Yashasvi Jaiswal: ಪಾನಿಪುರಿ ಮಾರಾಟ ಮಾಡುತ್ತಿದ್ದ ಈತ ಇಂದು ಭಾರತದ ಪ್ರಮುಖ ಆಟಗಾರ, ಇಲ್ಲಿದೆ ಜೈಸ್ವಾಲ್ ಲೈಫ್ ಸ್ಟೋರಿ

ಯಶಸ್ವಿ ಜೈಸ್ವಾಲ್ ಬೆಳೆದು ಬಂದ ಹಾದಿಯ ಬಗ್ಗೆ ಸಂಪೂರ್ಣ ಮಾಹಿತಿ

Yashasvi Jaiswal Life Story: ಭಾರತೀಯ ತಂಡದ ಅಂತಾರಾಷ್ಟ್ರೀಯ Yashasvi Jaiswal ಕ್ರಿಕೆಟ್ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಸಾಧನೆಯ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆ ಎನ್ನಬಹುದು. ಪ್ರತಿ ಬಾರಿ ಪಂದ್ಯ ಆಡಿದಾಗಲೂ ಕೂಡ ಇವರು ಹೊಸ ದಾಖಲೆಯನ್ನೇ ಸೃಷ್ಟಿಸುತ್ತಾರೆ.

ಇದೀಗ ನಾವು ಈ ಲೇಖನದಲ್ಲಿ ಯುವ ಆಟಗಾರರಾದ Yashasvi Jaiswal ಅವರ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. ಈ ಖ್ಯಾತ ಆಟಗಾರ ತಮ್ಮ ಬದುಕಿನಲ್ಲಿ ಏಳಿಗೆ ಕಾಣಲು ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Yashasvi Jaiswal Latest News Update
Image Credit: Instagram

ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಜೈಸ್ವಾಲ್
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಜೈಸ್ವಾಲ್ ಅದ್ಭುತ ದ್ವಿಶತಕ ಗಳಿಸಿದ್ದರು. ವೈಜಾಗ್‌ ನಲ್ಲಿ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮೊದಲ ಇನ್ನಿಂಗ್ಸ್‌ ನಲ್ಲಿ 209 ರನ್ ಗಳಿಸಿ ಭಾರತಕ್ಕೆ ಭಾರಿ ಮೆಚ್ಚುಗೆ ಗಳಿಸಿದರು. ಯಶಸ್ವಿ ಜೈಸ್ವಾಲ್ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿ ಸುದ್ದಿಯಲ್ಲಿದ್ದಾರೆ. ಮೈದಾನದ ಹೊರಗೂ ಅವರು ಬೆಳೆದು ಬಂದ ದಾರಿಯ ಬಗ್ಗೆಯೂ ರೋಮಾಂಚನಕಾರಿ ಕಥೆಯಿದೆ.

ಯುವ ಆಟಗಾರ ಬೆಳೆದು ಬಂದ ಹಾದಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
ಉತ್ತರ ಪ್ರದೇಶದ ಪುಟ್ಟ ಹಳ್ಳಿಯೊಂದರಿಂದ 10ನೇ ವಯಸ್ಸಿನಲ್ಲಿ ಮುಂಬೈಗೆ ಬಂದು, ಕ್ರಿಕೆಟ್‌ ನಲ್ಲಿ ವೃತ್ತಿಜೀವನವನ್ನು ಕಟ್ಟಲು ಪ್ರಸಿದ್ಧ ಆಜಾದ್ ಮೈದಾನದಲ್ಲಿ ಬೀಡುಬಿಟ್ಟಿದ್ದ ಯಶಸ್ವಿ ಜೈಸ್ವಾಲ್ ಇಂದು ಇಡೀ ವಿಶ್ವದ ಜನತೆಯ ಪ್ರೀತಿಯನು ಸಂಪಾದಿಸಿದ್ದಾರೆ.

Yashasvi Jaiswal Life Story
Image Credit: News 18

“ಕೆಲವೊಮ್ಮೆ ನಾನು ತುಂಬಾ ದುಃಖಿತನಾಗಿದ್ದೇನೆ ಏಕೆಂದರೆ ಯಶಸ್ವಿ ಜೈಸ್ವಾಲ್ ಅವರ ತಂದೆ ಮತ್ತು ಅವರು ಜೀವನ ಸಾಗಿಸಲು ಪಾನಿಪುರಿ ಮಾರುತ್ತಿದ್ದರು ಎಂದು ಹೇಳಲಾಗುತ್ತದೆ. ಇದನ್ನು ಕೇಳಲು ನನಗೆ ಬೇಸರವಾಗಿದೆ. 17 ಡಿಸೆಂಬರ್ 2013 ರಿಂದ 12 ಜನವರಿ 2022 ವರೆಗೆ ಯಶಸ್ವಿ ಜೈಸ್ವಾಲ್ ನನ್ನ ಮನೆಯಲ್ಲಿ ಕುಟುಂಬ ಸದಸ್ಯರಾಗಿ ಉಳಿದುಕೊಂಡಿದ್ದರು. .

Join Nadunudi News WhatsApp Group

ಅವನ ಜೀವನದಲ್ಲಿ ಬಡತನವಿಲ್ಲ. ಈ ಮೊದಲು ಅವರು ಆಜಾದ್ ಮೈದಾನದಲ್ಲಿದ್ದಾಗ ಏನಾದರೂ ಮಾಡಿರಬಹುದು. ಆದರೆ, ಅವರು ಮತ್ತು ಅವರ ತಂದೆ ಪಾನಿಪುರಿ ಮಾರಾಟಗಾರರಲ್ಲ” ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಜ್ವಾಲಾ ಸಿಂಗ್ ಹೇಳಿಕೊಂಡಿದ್ದಾರೆ.

Join Nadunudi News WhatsApp Group