Reservation: ದೇಶದ ಎಲ್ಲಾ ಮಹಿಳೆಯರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್, ಮಹತ್ವದ ಘೋಷಣೆ ಮಾಡಿದ ಮೋದಿ ಸರ್ಕಾರ.
ದೇಶದ ಎಲ್ಲಾ ಮಹಿಳೆಯರಿಗೆ ಹೊಸ ಮಸೂದೆ ಮಂಡನೆ ಮಾಡಿದ ಕೇಂದ್ರ ಸರ್ಕಾರ.
Women’s Reservation 33%: ಕೇಂದ್ರದ ಮೋದಿ (Narendra Modi) ಸರ್ಕಾರ ದೇಶದ ಜನತೆಗಾಗಿ ವಿವಿದ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ದೇಶದ ಬಡ ಜನರಿಗೆ ನೆರವಾಗಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ. ಅದರಲ್ಲೂ ಹೆಚ್ಚಾಗಿ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಮಹಿಳೆಯರ ಸಬಲೀಕರಣದತ್ತ ಗಮನ ಹರಿಸಿದೆ. ದೇಶದ ಮಹಿಳೆಯರು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ದೇಶದ ಎಲ್ಲಾ ಮಹಿಳೆಯರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್
ಈಗಾಗಲೇ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗಾಗಿ ವಿವಿಧ ರೀತಿಯ ಸೌಕರ್ಯಗಳನ್ನು ಮಾಡಿಕೊಟ್ಟಿದೆ. ಮಹಿಳೆಯರ ಸ್ವಾಲಂಭಿ ಜೀವನಕ್ಕೆ ಮೋದಿ ಸರ್ಕಾರ ಸಹಾಯವಾಗಿದೆ. ವಿವಿಧ ಯೋಜನೆಗಳನ್ನು ಮಹಿಳೆಯರಿಗಾಗಿ ರೂಪಿಸಿರುವ ಸರ್ಕಾರ ಇದೀಗ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ದೇಶದ ಮಹಿಳೆಯರಿಗಾಗಿ ಮೋದಿ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದೆ.
ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ Ladies Reservation
ಸದ್ಯ ಇತ್ತೀಚಿಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಲು ಅನುಮೋದನೆ ನೀಡಲಾಗಿದೆ. ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ. 33 ಅಥವಾ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸಲು ಈ ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಮಸೂದೆಯು SC , ST ಮತ್ತು ಆಂಗ್ಲೋ ಇಂಡಿಯನ್ನರಿಗೆ ಶೇ.33 ರಷ್ಟು ಕೋಟದೊಳಗೆ ಉಪ ಮೀಸಲಾತಿಯನ್ನು ಕೂಡ ಪ್ರಸ್ತಾಪಿಸಲಾಗದೆ. ಪ್ರತಿ ಸಾರ್ವತಿಕ ಚುನಾವಣೆಯ ನಂತರ ಮೀಸಲು ಸ್ಥಾನಗಳನ್ನು ಬದಲಾವಣೆ ಮಾಡಬೇಕು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಧಾನಿ ಮೋದಿ ಅವರ ನೇತೃತ್ವದ ಸಭೆಯಲ್ಲಿ ಮಹಿಳಾ ಮೀಸಲಾತಿಗೆ ಅನುಮೋದನೆ ನೀಡಲಾಗಿದೆ. ಮಸೂದೆಯನ್ನು ನಾಳೆ ಹೊಸ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.