಗತ್ಯ ಇಲ್ಲ
ಇಂಟರ್ನೆಟ್ ಇಲ್ಲದೆ UPI ಪಾವತಿಗಳನ್ನು ಮಾಡಲು ಸೆಂಟ್ರಲ್ ಬ್ಯಾಂಕ್ UPI ಲೈಟ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಅದರ ಸಹಾಯದಿಂದ, ಸ್ಮಾರ್ಟ್ಫೋನ್ ಬಳಕೆದಾರರು ಇಂಟರ್ನೆಟ್ ಇಲ್ಲದೆ ಹಣದ ವಹಿವಾಟು ಮಾಡಬಹುದು. UPI ಲೈಟ್ UPI ಯಂತೆಯೇ ಕಾರ್ಯನಿರ್ವಹಿಸುತ್ತದೆ. UPI ಲೈಟ್ ಮೂಲಕ, ಬಳಕೆದಾರರು ಈಗಾಗಲೇ ಹಣವನ್ನು ವ್ಯಾಲೆಟ್‌ ಗೆ ಠೇವಣಿ ಮಾಡಬಹುದು ಮತ್ತು ನಂತರ ಇಂಟರ್ನೆಟ್ ಇಲ್ಲದೆ ಹಣವನ್ನು ವಹಿವಾಟು ಮಾಡಬಹುದು. UPI ಲೈಟ್ ಮೂಲಕ ಪಾವತಿ ಮಾಡಲು, ನೀವು PIN ಅನ್ನು ನಮೂದಿಸುವ ಅಗತ್ಯವಿಲ್ಲ, ಇದು ವಾಲೆಟ್‌ ನಿಂದ ನೇರವಾಗಿ ನಿಧಿಗಳಿಗೆ ಪ್ರವೇಶವನ್ನು ಪಡೆಯುತ್ತದೆ.

Join Nadunudi News WhatsApp Group

ಯುಪಿಐ ಲೈಟ್ ಮೂಲಕ ಒಂದು ಬಾರಿಗೆ 200 ರೂಪಾಯಿಗಳವರೆಗೆ ಪಾವತಿಸಬಹುದು, ಆದರೆ ಕೇವಲ 2,000 ರೂಪಾಯಿಗಳನ್ನು ಸೇರಿಸುವ ಮಿತಿ ಇದೆ. ಹಾಗೆಯೆ ಫೀಚರ್ ಫೋನ್‌ ಗಳನ್ನು ಬಳಸುವ ಜನರು ಐವಿಆರ್ ಸಂಖ್ಯೆಯ ಮೂಲಕ ಯುಪಿಐ ವಹಿವಾಟುಗಳನ್ನು ಮಾಡಬಹುದು. ಇದರಲ್ಲೂ ಇಂಟರ್ನೆಟ್ ಸಹಾಯವಿಲ್ಲದೆ ವಹಿವಾಟು ನಡೆಯುತ್ತದೆ. ಮೊದಲನೆಯದಾಗಿ ನೀವು IVR ಸಂಖ್ಯೆ 080 4516 3666 ಅಥವಾ 6366 200 200 ಗೆ ಕರೆ ಮಾಡುವ ಮೂಲಕ ನಿಮ್ಮ UPI ಐಡಿಯನ್ನು ಪರಿಶೀಲಿಸಬೇಕು. ನಂತರ ನೀವು ಕರೆಯಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸುವ ಮೂಲಕ ನಿಮ್ಮ ಪಾವತಿಯನ್ನು ಮಾಡಬಹುದು.

UPI Payment Latest Update
Image Credit: Live Mint

Join Nadunudi News WhatsApp Group