RX100: ಕಾಲೇಜು ಯುವಕರ ನಿದ್ದೆ ಕೆಡಿಸಲು ಬಂತು ಹೊಸ RX 100 , ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್.

Yamaha RX100 Price And Feature: ಮಾರುಕಟ್ಟೆಯಲ್ಲಿ YAMAHA ಕಂಪನಿಯ ಬೈಕ್ ಹೆಚ್ಚು ಜನಪ್ರಿಯತೆ ಪಡೆದಿದೆ. ಮೈಲೇಜ್ ವಿಚಾರವಾಗಿ ಯಮಹಾ ಕಂಪನಿಯ ಬೈಕ್ ಅನ್ನು ಯುವಕರು ಹೆಚ್ಚು ಇಷ್ಟಪಡುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ Yamaha RX 100 ಬೈಕಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ.

ಹಿಂದೆ ಭಾರತದಲ್ಲಿ Yamaha RX100 ಬೈಕ್ ಗೆ ಹೆಚ್ಚಿನ ಬೇಡಿಕೆ ಇದ್ದಿತ್ತು, ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಂಪನಿ ಈ ಬೈಕ್ ಅನ್ನು ಸ್ಥಗಿತ ಮಾಡಿತ್ತು. ಸದ್ಯ ಈಗ ಮತ್ತೆ RX 100 ಬಿಡುಗಡೆ ಆಗಲಿದ್ದು ಇದು ಯುವಕರ ಸಂತಸಕ್ಕೆ ಕಾರಣವಾಗಿದೆ. Yamaha RX100 ಬೈಕ್ ಮತ್ತೆ ಖರೀದಿಗೆ ಲಭ್ಯವಾಗಲಿದೆ. ಕಡಿಮೆ ಬೆಲೆ ಹಾಗೂ ಆಕರ್ಷಕ ಮೈಲೇಜ್ ಆಯ್ಕೆಯೊಂದಿಗೆ Yamaha RX 100 ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Yamaha RX 100 Feature
Image Credit: Maxabout

Yamaha RX100
ಯಮಹಾ RX 100CC ಶಕ್ತಿಶಾಲಿ 100 cc ಎಂಜಿನ್‌ ನೊಂದಿಗೆ ಬರಲಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬೈಕ್ ಪ್ರತಿ ಲೀಟರ್‌ ಗೆ 65 ಕಿಲೋಮೀಟರ್‌ ಗಳವರೆಗೆ ಮೈಲೇಜ್ ನೀಡುವ ನಿರೀಕ್ಷೆಯಿದೆ. ಯಮಹಾ RX 100CC ಆಕರ್ಷಕ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಕಂಪನಿಯು ಆರಾಮದಾಯಕ ಆಸನಗಳು ಮತ್ತು ನವೀಕರಿಸಿದ ವಿನ್ಯಾಸದೊಂದಿಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಬೈಕ್ ನಲ್ಲಿ ಅಳವಡಿಸಿದೆ. ಬೈಕ್ ಉತ್ತಮ ಇಂಧನ ಟ್ಯಾಂಕ್‌ ನೊಂದಿಗೆ ಬರಲಿದ್ದು ವಾಹನ ಸವಾರರಿಗೆ ಆರಾಮದಾಯಕ ಪ್ರಯಾಣ ನೀಡಲಿದೆ.

ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್
ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದೊಂದಿಗೆ ಯಮಹಾ RX 100CC ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದ್ದು, ನೂತನ RX ಮಾದರಿ ಬುಲೆಟ್ ಬೈಕ್ ಗಳಿಗೆ ನೇರ ಸ್ಪರ್ಧೆ ನೀಡಲಿದೆ. ಇನ್ನು ಮಾರುಕಟ್ಟೆಯಲ್ಲಿ Yamaha RX100 ಸರಿಸುಮಾರಿ 1 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Yamaha RX100 Price
Image Credit: Postsen

ಹೆಚ್ಚಿನ ಫೀಚರ್ ಇರುವ ಬೈಕ್ ಅನ್ನು ನೀವು ಅತಿ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಯಮಹಾ RX100 ಬೈಕ್ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಫ್ಲಾಟ್-ಟೈಪ್ ಸೀಟ್, ದೊಡ್ಡ ಹ್ಯಾಂಡಲ್‌ಬಾರ್, ರೌಂಡ್ ಹೆಡ್‌ಲ್ಯಾಂಪ್ ಘಟಕ, ಕ್ರೋಮ್ಡ್ ಫೆಂಡರ್‌ಗಳು, ಅಪ್ಲಿಫ್ಟ್ ಎಕ್ಸಾಸ್ಟ್ ಸಿಸ್ಟಮ್, ಕ್ಲಾಸಿಕ್-ಲುಕಿಂಗ್ ಟೈಲ್‌ಲ್ಯಾಂಪ್ ಮತ್ತು ಆಧುನಿಕ ಅರೆ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇನ್ನೇನು ಕೆಲವೇ ಸಮಯದಲ್ಲಿ RX 100 ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದ್ದು ಯುವಕರ ನೆಚ್ಚಿನ ಬೈಕ್ ಅವರ ಕೈತಲುಪಲಿದೆ.

Join Nadunudi News WhatsApp Group

Join Nadunudi News WhatsApp Group