Yamaha RX 100: 90 ರ ದಶಕದ ಫೇಮಸ್ ಬೈಕ್ ಆಗಿದ್ದ RX 100 ಮತ್ತೆ ಮಾರುಕಟ್ಟೆಗೆ, ಕಡಿಮೆ ಬೆಲೆ ಮತ್ತು ಹೊಸ ಫೀಚರ್.

ಹೊಸ ಫೀಚರ್ ಮತ್ತು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು ಹೊಸ ಯಮಹಾ RX100

Yamaha RX 100 Price And Feature: ದಶಕಗಳ ಹಿಂದೆ ಸ್ಥಗಿತಗೊಂಡಿದ್ದ Yamaha RX 100 ಈಗಲೂ ಕೂಡ ಯುವಕ ನೆಚ್ಚಿನ ಬೈಕ್ ಲಿಸ್ಟ್ ನಲ್ಲಿದೆ. ಈ Bike ಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದಿತ್ತು. ಸ್ಥಗಿತಗೊಂಡಿದ್ದರು ಕೂಡ RX 100 ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ ಎನ್ನಬಹುದು. ಸದ್ಯ ಯಮಹಾ ಕಂಪನಿಯು ಮಾರುಕಟ್ಟೆಯಲ್ಲಿ ಮತ್ತೆ Yamaha RX 100 ಅನ್ನು Relaunch ಮಾಡಲು ಸಿದ್ಧತೆ ಮಾಡಿಕೊಂಡಿದೆ.

ತನ್ನ ಐಕಾನಿಕ್ RX100 ಬೈಕ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಕಂಪನಿಯು ತಯಾರಿ ನಡೆಸುತ್ತಿದೆ. ಕಡಿಮೆ ಬೆಲೆ ಹಾಗೂ ಆಕರ್ಷಕ ಮೈಲೇಜ್ ಆಯ್ಕೆಯೊಂದಿಗೆ Yamaha RX 100 ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೊಸ ಅವತಾರದಲ್ಲಿ ಯಮಹಾ RX100 ಮಾರುಕಟ್ಟೆಗೆ ಬರುತ್ತಿದ್ದು ಹೊಸ ಲುಕ್ ನಲ್ಲಿ ನಾವು Yamaha RX100 Bike ಕಾಣಬಹುದಾಗಿದೆ.

Yamaha RX 100 Price And Features
Image Credit: Timesbull

90 ರ ದಶಕದ ಫೇಮಸ್ ಬೈಕ್ ಆಡಿದ್ದ RX 100 ಮತ್ತೆ ಮಾರುಕಟ್ಟೆಗೆ
ಹೊಸ RX 100 ನಲ್ಲಿ ನೀವು ಹಿಂದಿನ 98 cc ಎಂಜಿನ್ ಬದಲಿಗೆ 225 cc BS6 ಎಂಜಿನ್ ಅನ್ನು ಪಡೆಯುವ ಸಾಧ್ಯತೆಯಿದೆ. ಈ ಎಂಜಿನ್ 20 bhp ಮತ್ತು 19.93 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.  ಹೊಸ RX 100 ನ ನೋಟ ಮತ್ತು ವೈಶಿಷ್ಟ್ಯಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಕಂಪನಿಯು ಈ ಬೈಕ್ ಅನ್ನು ರೆಟ್ರೊ ಲುಕ್ ಜೊತೆಗೆ ಕೆಲವು ಆಧುನಿಕ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲಿದೆ ಎಂದು ನಿರೀಕ್ಷಿಸಬಹುದು.

ಇದು ಪೂರ್ಣ ಎಲ್ಇಡಿ ಹೆಡ್ಲೈಟ್ ಗಳು,ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮಿಶ್ರಲೋಹದ ಚಕ್ರಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು. ಹೊಸ RX 100 ಆಗಮನದಿಂದ ಯುವಕರಲ್ಲಿ ಮಾತ್ರವಲ್ಲದೆ 90 ರ ದಶಕದ ಬೈಕ್ ಸವಾರರಲ್ಲಿಯೂ ವಿಭಿನ್ನ ಉತ್ಸಾಹ ಕಂಡುಬರಲಿದೆ.  ಹೊಸ RX 100 ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಈ ಬೈಕ್ ಅನ್ನು 1 ಲಕ್ಷದಿಂದ 1.5 ಲಕ್ಷದವರೆಗೆ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಬಹುದು.

Yamaha RX 100 Price In India
Image Credit: Jagran

ಕಡಿಮೆ ಬೆಲೆ ಮತ್ತು ಹೊಸ ಫೀಚರ್
Yamaha RX100 ಬೈಕ್ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಫ್ಲಾಟ್-ಟೈಪ್ ಸೀಟ್, ದೊಡ್ಡ ಹ್ಯಾಂಡಲ್‌ಬಾರ್, ರೌಂಡ್ ಹೆಡ್‌ಲ್ಯಾಂಪ್ ಘಟಕ, ಕ್ರೋಮ್ಡ್ ಫೆಂಡರ್‌ಗಳು, ಅಪ್ಲಿಫ್ಟ್ ಎಕ್ಸಾಸ್ಟ್ ಸಿಸ್ಟಮ್, ಕ್ಲಾಸಿಕ್-ಲುಕಿಂಗ್ ಟೈಲ್‌ಲ್ಯಾಂಪ್ ಮತ್ತು ಆಧುನಿಕ ಅರೆ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇನ್ನೇನು ಕೆಲವೇ ಸಮಯದಲ್ಲಿ RX 100 ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದ್ದು ಯುವಕರ ನೆಚ್ಚಿನ ಬೈಕ್ ಅವರ ಕೈತಲುಪಲಿದೆ.

Join Nadunudi News WhatsApp Group

Yamaha RX 100 Bike Mileage
Image Credit: Timesbull

Join Nadunudi News WhatsApp Group