ಯಾರಿಗೂ ಗೊತ್ತಿರದ ಯಶ್ ಜೀವನದ ನಿಜವಾದ ಸತ್ಯ ಇಲ್ಲಿದೆ ನೋಡಿ, ನಿಜಕ್ಕೂ ಗ್ರೇಟ್

ನಮ್ಮ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ರವರು ಸದ್ಯ ದೇಶದಲ್ಲೇ ಇದೀಗ ಎಲ್ಲರಿಗೂ ಚಿರಪರಿಚಿತ ಇರುವ ಹೆಸರು. ಹೌದು ಒಂದಾನೊಂದು ಕಾಲದಲ್ಲಿ ತುಂಬಾನೇ ಕಷ್ಟಪಟ್ಟಿದ್ದ ಯಸದ್ ಇಂದು ಇಡೀ ಪ್ರಪಂಚಕ್ಕೆ ನಟ ಯಶ್ ಯಾರೆಂಬುದು ಗೊತ್ತಾಗಿದೆ. ಅವರ ಅಭಿನಯದ ಮೂಲಕ ಇಡೀ ವಿಶ್ವಕ್ಕೆ ಯಶ್ ಅವರು ಪರಿಚಯ ಆಗಿದ್ದಾರೆ ಎಂದು ಹೇಳಬಹುದಾಗಿದ್ದಯ ಯಶ್ ಸಿನಿಮಾರಂಗಕ್ಕೆ ಬರುವ ಮುನ್ನ ನಿಜ ಜೀವನ ಹೇಗಿತ್ತು.

ಯಾವ ರೀತಿ ಕಷ್ಟಗಳನ್ನು ಅವಮಾನಗಳನ್ನು ಎದುರಿಸಿ ಇಂದು ಇಂತಹ ಉನ್ನತ ಮಟ್ಟಕ್ಕೆ ಯಶ್ ಬೆಳೆದರು ಎಂಬುದಾಗಿ ಸಣ್ಣ ಮಾಹಿತಿ ಮೂಲಕ ತಿಳಿದುಕೊಳ್ಳೋಣ ಬನ್ನಿ. ನಟ ಯಶ್ ಅವರು 1986 ರಲ್ಲಿ ಅವರ ತಾಯಿ ಹುಟ್ಟೂರಾದ ಹಾಸನ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸುತ್ತಾರೆ.ಹೌದು ತದ ನಂತರ ಯಶ್ ಬೆಳೆದಿದ್ದು ಓದಿದ್ದು ಕೂಡ ಮೈಸೂರಿನಲ್ಲಿ. ಓದಿನಲ್ಲಿ ಆಸಕ್ತಿ ಇದ್ದರೂ ಸಹ ಹೆಚ್ಚು ಇಂಟರೆಸ್ಟ್ ಇದ್ದಿದ್ದು ಮಾತ್ರ ಅಭಿನಯದ ಮೇಲೆ.Yash kids | What makes KGF actor Yash most 'nervous' about being a father?  Find out

ಚಿಕ್ಕಂದಿನಲ್ಲೇ ನಾಟಕ ನೃತ್ಯ ಅಭಿನಯ ಎಲ್ಲಾ ಶಾಲಾ ಕಾಲೇಜು ದಿನಗಳಲ್ಲಿ ಮಾಡಿದ್ದರು ಯಶ್. ಬಳಿಕ ತಂದೆ ತಾಯಿಯನ್ನು ಒಪ್ಪಿಸಿ ಬೆಂಗಳೂರಿಗೆ ಬಂದವರಾಗಿದ್ದು ಆರಂಭದಲ್ಲಿ ಮೆಜೆಸ್ಟಿಕ್ ನೋಡಿದ ಬಳಿಕವೇ ತುಂಬಾನೇ ಬೆರಗಾಗಿದ್ದಾರಂತೆ. ಹೌದು ಬೃಹತ್ ಬೆಂಗಳೂರಿನಲ್ಲಿ ನಾನು ಹೇಗೆ ಸಿನಿಮಾರಂಗದಲ್ಲಿ ನಟನೆ ಮಾಡುವುದು ಎಂದು ಒಂದು ಕ್ಷಣ ಶಾಕ್ ಆಗಿದ್ದು ಹಾಗೆಯೆರ ಅವರ ಮನಸ್ಥಿತಿ ಕೂಡ ಮೆಜೆಸ್ಟಿಕ್ ನೋಡಿ ಕುಗ್ಗಿತ್ತು ಎನ್ನಲಾಗಿದೆ. ಹೌದು ಇರಲು ಕೂಡ ಜಾಗ ಇಲ್ಲದೆ ಮೆಜೆಸ್ಟಿಕ್ ನಲ್ಲಿಯೂ ಮಲಗಿದ್ದರು ಎನ್ನಲಾಗಿ ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದರು.

ನಟ ಯಶ್ ಅವರ ಸ್ನೇಹಿತನ ಸಹಾಯದ ಮೂಲಕ ಮೊದಲಿಗೆ ಬೆನಕ ಎಂಬ ಒಂದು ನಾಟಕದಲ್ಲಿ ಅಭಿನಯ ಅವಕಾಶ ಗಿಟ್ಟಿಸಿಕೊಂಡಿದ್ದು ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ರವರಿಂದ ಈ ಮೂಲಕ ಶಭಾಷ್ ಎನಿಸಿಕೊಂಡರು. ಬಳಿಕ ಉತ್ತರಾಯಣ ಎಂಬ ಧಾರಾವಾಹಿಯಲ್ಲಿ ಅಭಿನಯ ಆರಂಭಮಾಡಿದ್ದು ತದನಂತರ ಸಿಲ್ಲಿ ಲಲ್ಲಿ ನಂದಗೋಕುಲ ಸೀರಿಯಲಲ್ಲಿ ಹೆಚ್ಚು ಗುರುತಿಸಿಕೊಂಡರು ಯಶ್.Yash and Radhika reveal the name of their daughter | Entertainment News,The  Indian Express

ಹೌದು ಇದಾದ ಬಳಿಕ ಯಶ್ ಅವರು ಮೊದಲ ಬಾರಿಗೆ ಚಿತ್ರದಲ್ಲಿ ಸೈಡ್ ಪಾತ್ರ ಮಾಡಿದ್ದು ಮುಂದೆ ಹೋಗುತ್ತ ಹೋಗುತ್ತ ಯಶ್ ರವರ ಸಿನಿಮಾ ಹೆಸರು ಕೂಡ ನೇಮಕ ಆಗಿತ್ತಂತೆ. ಆದರೆ ಅವರನ್ನು ಕರೆಸಿ ಅವಮಾನ ಕೂಡ ಮಾಡಲಾಗಿತ್ತು ಅಪಮಾನ ಮಾಡಿ ಅವರನ್ನು ಅಭಿನಯದ ಅವಕಾಶ ಕೊಡದೆ ಹಿಂದೆ ಸರಿಯುವಂತೆ ಹೇಳಿದ್ದುಂಟು ಎನ್ನಲಾಗಿದೆ.

Join Nadunudi News WhatsApp Group

ಇನ್ನು ಅದೇ ನಿರ್ದೇಶಕ ಮತ್ತೆ ಮರಳಿ ಬಂದು ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಅಭಿನಯ ಮಾಡಲು ಹೇಳಿದ್ದು ಒಮ್ಮೆ ಮೊಗ್ಗಿನ ಮನಸ್ಸು ಸಿನಿಮಾ ಹಿಟ್ ಆಗುತ್ತಿದ್ದಂತೆ ಯಶ್ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅವರ ಸಕತ್ ಅಭಿನಯದ ಮೂಲಕ ಒಂದರ ಮೇಲೊಂದರಂತೆ ಮೊದಲಾಸಲ ರಾಜಧಾನಿ ಕಿರಾತಕ ಗೂಗ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮಾಸ್ಟರ್ಪೀಸ ಸಂತು ಸ್ಟ್ರೈಟ್ ಫಾರ್ವರ್ಡ್ ಹೀಗೆ ಸಾಕಷ್ಟು ಸಿನಿಮಾ ಹಿಟ್ ಆಗಿದ್ದು ಸದ್ಯ ಈಗ ಕೆಜಿಎಫ್ ಹಂತಕ್ಕೆ ಬಂದು ನಿಂತಿದೆ.Birthday Special: Rare & Unseen Pics Of Rocking Star Yash Photos - FilmiBeat

ಹೌದು ಇಡೀ ವಿಶ್ವಕ್ಕೆ ಪರಿಚಯ ಆಗಿದ್ದಾರೆ ಯಶ್ ಎನ್ನಬಹುದು. ಒಂದಾನೊಂದು ಕಾಲದಲ್ಲಿ ಮೆಜೆಸ್ಟಿಕ್ ನಲ್ಲಿ ಮಲಗಿ ತಂದೆ-ತಾಯಿಗೆ ಜನರು ಆಡುತ್ತಿದ್ದ ನೋವಿನ ಮಾತನ್ನು ನೆನೆದು ಕಣ್ಣೀರಿಡುತ್ತಲೇ ನೋವನ್ನು ಅನುಭವಿಸಿ ಕಷ್ಟಪಟ್ಟು ಶ್ರದ್ಧೆಯಿಂದ ಚಿತ್ರರಂಗದಲ್ಲಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಯಶ್.

ಸದ್ಯ ಕೆಜಿಎಫ್ ಚಾಪ್ಟರ್ 2 ಕೂಡ ಬಿಡುಗಡೆಯಾಗಿದ್ದು ಇಡಿ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಯಶ್ ಅಭಿನಯ ಮಾಡಿದ್ದು ಜೊತೆಗೆ ನಟಿ ರಾಧಿಕಾ ಪಂಡಿತ್ ರವರನ್ನು 2016ರಲ್ಲಿ ಮದುವೆಯಾಗಿದ್ದು ಇದೀಗ ಯಶ್ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಚಿತ್ರರಂಗದಲ್ಲಿ ಕೇವಲ ಯಶಸ್ಸು ಆಗಿದ್ದೇನೆ ಎಂದು ಯಶ್ ಸುಮ್ಮನೆ ಇರಲಿಲ್ಲ. ಕೊಪ್ಪಳದ ಜಿಲ್ಲೆಯ 40 ಊರುಗಳಿಗೆ ಯಶೋ ಮಾರ್ಗದ ಮೂಲಕ ನಾಲ್ಕು ಕೋಟಿ ಹಣ ಖರ್ಚು ಮಾಡಿ ನೀರನ್ನು ಒದಗಿಸಿದ್ದು ಕರೋನಾ ಸಂದರ್ಭದಲ್ಲಿ ಒಂದೂವರೆ ಕೋಟಿ ಹಣ ಕೂಡ ಖರ್ಚು ಮಾಡಿ ಜನರ ಕಷ್ಟಕ್ಕೆ ನಟ ಯಶ್ ಸ್ಪಂದಿಸಿದ್ದಾರೆ.Yash Childhood Photo Archives - Edules

Join Nadunudi News WhatsApp Group