Property Right: ಹೆಣ್ಣು ಮಕ್ಕಳಿಗೆ ಗೊತ್ತಿಲ್ಲದೇ ತಂದೆ ಆಸ್ತಿ ಮಾರಾಟ ಮಾಡಿದರೆ ಏನಾಗುತ್ತೆ? ಹೈಕೋರ್ಟ್ ಹೊಸ ತೀರ್ಪು.

ಹೆಣ್ಣು ಮಕ್ಕಳ ಅನುಮತಿ ಇಲ್ಲದೆ ತಂದೆ ಆಸ್ತಿಯನ್ನು ಮಾರಾಟ ಮಾಡಿದರೆ ಏನಾಗುತ್ತದೆ ಎನ್ನುವ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ತಿಳಿಯಿರಿ.

Daughter Property Right: ಇತ್ತೀಚಿಗೆ ಭಾರತಿಯ ಕಾನೂನಿನಲ್ಲಿ ಆಸ್ತಿಯ (Property) ಹಂಚಿಕೆಯ ಕುರಿತಾಗಿ ಸಾಕಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಹೆಣ್ಣುಮಕ್ಕಳ ಆಸ್ತಿ ಹಕ್ಕಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳ ಹಕ್ಕಿನ ಕುರಿತಾಗಿ ಸಾಕಷ್ಟು ಗೊಂದಲಗಳು ಏರ್ಪಡುತ್ತವೆ.

ಇನ್ನು ಹೆಣ್ಣು ಮತ್ತು ಗಂಡಿಗೆ ಆಸ್ತಿಯಲ್ಲಿ ಸಮಾನ ಹಂಚಿಕೆಯನ್ನು ಮಾಡಲು ಭಾರತಿಯ ಕಾನೂನು ಸಾಕಾಷ್ಟು ತಿದ್ದುಪಡಿಯನ್ನು ಜಾರಿಗೆ ತಂದಿದೆ. ಇದೀಗ ತಂದೆ ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ತಿಳಿಸದೇ ಮಾರಾಟ ಮಾಡಿದರೆ ಏನಾಗುತ್ತದೆ ಎನ್ನುವ ಕುರಿತು ಕಾನೂನು ಆದೇಶವನ್ನು ನೀಡಿದೆ. 

Daughters also have equal share in father's property
Image Credit: Livelaw

ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡಾ ಸಮಪಾಲು
ತಂದೆಯ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕು ಇದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ತಂದೆಯ ಆಸ್ತಿಯಲ್ಲಿ ಮಗ ಎಷ್ಟು ಹಕ್ಕನ್ನು ಹೊಂದಿರುತ್ತಾನೋ ಅಷ್ಟೇ ಹಕ್ಕನ್ನು ಮಗಳು ಕೂಡ ಹೊಂದಿರುತ್ತಾಳೆ. ಮಗ ಮತ್ತು ಮಗಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಂಚಿಕೆ ಆಗಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ. ಕಾನೂನಿನ ಪ್ರಕಾರ, ಹೆಣ್ಣು ಮಕ್ಕಳಿಗೆ ಅವರ ಸಹೋದರರ ಜೊತೆಗೆ ಆಸ್ತಿಯಲ್ಲಿ ಸಮಪಾಲು ನೀಡಬೇಕು.

ಹೆಣ್ಣುಮಕ್ಕಳಿಗೆ ಗೊತ್ತಿಲ್ಲದೇ ತಂದೆ ಆಸ್ತಿ ಮಾರಾಟ ಮಾಡಿದರೆ ಏನಾಗುತ್ತದೆ
2005 ರ ತಿದ್ದುಪಡಿಯ ನಂತರ ಆಸ್ತಿ ವಿಚಾರದಲ್ಲಿ ಹೆಣ್ಣು ಮಕ್ಕಳ ಅನುಮತಿಯಿಲ್ಲದೆ ಪಿತ್ರಾರ್ಜಿತವಾಗಲಿ ಅಥವಾ ಸ್ವಯಾರ್ಜಿತವಾಗಲಿ ಯಾವುದೇ ಕೆಲಸವನ್ನು ಮಾಡಲು ಅನುಮತಿ ಇರುವುದಿಲ್ಲ.

Daughters also have equal share in father's property
Image Credit: Blog.ipleaders

ಯಾವುದೇ ಕ್ಲೈಮ್ ಗಳೊಂದಿಗೆ ಮುಂದುವರೆಯುವ ಮೊದಲು ಆಸ್ತಿಯು ಸ್ವಯಂ ಸ್ವಾಧೀನಪಡಿಸಿಕೊಂಡಿದೆಯೇ ಅಥವಾ ಪಿತ್ರಾರ್ಜಿತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

Join Nadunudi News WhatsApp Group

2005 ರ ಮೊದಲು ಆಸ್ತಿ ನೋಂದಣಿಯಾಗಿದ್ದು, ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಅದನ್ನು ಪ್ರಶ್ನಿಸುವಂತಿಲ್ಲ. ಹೆಣ್ಣು ಮಕ್ಕಳಿಗೆ ಯಾವುದೇ ಪಾಲು ನೀಡದೆ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ ಅಥವಾ ನೋಂದಾಯಿಸಿದ ಪ್ರಕರಣಗಳಲ್ಲಿ, 2005 ರ ನಂತರ ಪಿತ್ರಾರ್ಜಿತ ಆಸ್ತಿಯನ್ನು ಪಡೆದಿದ್ದರೆ ಅದನ್ನು ಪ್ರಶ್ನಿಸುವ ಹಕ್ಕು ಹೆಣ್ಣುಮಕ್ಕಳಿಗೆ ಇರುತ್ತದೆ.

Join Nadunudi News WhatsApp Group