RX100: ಯುವಕರಿಗೆ ಬಂಪರ್ ಗುಡ್ ನ್ಯೂಸ್, ಮತ್ತೆ ಮಾರುಕಟ್ಟೆಗೆ ಬಂದಿದೆ ಯಮಃ RX100 ಕಡಿಮೆ ಬೆಲೆಯಲ್ಲಿ.

ಯಮಹಾ rx 100 ಬೈಕ್ ಖರೀದಿಸಬೇಕೆಂದು ಆಸೆ ಇಟ್ಟುಕೊಂಡವರಿಗೆ ಸಿಹಿ ಸುದ್ದಿ, ಭಾರತದಲ್ಲಿ ಮತ್ತೆ ಬಿಡುಗಡೆಯಾಗಲಿದೆ rx 100

Yamaha RX 100 2023: ಸಾಮಾನ್ಯವಾಗಿ ಬೈಕ್ ಖರೀದಿಸುವ ಆಸೆ ಯುವಕರಿಗೆ ಹೆಚ್ಚು ಇರುತ್ತದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಬೈಕ್ ಗಳು ಲಗ್ಗೆ ಇಡುತ್ತಿವೆ. ಇದೀಗ ಯಮಹಾ ಕಂಪನಿಯ ಬೈಕ್ ಒಂದು ಮಾರುಕಟ್ಟೆಗೆ ಬರುತ್ತಿದೆ. ಇದರ ವಿಶೇಷತೆ ಬಗ್ಗೆ ತಿಳಿಯೋಣ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಬೈಕ್
ಯಮಹಾ ಕಂಪನಿಯ ಬೈಕ್ ಹೆಚ್ಚು ಜನಪ್ರಿಯತೆ ಪಡೆದಿದೆ. ಯಮಹಾ ಕಂಪನಿಯ ಬೈಕ್ ಅನ್ನು ಯುವಕರು ಹೆಚ್ಚು ಇಷ್ಟಪಡುತ್ತಾರೆ. ಯಮಹಾ ಆರ್ ಎಕ್ಸ್ 100 ಬೈಕಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ.

Yamaha RX 100 will be relaunched in India
Image Credit: Cartoq

ಈ ಬೈಕ್ ಅನ್ನು ಹೆಚ್ಚಿನ ಜನರು ಇಷ್ಟಾಪಡುತ್ತಾರೆ. ಭಾರತದಲ್ಲಿ ಯಮಹಾ ಆರ್ ಎಕ್ಸ್ ಬೈಕ್ ಗೆ ಹೆಚ್ಚಿನ ಬೇಡಿಕೆ ಇದ್ದಿತ್ತು. ಆದರೆ ಈ ಬೈಕ್ 2003 ತನಕ ಮಾತ್ರ ಮಾರಾಟವಾಗಿದೆ. ನಂತರ ಈ ಬೈಕ್ ನ ಉತ್ಪಾದನೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ಬೈಕ್ ಖರೀದಿಸಬೇಕೆಂದು ಆಸೆ ಇಟ್ಟುಕೊಂಡವರಿಗೆ ಸಿಹಿ ಸುದ್ದಿ ಹೊರ ಬಿದ್ದಿದೆ.

ಯಮಹಾ ಆರ್ ಎಕ್ಸ್ 100
ಯಮಹಾ ಕಂಪನಿಯು ಹೊಸ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೈಕ್ ನ ಹೆಸರು RX ಎಂದು ಹೇಳಲಾಗುತ್ತಿದೆ. ಯಮಹಾ ಆರ್ ಎಕ್ಸ್ 100 ಬೈಕಿನಲ್ಲಿ 98.2 ಸಿಸಿ ಎರಡು ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11 ಬಿ ಹೆಚ್ ಪಿ ಪವರ್ ಮತ್ತು 10.45 ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Yamaha RX 100 will be relaunched in India
Image Credit: Wikipedia

1997 ರಲ್ಲಿ ಯಮಹಾ RXZ ಅನ್ನು ಬಿಡುಗಡೆ ಮಾಡಿತು. ಆದರೆ ಈ ಮಾದರಿಯು ಚಿಕ್ಕದಾದ ವೀಲ್ ಬೇಸ್ ನೊಂದಿಗೆ ಸಂಪೂರ್ಣವಾಗಿ ವಿಭಿನ್ನವಾದ ಛಾಸಿಸ್ ಅನ್ನು ಹೊಂದಿದೆ. ಈ ಮಾದರಿಯು 12 ಬಿ ಹೆಚ್ ಪಿ ನಲ್ಲಿ ಹೆಚ್ಚು ಪವರ್ ಅನ್ನು ಉತ್ಪಾದಿಸುತ್ತಿತ್ತು.

Join Nadunudi News WhatsApp Group

ಸದ್ಯ ೊಸ ಯಮಃ RX100 ಬೆಲೆ ಬಗ್ಗೆ ಇನ್ನೂ ಕೂಡ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಹೊಸ RX100 ಬೆಲೆ ಸುಮಾರು 1.50 ಲಕ್ಷ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group