Yashwant Guruji: ನಿಜವಾಯಿತು ನರೇಂದ್ರ ಮೋದಿ ಯಶ್ವಂತ ಗುರೂಜಿ ನುಡಿದ ಭವಿಷ್ಯ, ಮುಂದಿದೆ ಇನ್ನಷ್ಟು ರೋಚಕ.

ನಿಜವಾಯಿತು ಮೋದಿ ಬಗ್ಗೆ ಗುರೂಜಿ ನುಡಿದ ಭವಿಷ್ಯ

Yashwant Guruji About Loksabha Election: ಸದ್ಯ ದೇಶದಲ್ಲಿ BJP ಸರ್ಕಾರ ರಚನೆಗೆ ಸಜ್ಜಾಗಿದೆ. ಆದರೆ ಈ ಬಾರಿ ಸರ್ಕಾರ ಸ್ವಂತ ಬಲದಿಂದ ಅಧಿಕಾರವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಬದಲಾಗಿ ಮಿತ್ರ ಸರ್ಕಾರದ ಸಹಾಯದಿಂದ ಈ ಬಾರಿ ಸರ್ಕಾರ ರಚನೆಯಾಗಲಿದೆ.

ಇನ್ನು ದೇಶದಲ್ಲಿ ಮೋದಿ ಅವರು ಜೂನ್ 8 ರಂದು ಮೂರನೇ ಬಾರಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸದ್ಯ ಇದರ ಬೆನ್ನಲ್ಲೇ ಇದೀಗ ಈ ಖ್ಯಾತ ಜ್ಯೋತಿಷಗಳ ಭವಿಷ್ಯವಾಣಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರಣ ಲೋಕಸಭಾ ಚುನವಣಾ ಫಲಿತಾಂಶ ಪ್ರಕಟವಾದ ನಂತರ ಈ ಖ್ಯಾತ ಜ್ಯೋತಿಷಿಗಳ ಭವಿಷ್ಯವಾಣಿ ನಿಜವಾಗಿದೆ.

Yashwant Guruji Prediction
Image Credit: Mediaoneonline

ನಿಜವಾಯಿತು ನರೇಂದ್ರ ಮೋದಿ ಯಶ್ವಂತ ಗುರೂಜಿ ನುಡಿದ ಭವಿಷ್ಯ
ಲೋಕಸಭೆ ಬಗ್ಗೆ ಭಗವತಿ ಕಾಲಜ್ಞಾನ ಭವಿಷ್ಯ ನಿಜವಾಗುತ್ತಿದೆ..ತಿಪಟೂರು ತಾಲೂಕಿನ ನೊಣವಿನಕೆರೆಯ ಯಶವಂತ ಗುರೂಜಿ 2024 ರ ಲೋಕಸಭೆ ಚುನಾವಣೆಯ ಬಗ್ಗೆ ಜನವರಿ ಸಂಕ್ರಾಂತಿಯಂದು ಭವಿಷ್ಯ ನುಡಿದಿದ್ದರು. ಈ ಬಾರಿ ಸ್ವಂತ ಬಲದಿಂದ ಯಾರೂ ದೇಶದ ಚುಕ್ಕಾಣಿ ಹಿಡಿಯುವುದಿಲ್ಲ. ಮಿತ್ರ ಪಕ್ಷಗಳ ಬಲದೊಂದಿಗೆ ಒಂದು ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಯಶವಂತ ಗುರೂಜಿ ಭವಿಷ್ಯ ನುಡಿದರು. ಅದರಂತೆ ಈಗ ಯಾವ ಪಕ್ಷವೂ ಸ್ವಂತ ಬಲದಿಂದ ಅಧಿಕಾರ ಪಡೆಯುತ್ತಿಲ್ಲ. ಮಿತ್ರ ಪಕ್ಷಗಳ ಬೆಂಬಲಕ್ಕಾಗಿ ಹೋರಾಟ ನಡೆಸುತ್ತಿದೆ.

ಈ ಹಿನ್ನೆಲೆ ಯಶವಂತಗುರೂಜಿಯವರ ಭವಿಷ್ಯಕ್ಕೆ ನಿಜವಾಗಿದೆ. ಯಶವಂತಗುರೂಜಿಯವರ ಭವಿಷ್ಯದಂತೆ ಬಿಜೆಪಿಯು ವಿವಿಧ ಮಿತ್ರ ಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸುವ ಆತುರದಲ್ಲಿದೆ. ಅನೇಕ ರಾಜಕೀಯ ಅಚ್ಚರಿಗಳು ನಡೆದಿದ್ದರೂ, INDIA ಒಕ್ಕೂಟವು ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೂ ಮೈತ್ರಿ ಪಕ್ಷಗಳ ಬಲದೊಂದಿಗೆ ಸರ್ಕಾರ ರಚಿಸಬೇಕಾಗಿದೆ. ಹೀಗಾಗಿ ಯಶವಂತಗುರೂಜಿಯವರ ಭವಿಷ್ಯ ನಿಜವಾಗಿದೆ.

Yashwant Guruji About Lok Sabha Election
Image Credit: Asianetnews

Join Nadunudi News WhatsApp Group

Join Nadunudi News WhatsApp Group