Flying Car: ವಿಶ್ವದ ಮೊದಲ ಹಾರುವ ಕಾರ್ ಬಿಡುಗಡೆ, ಒಮ್ಮೆ ಚಾರ್ಜ್ ಮಾಡಿದರೆ 110 ಮೈಲು ಹಾರಿಕೊಂಡು ಚಲಿಸುತ್ತೆ.

ವಿಶ್ವದ ಮೊದಲ ಹಾರುವ ಕಾರ್ ಈಗ ಲಾಂಚ್ ಆಗಿದೆ.

Flying Car Launch: ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾರುಗಳು ಬಿಡುಗಡೆಯಾಗುತ್ತಿದ್ದು ಉತ್ತಮ ರೀತಿಯಲ್ಲಿ ಸೇಲ್ ಕಾಣುತ್ತಿವೆ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ನೂತನ ವಿನ್ಯಾಸದೊಂದಿಗೆ ಜನರನ್ನು ಅಚ್ಚರಿಗೊಳಿಸುವ ಸಾಕಷ್ಟು ಮಾದರಿಯ ಕಾರ್ ಗಳು ಈಗಾಗಲೇ ಪರಿಚಯವಾಗಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ಚಕ್ರಗಳೇ ಇಲ್ಲದಿರುವ ಕಾರ್ ಗಳು, ಚಾಲಕ ಬೇಕಿರದ ಕಾರ್ ಗಳು ಬಿಡುಗಡೆಯಾಗಿವೆ. ಇದೀಗ ಹೊಸತಾಗಿ ಹಾರುವ ಕಾರಿನ ಬಗ್ಗೆ ಮಾರುಕಟ್ಟೆಯಲ್ಲಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಹಕ್ಕಿಯಂತೆ ಹಾರುವ ಈ ಕಾರು ಎಲೆಕ್ಟ್ರಿಕ್ ಕರಾಗಿದ್ದು, ವಿಶ್ವದ ಮೊದಲ ಹಾರುವ ಕಾರ್ ಎಂದು ಗುರುತಿಸಿಕೊಂಡಿದೆ.

world first flying car
Image Credit: reddit

ವಿಶ್ವದ ಮೊದಲ ಹಾರುವ ಕಾರ್ ಬಿಡುಗಡೆ
ಅಲೆಫ್ ಏರೊನಾಟಿಕ್ಸ್ ಸಂಸ್ಥೆ ಈ ಹಾರುವ ಕಾರನ್ನು ತಯಾರಿಸಲಾಗುತ್ತಿದೆ. ಈ ಹಾರುವ ಕಾರು ಲಂಬವಾಗಿ ಟೆಕ್ ಅಪ್ ಮತ್ತು ಲ್ಯಾಂಡಿಂಗ್ ಮಾಡುವ ಸಾಮರ್ಥ್ಯಗಳನ್ನು ಹೊಂದಿದೆ. ಇದರಲ್ಲಿ ಒಬ್ಬರು ಅಥವಾ ಇಬ್ಬರು ಪ್ರಯಾಣಿಸಬಹುದು.

ಟ್ರಾಫಿಕ್ ಸಮಸ್ಯೆ ತಪ್ಪಿಸಲು ಅಮೇರಿಕಾದಲ್ಲಿ ನೂತನವಾಗಿ ಹಾರುವ ಕಾರನ್ನೂ ಸಿದ್ದಪಡಿಸಲಾಗಿದೆ. ಅಲೆಫ್ ಏರೋನಾಟಿಕ್ಸ್ ಅಭಿವೃದಿಪಡಿಸಿದ ಹಾರುವ ಕಾರಿಗೆ US ಸರ್ಕಾರ ಅನುಮೋದನೆ ನೀಡಿದೆ. ಇನ್ನು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ನಿಂದ ಪ್ರಮಾಣೀಕರಿಸಲಾಗಿದೆ ಎಂದು ತಯಾರಕರು ಹೇಳಿದ್ದಾರೆ.

first flying car in america
Image Credit: prnewswire

ಒಮ್ಮೆ ಚಾರ್ಜ್ ಮಾಡಿದರೆ 110 ಮೈಲು ಹಾರಿಕೊಂಡು ಚಲಿಸಲಿದೆ
ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದೆ. ಇದರ ಬೆಲೆ 3 ಲಕ್ಷ ಡಾಲರ್ ಆಗಿದೆ. ಅಂದರೆ ಇದರ ಮೌಲ್ಯ 2 .46 ಕೋಟಿ ರೂಪಾಯಿಗೂ ಹೆಚ್ಚು. 2025 ರ ಅಂತ್ಯದ ವೇಳೆಗೆ ಹಾರುವ ಕಾರುಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಹಾರುವ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ 110 ಮೈಲುಗಳಷ್ಟು ಹಾರಿಕೊಂಡು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group