Yo Bykes EV: ಹೊಸ ಲುಕ್ ನಲ್ಲಿ ಬಂತು ಹಳೆಯ ಎಲೆಕ್ಟ್ರಿಕ್ ಸ್ಕೂಟರ್, ಕಡಿಮೆ ಬೆಲೆ ಮತ್ತು 100 Km ಮೈಲೇಜ್

100 KM ರೇಂಜ್ ನಲ್ಲಿ ಹಳೆಯ ಸ್ಕೂಟರ್ ಬಗ್ಗೆ ಮತ್ತೆ ಮಾರುಕಟ್ಟೆ ಬಂದಿದೆ

Yo Bykes Electric Scooter: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ದೇಶದ ಜನಪ್ರಿಯ ಕಂಪನಿಗಳಿಂದ ಹಿಡಿದು, ವಿವಿಧ ಸ್ಟಾರ್ಟ್ ಅಪ್ ಕಂಪನಿಗಳು ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ Ola ಮತ್ತು Ather ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪೆನಿಗಳಾಗಿ ಗುರುತಿಸಿಕೊಂಡಿವೆ.

Yo Bykes Electric Scooter
Image Credit: Indiamart

YoBykes Electric Scooter ನ ಬಗ್ಗೆ ನಿಮಗೆಷ್ಟು ಗೊತ್ತು..?
ನಿಮಗೆ ಗೊತ್ತೇ Ola ಮತ್ತು Ather ನ ಹೊರತಾಗಿ ಇದಕ್ಕೂ ಮುನ್ನ ಮಾರುಕಟ್ಟೆಯಲ್ಲಿ YoBykes ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಗ್ಗೆ. ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಯಾರಿಸುವ ಮೂಲಕ ಮಾರುಕಟ್ಟೆಯಲ್ಲಿ YoBykes ಕಂಪನಿಗಳು ಗುರುತಿಸಿಕೊಂಡಿವೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ಲುಕ್ ನಲ್ಲಿ ಹಳೆಯ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಲಿದೆ.

ಹೊಸ ಲುಕ್ ನಲ್ಲಿ ಬಂತು ಹಳೆಯ ಎಲೆಕ್ಟ್ರಿಕ್ ಸ್ಕೂಟರ್
YoBykes ಟ್ರಸ್ಟ್ ಡ್ರಿಫ್ಟ್ HX ಎಂಬ ಹೆಸರಿನಿಂದ ಬಿಡುಗಡೆ ಮಾಡಲಾದ ಈ ಎಲೆಕ್ಟ್ರಿಕ್ ಸ್ಕೂಟರ್ ಬಹಳ ಜನಪ್ರಿಯತೆ ಪಡೆದುಕೊಂಡಿದೆ. YoBykes Electric Scooter ನಲ್ಲಿ ನೀವು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಶಾಕ್ ಅಬ್ಸಾರ್ಬರ್ ಅನ್ನು ನೋಡಬಹುದು. ಇದು 12 ಇಂಚಿನ ಟ್ಯೂಬ್‌ ಲೆಸ್ ಟೈರ್ ಮತ್ತು 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಹೊಂದಿದೆ. Combi Braking System, Auto Headlamp, 3 in 1 Locking System, Digital Instrument Console, Reverse Mode ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

Yo Bykes Electric Scooter Price And Feature
Image Credit: Justdial

ಕಡಿಮೆ ಬೆಲೆ ಮತ್ತು 100 Km ಮೈಲೇಜ್
ಈ ಬಾರಿ ಕಂಪನಿಯು 2500 ವ್ಯಾಟ್ BLDC ಮೋಟಾರ್ ಅನ್ನು ನೀಡಿದ್ದು ಅದು ಕೇವಲ ಮೂರು ಸೆಕೆಂಡುಗಳಲ್ಲಿ ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ನ ಗರಿಷ್ಠ ವೇಗ ಗಂಟೆಗೆ 65 ಕಿಲೋಮೀಟರ್ ಆಗಿದೆ. ಈ ವೇಗದೊಂದಿಗೆ ಇದು 100 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ. ಇದು 2.65 ಕಿಲೋ ವ್ಯಾಟ್ ಟವರ್‌ನ ಬ್ಯಾಟರಿ ಪ್ಯಾಕ್ ಅನ್ನು ಸಹ ಹೊಂದಿದೆ.

YoBykes Electric Scooter ನ ಬ್ಯಾಟರಿಯು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇನ್ನು ಕಂಪನಿಯು ಈ ಎಲೆಕ್ಟ್ರಿಕ್ ಮಾದರಿಯ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲವಾದರೂ 49 ರಿಂದ 52 ಸಾವಿರ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. YoBykes Electric Scooter ನ ಬುಕಿಂಗ್ ಆರಂಭವಾಗಿದ್ದು, ಕಂಪನಿಯು ಶೀಘ್ರದಲ್ಲೇ ಈ ಸ್ಕೂಟರ್ ನ ವಿತರಣೆಯನ್ನು ಪ್ರಾರಂಭಿಸುತ್ತದೆ.

Join Nadunudi News WhatsApp Group

Join Nadunudi News WhatsApp Group