RX 100: ಭರ್ಜರಿ ಮೈಲೇಜ್, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್, ರಸ್ತೆಯನ್ನು ಆಳಲು ಬಂತು ಹೊಸ RX100.

ಭರ್ಜರಿ ಮೈಲೇಜ್, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್ ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧವಾಗಿದೆ ನೂತನ RX 100

Yamaha RX 100 Bike Price And Feature: ದೇಶದ ಜನಪ್ರಿಯ ಬೈಕ್ ತಯಾರಕ ಕಂಪನಿಗಳು ಹಲವು ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿವೆ. ಸದ್ಯ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಸಂಚಲನ ಮೂಡಿಸಲು Yamaha ಕಂಪನಿಯು ಇದೀಗ ತನ್ನ ಹೊಚ್ಚ ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಯಮಹದಾ ಈ ಹೊಚ್ಚ ಹೊಸ ಮಾದರಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇನ್ನು 90 ರ ದಶಕದಲ್ಲಿ ಮಾರಾಟವಾಗಿದ್ದ Yamaha RX 100 Bike ಇದೀಗ ಅತ್ಯಂತ ಸ್ಟೈಲಿಶ್ ಲುಕ್, ಪವರ್ ಫುಲ್ ಎಂಜಿನ್ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಮತ್ತೆ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧವಾಗಿದೆ. ದೇಶದ ದೊಡ್ಡ ಕಂಪನಿಗಳಿಗೆ ಪೈಪೋಟಿ ನೀಡಲು ಈ ನೂತನ ಮಾದರಿಯನ್ನು ತಯಾರಿ ಮಾಡಿದೆ.

Yamaha RX 100 Price In India
Image Credit: Original Source

ಭರ್ಜರಿ ಮೈಲೇಜ್, ಕಡಿಮೆ ಬೆಲೆ ಮತ್ತು ಆಕರ್ಷಕ ಫೀಚರ್
ಕಂಪನಿಯು Yamaha RX 100 Bike ನಲ್ಲಿ ಗರಿಷ್ಠ ನವೀಕರಣಗಳನ್ನು ತರುತ್ತಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಇದರಿಂದಾಗಿ ಇದು ಗ್ರಾಹಕರ ಮೊದಲ ಆಯ್ಕೆಯಾಗಲಿದೆ. ರೇಸಿಂಗ್‌ ಗೆ ಹೆಸರುವಾಸಿಯಾಗಿರುವ ಈ ಬೈಕ್ ಯುವಕರಿಗೆ ಹೆಚ್ಚು ಇಷ್ಟವಾಗಲಿದೆ.

ಕಂಪನಿಯು ಈ ಬೈಕ್‌ ನಲ್ಲಿ ಮೊದಲಿಗಿಂತ ಹೆಚ್ಚು ಶಕ್ತಿಶಾಲಿ ಎಂಜಿನ್ ಅನ್ನು ಒದಗಿಸಲಿದ್ದು, ಇದು ಹೊಸ ತಂತ್ರಜ್ಞಾನವನ್ನು ಆಧರಿಸಿರಲಿದೆ. ಇದರಿಂದಾಗಿ ಯಮಹಾ RX 100 ಬೈಕ್‌ ನಲ್ಲಿ 225cc BS6 ಹಂತದ ಎರಡು ಎಂಜಿನ್ ಅನ್ನು ಒದಗಿಸಲಿದೆ. ಇದರಿಂದಾಗಿ ಈ ಎಂಜಿನ್ 20bhp ಶಕ್ತಿಯೊಂದಿಗೆ 19.93 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಡಿಮೆ ನಿರ್ವಹಣೆ ಜೊತೆಗೆ ಉತ್ತಮ ಸೌಕರ್ಯದೊಂದಿಗೆ ಪ್ರತಿ ಲೀಟರ್‌ ಗೆ 65 ಕಿಲೋಮೀಟರ್ ಮೈಲೇಜ್ ನೀಡಲು ಸಾಧ್ಯವಾಗುತ್ತದೆ.

Yamaha RX 100 Price And Features
Image Credit: Timesbull

ರಸ್ತೆಯನ್ನು ಆಳಲು ಬಂತು ಹೊಸ RX100
ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡಿಜಿಟಲ್ ಸ್ಪೀಡೋಮೀಟರ್, ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಟ್ರಿಪ್ ಮೀಟರ್, ಡಿಜಿಟಲ್ ಗಡಿಯಾರ, ಫ್ಯೂಯಲ್ ಗೇಜ್, ನ್ಯಾವಿಗೇಷನ್, ರಿಯಲ್-ಟೈಮ್ ನ್ಯಾವಿಗೇಶನ್‌ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಯಮಹಾ ಆರ್‌ಎಕ್ಸ್ 100 ನ ವೈಶಿಷ್ಟ್ಯಗಳಲ್ಲಿ ಕೂಡ ಹಲವಾರು ಮಾದರಿಯ ಬೈಕ್ ಗಳನ್ನೂ ಹಿಂದಿಕ್ಕಲಿದೆ. ಯಮಹಾ ಈ ಬೈಕ್ ಅನ್ನು ಕೈಗೆಟುಕುವ ಬೆಲೆಯಲ್ಲಿ ತರುತ್ತಿದೆ. ಇದರ ಬೆಲೆ ಸುಮಾರು 1 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. 2025 ರ ಆರಂಭದಲ್ಲಿ RX 100 ಅನ್ನು ಬಿಡುಗಡೆ ಮಾಡಬಹುದು.

Join Nadunudi News WhatsApp Group

Yamaha RX 100 Bike Mileage
Image Credit: Timesbull

Join Nadunudi News WhatsApp Group