Yash Sister: ಸಂಕಷ್ಟಕ್ಕೆ ಸಿಲುಕಿದ ನಟ ರಾಕಿಂಗ್ ಸ್ಟಾರ್ ಯಶ್ ತಂಗಿ, ಸಹಾಯಕ್ಕೆ ಬರಬೇಕಿದೆ ನಟ ಯಶ್.

ಸಂಕಷ್ಟಕ್ಕೆ ಸಿಲುಕಿದ ನಟ ರಾಕಿಂಗ್ ಸ್ಟಾರ್ ಯಶ್ ತಂಗಿ

Yash Sister Arpita: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಿವೆ. ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ನಟರ ವೃತ್ತಿ ಜೀವನವು ಬದಲಾಗುತ್ತ ಹೋಗುತ್ತದೆ. ಇನ್ನು ಫ್ಯಾನ್ ಇಂಡಿಯಾ ಸ್ಟಾರ್ ನಟ ರಾಕಿಂಗ್ ಸ್ಟಾರ್ Yash ಅವರ ಕಿರಾತಕ ಸಿನಿಮಾ ಎಲ್ಲರು ನೋಡಿರಬಹುದು. ಯಶ್ ಅವರಿಗೆ ಕಿರಾತಕ ಸಿನಿಮಾ ಸಾಕಷ್ಟು ಯಶಸ್ಸನ್ನು ನೀಡಿದೆ. ಯಶ್ ಅವರಿಗಷ್ಟೇ ಅಲ್ಲ ಕಿರಾತಕ ಸಿನಿಮಾದಲ್ಲಿ ನಟಿಸಿದ ಪ್ರತಿ ಕಲಾವಿದರ ಲಕ್ ಈ ಸಿನಿಮಾದ ಬಳಿಕ ಚೇಂಜ್ ಆಗಿದೆ ಎನ್ನಬುದು.

ಈಗಲೂ ಕಿರಾತಕ ಸಿನಿಮಾಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ. ಸದ್ಯ ಕಿರಾತಕ ಸಿನಿಮಾದಲ್ಲಿ ಯಶ್ ತಂಗಿಯಾಗಿ ನಟಿಸಿದ ಅರ್ಪಿತಾ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ತಮ್ಮ ತಂಗಿ ಸಮಸ್ಯೆಗೆ ಯಶ್ ಸಹಾಯಕ್ಕೆ ಬರುತ್ತಾರಾ ಎನ್ನುವ ಚರ್ಚೆ ಜೋರಾಗಿದೆ.

Yash Sister Arpita
Image Credit: Zeenews

ಸಂಕಷ್ಟಕ್ಕೆ ಸಿಲುಕಿದ ನಟ ರಾಕಿಂಗ್ ಸ್ಟಾರ್ ಯಶ್ ತಂಗಿ
ಕಿರಾತಕ ಸಿನಿಮಾದಲ್ಲಿ ನಟಿಸಿದ ಪ್ರತಿ ಪಾತ್ರಧಾರಿಗಳ ಬಗ್ಗೆ ಎಲ್ಲರಿಗು ಪರಿಚಯ ಇರಬಹುದು. ಅದರಲ್ಲೂ ಯಶ್ ಅವರ ತಂಗಿ ಪಾತ್ರ ಅಂತೂ ಸಿನಿಮಾದಲ್ಲಿ ಹೈಲೈಟ್ ಅಗುತ್ತು. ಅಣ್ಣ ತಂಗಿನ ಜಗಳ, ಪ್ರೀತಿ ಸಿನಿಮಾದಲ್ಲಿ ಜನರು ಇಷ್ಟಪಟ್ಟಿದ್ದರು. ಯಶ್ ಅವರ ತಂಗಿಯಾಗಿ ಅರ್ಪಿತಾ ಪಾತ್ರವನ್ನು ನಿಭಾಯಿಸಿದ್ದರು. ಆದ್ರೆ ಸದ್ಯ ಅರ್ಪಿತಾ ಸಮಸ್ಯೆಗೆ ಸಿಲುಕಿದ್ದು, ಸಹಾಯಕ್ಕಾಗಿ ಮೊರೆ ಹೋಗಿದ್ದಾರೆ. ಹೌದು, ಅರ್ಪಿತಾ ಇಂಡಸ್ಟ್ರಿ ಹಾಗೂ ಜನರಲ್ಲಿ ಸಹಾಯವನ್ನು ಕೇಳುತ್ತಿದ್ದಾರೆ.

ಸಹಾಯಕ್ಕೆ ಬರಬೇಕಿದೆ ನಟ ಯಶ್
ಅರ್ಪಿತಾ ತಂದೆ ಮೈಸೂರಿನ ಬೃಂದಾವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾರ್ಟ್ ವೀಕ್ ಆಗಿದ್ದು, ಎರಡು ಕಿಡ್ನಿ ಇನ್ಫೆಕ್ಷನ್ ನಿಂದ ಬಳಲುತ್ತಿದ್ದರೆ. ಸದ್ಯ ನಟಿ ಅರ್ಪಿತಾ ಕುಟುಂಬ ಸಿನಿಮಾದಲ್ಲಿ ಅವಕಾಶವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದೆ. ಐಸಿಯುನಲ್ಲಿರುವ ತಂದೆಯ ಚಿಕಿತ್ಸೆಗೆ ಅರ್ಪಿತಾ ಅವರಿಗೆ ಆರ್ಥಿಕ ನೆರವು ಬೇಕಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅರ್ಪಿತಾ ಸಹಾಯಹಸ್ತವನ್ನು ಚಾಚಿದ್ದಾರೆ. ಸಂಕಷ್ಟದಲ್ಲಿರುವ ತಂಗಿಯ ಸಹಾಯಕ್ಕೆ ಯಶ್ ಬರುತ್ತಾರಾ ಎನ್ನುವ ಬಗ್ಗೆ ಜನರಿಗೆ ಪ್ರಶ್ನೆ ಮಾಡುತ್ತಿದ್ದಾರೆ.

kirataka movie yash sister arpitha
Image Credit: Vijayavani

Join Nadunudi News WhatsApp Group

Join Nadunudi News WhatsApp Group