Yash Politics Entry: ಸುದೀಪ್ ಜೊತೆ ಬಿಜೆಪಿ ಸೇರುತ್ತಾರಾ ರಾಕಿ ಭಾಯ್, ಸ್ಪಷ್ಟನೆ ಕೊಟ್ಟ ಯಶ್ ಟೀಮ್.

ನಟ ಯಶ್ ಅವರ ಮನೆಗೆ ಹಲವು ರಾಜಕೀಯ ನಾಯಕರು ಬಂದಿದ್ದು ಸದ್ಯ ನಟ ಯಶ್ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ ಅನ್ನುವ ಸುದ್ದಿ ಹಬ್ಬಿದೆ.

Actor Yash Politics: ವಿಧಾನಸಭಾ ಚುನಾವಣಾ (Assembly Election) ದಿನಾಂಕ ನಿಗಧಿಯಾಗುತ್ತಿದ್ದಂತೆ ರಾಜಕೀಯ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿದೆ. ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ರಾಜಕೀಯ ಮುಖಂಡರು ಬ್ಯುಸಿ ಆಗಿದ್ದಾರೆ.

ಇನ್ನು ಇತ್ತೀಚಿಗೆ ರಾಜಕೀಯ ಪ್ರಚಾರದಲ್ಲಿ ಸ್ಟಾರ್ ನಟರ ಪ್ರಚಾರ ಮಾಡುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿದ್ದವು. ಇನ್ನು ನಟ ಸುದೀಪ್ ಅವರು ಇದೀಗ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

Yash Politics Entry
Image Source: Pinkvilla

ಬಿಜೆಪಿ ಸೇರ್ಪಡೆ ಆಗಲಿದ್ದಾರಾ ರಾಕಿ ಭಾಯ್
ಇನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಯಶ್ (Yash) ಅವರು ರಾಜಕೀಯ ಎಂಟ್ರಿ ಕೊಡಲಿದ್ದಾರೆ ಎನ್ನುವ ವದಂತಿ ಕೂಡ ಹರಡಿತ್ತು. ಸಾಕಷ್ಟು ರಾಜಕೀಯ ಮುಖಂಡರು ನಟ ಯಶ್ ಅವರನ್ನು ಭೇಟಿ ಮಾಡಿರುವುದು ಇದಕ್ಕೆ ಕಾರಣವಾಗಿದೆ.

ರಾಜಕೀಯ ಪ್ರವೇಶದ ಬಗ್ಗೆ ಯಶ್ ಅವರ ನಡೆ ಏನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದು ಇದಕ್ಕೆ ಯಶ್ ಅವರು ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

Yash Politics Entry
Image Source: India Today

ಯಶ್ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ 
ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಈ ಹಿಂದೆ ಯಶ್ ಅವರು ಬಿಜೆಪಿ ಸೇರ್ಪಡೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿದ್ದವು. ಇದೀಗ ಯಶ್ ಅವರ ಆಪ್ತ ಬಳಗದಿಂದ ಯಶ್ ಅವರ ರಾಜಕೀಯ ಸೇರ್ಪಡೆಯ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group

ಯಶ್ ಅವರು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ಸದ್ಯ ಅವರು ತಮ್ಮ 19 ನೇ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಯಶ್ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಇನ್ನು ಈ ತಿಂಗಳ ಕೊನೆಯಲ್ಲಿ ಯಶ್ ಅಭಿಮಾನಿಗಳಿಗೆ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Yash Politics Entry
Image Source: India Today

Join Nadunudi News WhatsApp Group