Women’s Right: ಇನ್ಮುಂದೆ ಪತ್ನಿಯ ಈ ಆಸ್ತಿಯ ಮೇಲೆ ಗಂಡನಿಗೆ ಯಾವುದೇ ಹಕ್ಕಿಲ್ಲ, ಸುಪ್ರೀಂ ಕೋರ್ಟ್ ತೀರ್ಪು.

ಇನ್ಮುಂದೆ ಪತ್ನಿಯ ಈ ಆಸ್ತಿಯ ಮೇಲೆ ಗಂಡನಿಗೆ ಯಾವುದೇ ಹಕ್ಕಿಲ್ಲ

Women’s Right: ದೇಶದಲ್ಲಿ ಆಸ್ತಿಯ ವಿಚಾರವಾಗಿ ಸಾಕಷ್ಟು ಗೊಂದಲಗಳು ಏರ್ಪಡುತ್ತವೆ. ಈಗಲೂ ಕೂಡ ಆಸ್ತಿಯ ಹಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರದ ಅದೆಷ್ಟೋ ಜನರಿದ್ದಾರೆ. ಸಾಮಾನ್ಯವಾಗಿ ಹಣಕಾಸಿನ ವಿಚಾರವಾಗಿ, ಆಸ್ತಿಯ ವಿಚಾರವಾಗಿ ಹೆಣ್ಣು ಮಕ್ಕಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುವುದಿಲ್ಲ. ಆದರೆ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಸಮಾನ ಅಧಿಕಾರವನ್ನು ಹೊಂದಿರುತ್ತಾರೆ.

ಹಣಕಾಸಿನ ವಿಚಾರದಿಂದ ಹೆಣ್ಣುಮಕ್ಕಳನ್ನು ದೂರ ಇಡುವವರೇ ಹೆಚ್ಚು. ಇನ್ನು ಹೆಂಡತಿಗೆ ತನ್ನ ಗಂಡನ ಆಸ್ತಿಯ ಹಕ್ಕಿನ ಬಗ್ಗೆ ಹಾಗೆಯೆ ಗಂಡನಿಗೆ ತನ್ನ ಹೆಂಡತಿಯ ಆಸ್ತಿಯ ಹಕ್ಕಿನ ಬಗ್ಗೆ ಮಾಹಿತಿ ತಿಳಿದಿರುವುದು ಅಗತ್ಯ. ಕೆಲ ಸಂದರ್ಭದಲ್ಲಿ ಪತ್ನಿಯ ಆಸ್ತಿಯ ಮೇಲೆ ಗಂಡನಿಗೆ ಹಕ್ಕು ಇರುವುದಿಲ್ಲ. ಸದ್ಯ ಹೈಕೋರ್ಟ್ ಪತ್ನಿಯ ಈ ಆಸ್ತಿಯ ಮೇಲೆ ಗಂಡನಿಗೆ ಯಾವುದೇ ಅಧಿಕಾರ ಇಲ್ಲ ಎನ್ನುವ ಬಗ್ಗೆ ಘೋಷಣೆ ಹೊರಡಿಸಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Husband Rights On Wife's Property
Image Credit: Ipleaders

ಇನ್ಮುಂದೆ ಪತ್ನಿಯ ಈ ಆಸ್ತಿಯ ಮೇಲೆ ಗಂಡನಿಗೆ ಯಾವುದೇ ಹಕ್ಕಿಲ್ಲ
ಸದ್ಯ ಮಹಿಳೆಯರ ಆಸ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ಮಹಿಳೆಯ ಹಣವೇ ಆಕೆಯ ಸಂಪೂರ್ಣ ಆಸ್ತಿಯಾಗಿದ್ದು, ಅದನ್ನು ತನಗೆ ಬೇಕಾದಂತೆ ಖರ್ಚು ಮಾಡುವ ಎಲ್ಲ ಹಕ್ಕು ಆಕೆಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮಹಿಳೆಯ ಸಂಪತ್ತಿನಲ್ಲಿ ಪತಿ ಎಂದಿಗೂ ಪಾಲುದಾರನಾಗಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ, ಆದರೆ ಜೀವನದಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ಪತಿ ಅದನ್ನು ಹೆಂಡತಿ ಬಯಸಿದಂತೆ ಬಳಸಬಹುದು ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಪೀಠವು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿ ಪತ್ನಿಯ ಎಲ್ಲಾ ಆಭರಣಗಳನ್ನು ದೋಚಿದ್ದಕ್ಕಾಗಿ ಪತಿಗೆ 25 ಲಕ್ಷ ರೂಪಾಯಿ ಆರ್ಥಿಕ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. ಜೀವನ ವೆಚ್ಚದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಸಮಾನತೆ ಮತ್ತು ನ್ಯಾಯದ ಹಿತದೃಷ್ಟಿಯಿಂದ, ಅರ್ಜಿದಾರರ ನೊಂದ ಮಹಿಳೆಗೆ ಪರಿಹಾರವನ್ನು ನೀಡಲು ಆದೇಶಿಸಲಾಗಿದೆ.

Women's Property Rights
Image Credit: Karnatakatimes

Join Nadunudi News WhatsApp Group

Join Nadunudi News WhatsApp Group