ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಲು ನಟಿ ಪೂಜಾ ಹೆಗ್ಡೆ ಕೇಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ, ಶಾಕ್ ಆದ ಚಿತ್ರರಂಗ.

ಕನ್ನಡ ಚಿತ್ರರಂಗದಲ್ಲಿ ಯಾವ ಚಿತ್ರ ಕೂಡ ಮಾಡದ ಯಶಸ್ಸನ್ನ ಮಾಡಿದ ಚಿತ್ರವೆಂದರೆ ಅದೂ ಕೆಜಿಎಫ್ ಚಿತ್ರವೆಂದು ಹೇಳಿದರೆ ತಪ್ಪಾಗಲ್ಲ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಮೂರನೇ ಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಕೆಜಿಎಫ್ 3 ಚಿತ್ರ ಬರಲಿದ್ದು ಜನರು ಚಿತ್ರಕ್ಕಾಗಿ ಕಾದು ಕುಳಿತ್ತಿದ್ದಾರೆ. ಇನ್ನು ಯಶ್ ಅವರ ಬೇಡಿಕೆ ಚಿತ್ರರಂಗದಲ್ಲಿ ಹೆಚ್ಚಾಗಿದ್ದು ಅದೇ ರೀತಿಯಲ್ಲಿ ಯಶ್ ಅವರ ಜೊತೆ ನಾಯಕಿಯಾಗಿ ನಟನೆ ಮಾಡುವ ನಟಿಯರ ಬೇಡಿಕೆ ಕೂಡ ಬಹಳ ಹೆಚ್ಚಾಗಿದೆ. ಹೌದು ದೇಶದ ಖ್ಯಾತ ನಟಿಯರಲ್ಲಿ ಒಬ್ಬರು ಅನ್ನುವ ಸ್ಥಾನವನ್ನ ಗಿಟ್ಟಿಸಿಕೊಂಡಿರುವ ದೇಶದ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಅವರು ಯಶ್ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಹೌದು ಕೆಜಿಎಫ್ 2 ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಮಫ್ತಿ ನಿರ್ದೇಶಕ ನರ್ತನ್ ಮತ್ತು ಯಶ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರೋದಕ್ಕೆ ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ಈ ಚಿತ್ರಕ್ಕೆ ದೇಶದ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ನಾಯಕಿಯಾಗಿ ನಟಿಸಲಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ಇದರ ನಡುವೆ ಯಶ್ ಜೊತೆ ನಟನೆಯನ್ನ ಮಾಡಲು ಪೂಜೆ ಹೆಗ್ಡೆ ಪಡೆಯುತ್ತಿರುವ ಸಂಭಾವನೆಯ ವಿಷಯ ಕೂಡ ಸಕತ್ ಸುದ್ದಿಯಾಗಿದೆ. ಹಾಗಾದರೆ ಯಶ್ ಜೊತೆ ನಟನೆಯನ್ನ ಮಾಡಲು ಪೂಜಾ ಹೆಗ್ಡೆ ಪಡೆಯುತ್ತಿರುವ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

yash and pooja hegde

ಹೌದು ಇದು ಫ್ಯಾನ್ ಇಂಡಿಯಾ ಚಿತ್ರವಾಗಿದ್ದು ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ. ಇನ್ನು ಇದರ ನಡುವೆ ಪೂಜೆ ಹೆಗ್ಡೆ ಸಂಭಾವನೆ ವಿಷಯ ಕೂಡ ಸಕತ್ ಸುದ್ದಿಯಲ್ಲಿ ಇದೆ. ಪ್ರಸ್ತುತವಾಗಿ ಪೂಜೆ ಹೆಗ್ಡೆಯವರು ಇಂದು ಚಿತ್ರಕ್ಕೆ 3 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ, ಆದರೆ ಯಶ್ ಅವರ ಜೊತೆ ಫ್ಯಾನ್ ಇಂಡಿಯಾ ಚಿತ್ರದಲ್ಲಿ ನಟನೆಯನ್ನ ಮಾಡಲು ಪೂಜೆ ಹೆಗ್ಡೆ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಯಶ್ ಜೊತೆ ಫ್ಯಾನ್ ಇಂಡಿಯಾ ಚಿತ್ರದಲ್ಲಿ ನಟನೆಯನ್ನ ಮಾಡಲು ನಟಿ ಪೂಜಾ ಹೆಗ್ಡೆ ಅವರು ಬರೋಬ್ಬರಿ 4 ಕೋಟಿ ರೂಪಾಯಿ ಸಂಭಾವನೆಯನ್ನ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಪೂಜಾ ಹೆಗ್ಡೆಯವರಿಗೆ ದೇಶಾದ್ಯಂತ ಅಪಾರವಾದ ಅಭಿಮಾನಿಗಳು ಇದ್ದು ಅದೇ ರೀತಿಯಲ್ಲಿ ಯಶ್ ಅವರಿಗೂ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿಗಳು ಇದ್ದು ಈ ಜೋಡಿ ಸಿನಿಮಾದಲ್ಲಿ ಕಾಣಿಸಿಕೊಂಡರೆ ಆ ಚಿತ್ರ ಬೊಸ್ಸ್ ಆಫೀಸ್ ಧೂಳಿಪಟ ಮಾಡುವುದರಲ್ಲಿ ಎರಡು ಮಾತಿಲ್ಲ. ಸ್ನೇಹಿತರೆ ಚಿತ್ರದಲ್ಲಿ ಯಶ್ ಪೂಜಾ ಹೆಗ್ಡೆ ಕಾಂಬಿನೇಷನ್ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

yash and pooja hegde

Join Nadunudi News WhatsApp Group