Xiaomi EV: ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 1200 Km ಮೈಲೇಜ್, ಈ Xiamoi ಕಾರಿನ ಮುಂದೆ ಮಂಕಾದ ಟೆಸ್ಲಾ

ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸಿದ Xiaomi

Xiaomi SU7 Electric Car: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಕಾರ್ ತಯಾರಕ ಕಂಪನಿಗಳು ನೂತನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಬಂದಿವೆ. ಸದ್ಯ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಯಾದ Xiaomi ಇದೀಗ ಕಾರ್ ತಯಾರಿಕೆಗೆ ಮುಂದಾಗಿದೆ.

ಹೌದು, Smartphone ಗಳ ಜೊತೆಗೆ ಕಾರ್ ಅನ್ನು ಪರಿಚಯಿಸಲು ಕಂಪನಿಯು ಮುಂದಾಗಿದೆ. ಇದೀಗ Xiaomi ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು 2024 ರಲ್ಲಿ ಬಹಿರಂಗಪಡಿಸಿದೆ. Xiaomi ನೂತನ ಮಾದರಿಯ ಎಲೆಕ್ಟ್ರಿಕ್ ಕಾರ್ ನ ಬಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Xiaomi SU7 Electric Car Price In India
Image Credit: Yankodesign

ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸಿದ Xiaomi
ಸ್ಪೇನ್‌ ನ ಬಾರ್ಸಿಲೋನಾದಲ್ಲಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ನಲ್ಲಿ Xiaomi ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದೆ. ಈ ಹೊಸ ಎಸ್‌ ಯುವಿಯನ್ನು ಪ್ರದರ್ಶಿಸಿಕ್ಮಪಿಣಿಯೂ ಹೆಚ್ಚಿನ ಪ್ರಶಂಸೆಯನ್ನು ಪಡೆದುಕೊಂಡಿದೆ. Xiaomi SU7 ಎಲೆಕ್ಟ್ರಿಕ್ ಕಾರಿನ ವಿತರಣೆಗಳು ಈ ವರ್ಷದ ಏಪ್ರಿಲ್‌ ನಲ್ಲಿ ಚೀನಾ ಮತ್ತು ಇತರ ಮಾರುಕಟ್ಟೆಗಳಲ್ಲಿ ಪ್ರಾರಂಭವಾಗಬಹುದು ಎಂದು ಕಂಪನಿ ಹೇಳಿದೆ.

ಈ ಕಾರು ಮಾರ್ಚ್ ವೇಳೆಗೆ ಸುಮಾರು 2000 ಯುನಿಟ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಜುಲೈ ವೇಳೆಗೆ ಈ ನಿರ್ಮಾಣವನ್ನು 10,000 ಘಟಕಗಳಿಗೆ ಹೆಚ್ಚಿಸಲು ಯೋಜಿಸಲಾಗಿದೆ. Xiaomi ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ಈವೆಂಟ್‌ ನಲ್ಲಿ SU7 ಎಲೆಕ್ಟ್ರಿಕ್ ಕಾರಿನ ಉನ್ನತ ರೂಪಾಂತರವಾದ ‘Xiaomi SU7 ಮ್ಯಾಕ್ಸ್’ ಅನ್ನು ಪ್ರದರ್ಶಿಸಿತು. ಇದು ಹೆಚ್ಚಿನ ಕಾರ್ಯಕ್ಷಮತೆ ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರಲಿದೆ. SU7 ಮ್ಯಾಕ್ಸ್ ಮಾದರಿಯು ಎಲೆಕ್ಟ್ರಿಕ್ ಕಾರ್ ವಿಭಾಗದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ.

Xiaomi SU7 Electric Car Mileage
Image Credit: Eprmagazine

ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 1200km ರೇಂಜ್
ಆವೃತ್ತಿಯು 673 hp ಪವರ್ ಮತ್ತು 838 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಯಮಿತ ಆವೃತ್ತಿಯು 299 hp ಮತ್ತು 374 hp ನಡುವೆ ಪವರ್ ಔಟ್‌ ಪುಟ್ ಮತ್ತು 635 Nm ವರೆಗೆ ಗರಿಷ್ಠ ಟಾರ್ಕ್ ಉತ್ಪಾದನೆಯನ್ನು ಹೊಂದಿರುತ್ತದೆ. SU7 ಮ್ಯಾಕ್ಸ್ ಒಂದೇ ಚಾರ್ಜ್‌ನಲ್ಲಿ 1,200 ಕಿಮೀಗಿಂತ ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಆಂತರಿಕವಾಗಿ ಅಭಿವೃದ್ಧಿಪಡಿಸಿದ CTB (ಸೆಲ್-ಟು-ಬಾಡಿ) ತಂತ್ರಜ್ಞಾನದೊಂದಿಗೆ ಬರುತ್ತದೆ.

Join Nadunudi News WhatsApp Group

Join Nadunudi News WhatsApp Group