Yamaha R3: ಭರ್ಜರಿ ಮೈಲೇಜ್ ನೀಡಲಿದೆ ಯಮಹ ಹೊಸ ಬೈಕ್, ಬೆಲೆ ಎಷ್ಟಿದೆ..?

ಪ್ರತಿ ಲೀಟರ್ ಗೆ 35 ಕಿಲೋಮೀಟರ್ ಮೈಲೇಜ್ ನೀಡುವ Yamaha R3.

Yamaha R3 Bike: ಸಾಮಾನ್ಯವಾಗಿ Bike ಖರೀದಿಯ ಮೇಲೆ ಯುವಕರು ಹೆಚ್ಚಿನ ಆಸಕ್ತಿ ತೋರುತ್ತಾರೆ. ವಿಭಿನ್ನ ಮಾದರಿಯ ಬೈಕ್ ಗಳ ಖರೀದಿಗೆ ಮನಸ್ಸುತ್ತಾರೆ. ಮರುಕಟ್ಟೆಯಲ್ಲಂತೂ ಬೈಕ್ ಗಳ ಸಂಖ್ಯೆ ಹೆಚ್ಚಿದೆ. ವಿವಿಧ ಬೈಕ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಬೈಕ್ ಗಳನು ಯುವಕರ ಆಯ್ಕೆಗೆ ನೀಡುತ್ತಾ ಇರುತ್ತವೆ. ಸದ್ಯ ಯಮಹ ತನ್ನ ಬಹುನಿರೀಕ್ಷಿತ ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Yamaha R3 Bike
Image Credit:Gaadikey

Yamaha R3 Bike
ಜನಪ್ರಿಯ ಬೈಕ್ ತಯಾರಕ ಕಂಪೆನಿಯಾದ Yamaha ಇದೀಗ ಸುಧಾರಿತ ವೈಶಿಷ್ಟ್ಯದೊಂದಿಗೆ ವಿಭಿನ್ನ ಲುಕ್ ನ ನೂತನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಇದೀಗ Yamaha R3 Bike ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಸಿಗಲಿದೆ. ಈ ನೂತನ Yamaha R3 Bike ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ನೀವು ಹೊಸ ವರ್ಷಕ್ಕೆ ಹೊಸ ಬೈಕ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ ಈ ಬೈಕ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಹೊಸ ವರ್ಷಕ್ಕೂ ಮುನ್ನವೇ ನೂತನ ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಭರ್ಜರಿ ಮೈಲೇಜ್ ನೀಡಲಿದೆ ಯಮಹ ಹೊಸ ಬೈಕ್
Yamaha R3 Bike ನಲ್ಲಿ ಶಕ್ತಿಶಾಲಿ 321cc ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 42bhp ಮತ್ತು 29 .5MNm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ನೂತನ Yamaha R3 Bike ಸುಮಾರು 169KG ಇದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಶಕ್ಷಿಶಾಲಿ ಎಂಜಿನ್ ಅಣು ಹೊಂದಿರುವ Yamaha R3 Bike ಪ್ರತಿ ಲೀಟರ್ ಗೆ 35 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Yamaha R3 Bike Price
Image Credit: xbhp

Yamaha R3 Bike ನ ಮಾರುಕಟ್ಟೆ ಬೆಲೆ ಎಷ್ಟಿದೆ..?
ಇದು ಸಾಂಪ್ರದಾಯಿಕ LCD ಉಪಕರಣ ಕನ್ಸೋಲ್‌ ನ ಪರವಾಗಿ ಆಧುನಿಕ TFT ಡಿಸ್‌ ಪ್ಲೇ ಅನ್ನು ಸಹ ಹೊರಹಾಕಿದೆ. ಯಮಹಾ R3 ಬೈಕ್ ನಲ್ಲಿ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದ್ದು, ಬೆಲೆ ಮತ್ತು ವಿನ್ಯಾಸದಲ್ಲಿ , KTM RC 390 ಗಿಂತ ಉತ್ತಮವಾಗಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ Yamaha R3 Bike ಅನ್ನು 4 .10 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ Yamaha R3 Bike ನ ಎಂಟ್ರಿ ವಿವಿಧ ಸ್ಪೋರ್ಟ್ಸ್ ಬೈಕ್ ಗಳ ಬೇಡಿಕೆಯನ್ನು ಕುಗ್ಗಿಸಲಿದೆ. ಸದ್ಯದಲ್ಲೇ ನೂತನ ಮಾದರಿಯ ಬೈಕ್ ಯುವಕರ ಕೈಸೇರಲಿದೆ.

Join Nadunudi News WhatsApp Group

Join Nadunudi News WhatsApp Group