Property Rights: ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ನೀಡದಿದ್ದರೆ ಏನಾಗುತ್ತದೆ, ಹೈಕೋರ್ಟ್ ಆದೇಶ.

ಹೆಣ್ಣು ಮಕ್ಕಳಿಗೆ ಆಸ್ತಿ ನೀಡದಿದ್ದರೆ ಹೆಣ್ಣು ಮಕ್ಕಳು ಯಾವ ರೀತಿಯಾಗಿ ಆಸ್ತಿಯನ್ನು ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ.

Women’s Property Right In India: ಹೆಣ್ಣುಮಕ್ಕಳ ಆಸ್ತಿ (Property) ಹಂಚಿಕೆಯ ಕುರಿತು ಕಾನೂನಿನಲ್ಲಿ ವಿವಿಧ ರೀತಿಯ ತಿದ್ದುಪಡಿಯನ್ನು ತರಲಾಗಿದೆ. ಇನ್ನು ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳ ಹಕ್ಕಿನ ಕುರಿತಾಗಿ ಸಾಕಷ್ಟು ಗೊಂದಲಗಳು ಏರ್ಪಡುತ್ತವೆ. ಇನ್ನು ಹೆಣ್ಣು ಮತ್ತು ಗಂಡಿಗೆ ಆಸ್ತಿಯಲ್ಲಿ ಸಮಾನ ಹಂಚಿಕೆಯನ್ನು ಮಾಡಲು ಭಾರತಿಯ ಕಾನೂನು ಆದೇಶವನ್ನು ಹೊರಡಿಸಿದೆ.

ಇನ್ನು ಭಾರತೀಯ ಕಾನೂನಿನ ಪ್ರಕಾರ ಆಸ್ತಿ ವಿಭಾಗ ಮಾಡುವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ನೀಡದಿದ್ದರೆ ಹೆಣ್ಣು ಮಕ್ಕಳು ಯಾವ ರೀತಿಯಾಗಿ ಆಸ್ತಿಯನ್ನು ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಹೆಣ್ಣು ಮಕ್ಕಳ ಆಸ್ತಿಯ ಹಕ್ಕು
2005 ರ ತಿದ್ದುಪಡಿಯ ನಂತರ ಆಸ್ತಿ ವಿಚಾರದಲ್ಲಿ ಹೆಣ್ಣು ಮಕ್ಕಳ ಅನುಮತಿಯಿಲ್ಲದೆ ಪಿತ್ರಾರ್ಜಿತವಾಗಲಿ ಅಥವಾ ಸ್ವಯಾರ್ಜಿತವಾಗಲಿ ಯಾವುದೇ ಕೆಲಸವನ್ನು ಮಾಡಲು ಅನುಮತಿ ಇರುವುದಿಲ್ಲ.

What happens if property is not given to womens
Image Credit: Homecapital

ಯಾವುದೇ ಕ್ಲೈಮ್ ಗಳೊಂದಿಗೆ ಮುಂದುವರೆಯುವ ಮೊದಲು ಆಸ್ತಿಯು ಸ್ವಯಂ ಸ್ವಾಧೀನಪಡಿಸಿಕೊಂಡಿದೆಯೇ ಅಥವಾ ಪಿತ್ರಾರ್ಜಿತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. 2005 ರ ತಿದ್ದುಪಡಿಯ ನಂತರ ಹೆಣ್ಣು ಮಕ್ಕಳು ಆಸ್ತಿಯ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.

ಯಾವಾಗ ಹೆಣ್ಣುಮಕ್ಕಳಿಗೆ ಆಸ್ತಿಯ ಮೇಲೆ ಹಾಕಿಲ್ಲ
2005 ರ ಮೊದಲು ಆಸ್ತಿ ನೋಂದಣಿಯಾಗಿದ್ದು, ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಅದನ್ನು ಪ್ರಶ್ನಿಸುವಂತಿಲ್ಲ. 2005 ರ ಮೊದಲು ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯ ಮೇಲೆ ಯಾವುದೇ ಹಕ್ಕನ್ನು ಹೊಂದಿಲ್ಲ. 2005 ರ ನಂತರದ ತಿದ್ದುಪಡಿಯ ಪ್ರಕಾರ, ಹೆಣ್ಣು ಮಕ್ಕಳಿಗೆ ಯಾವುದೇ ಪಾಲು ನೀಡದೆ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಅಥವಾ ನೋಂದಾಯಿಸಿದ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳು ಅದನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿರುತ್ತಾರೆ.

Join Nadunudi News WhatsApp Group

What happens if property is not given to womens
Image Credit: Sochparprahaar

ಹೆಣ್ಣು ಮಕ್ಕಳಿಗೆ ಆಸ್ತಿ ನೀಡದಿದ್ದರೆ ಏನಾಗುತ್ತದೆ
ತಂದೆಯ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕು ಇದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ತಂದೆಯ ಆಸ್ತಿಯಲ್ಲಿ ಮಗ ಎಷ್ಟು ಹಕ್ಕನ್ನು ಹೊಂದಿರುತ್ತಾನೋ ಅಷ್ಟೇ ಹಕ್ಕನ್ನು ಮಗಳು ಕೂಡ ಹೊಂದಿರುತ್ತಾಳೆ. ಮಗ ಮತ್ತು ಮಗಳಿಗೆ ತಂದೆಯ ಆಸ್ತಿಯಲ್ಲಿ ಸಮಾನ ಹಂಚಿಕೆ ಆಗಬೇಕು ಎಂದು ಕೋರ್ಟ್ ಆದೇಶ ಹೊರಡಿಸಿದೆ.

ಕಾನೂನಿನ ಪ್ರಕಾರ, ಹೆಣ್ಣು ಮಕ್ಕಳಿಗೆ ಅವರ ಸಹೋದರರ ಜೊತೆಗೆ ಆಸ್ತಿಯಲ್ಲಿ ಸಮಪಾಲು ನೀಡದಿದ್ದರೆ ಹೆಣ್ಣುಮಕ್ಕಳಿಗೆ ತಮ್ಮ ಆಸ್ತಿಯ ಹಕ್ಕನ್ನು ಪಡೆಯಲು ಸಂಪೂರ್ಣ ಅಧಿಕಾರವಿರುತ್ತದೆ.

Join Nadunudi News WhatsApp Group