Yuva Nidhi: ಯುವ ನಿಧಿ ಯೋಜನೆಯಲ್ಲಿ ಮತ್ತೆ ಹೊಸ ರೂಲ್ಸ್, ಈ ದಾಖಲೆ ನೀಡಿದರೆ ಮಾತ್ರ ಫೆಬ್ರವರಿ ತಿಂಗಳ ಹಣ ಜಮಾ

ಈ ದಾಖಲೆ ನೀಡಿದರೆ ಮಾತ್ರ ಫೆಬ್ರವರಿ ತಿಂಗಳ ಯುವ ನಿಧಿ ಹಣ ಜಮಾ ಆಗಲಿದೆ, ಹೊಸ ರೂಲ್ಸ್ ಜಾರಿ

Yuva Nidhi Big Update 2024: Congress ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳು ಈಗಾಗಲೇ ರಾಜ್ಯದಲ್ಲಿ ಅನುಷ್ಠಾನಗೊಂಡಿದೆ. ರಾಜ್ಯದ ಜನತೆ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಕೊನೆಯದಾಗಿ Yuva Nidhi ಯೋಜನೆಯು ಜಾರಿಯಾಗಿತ್ತು. ಜನವರಿ 2024 ರಲ್ಲಿ ಯುವ ನಿಧಿ ಯೋಜನೆಯಡಿ ನಿರುದ್ಯೋಗಿಗಳು ನಿರುದ್ಯೋಗ ಭತ್ಯೆಯನ್ನು ಪಡೆದಿದ್ದಾರೆ.

ಅರ್ಹ ಫಲಾನುಭವಿಗಳ ಖಾತೆಗೆ ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಮಾಸಿಕ ಭತ್ಯೆ ಲಭ್ಯವಾಗಿದೆ. ಇನ್ನು ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯಡಿ ಫೆಬ್ರವರಿ ತಿಂಗಳ ಎರಡನೇ ಕಂತಿನ ಹಣ ಬಿಡುಗಡೆಗೆ ಸಜ್ಜಾಗಿದೆ. ಇನ್ನು ನೀವು ಗಮನಿಸ ಬೇಕಾದ ವಿಷಯ ಏನೆಂದರೆ, ಫೆಬ್ರವರಿ ತಿಂಗಳ ಭತ್ಯೆಯನ್ನು ಪಡೆಯಲು ಫಲಾನುಭವಿಗಳು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

Yuva Nidhi Big Update
Image Credit: Karnataka Times

ಫೆ. ತಿಂಗಳ ನಿರುದ್ಯೋಗ ಭತ್ಯೆ ಪಡೆಯಲು ನಿಯಮ ಕಡ್ಡಾಯ
ಪದವಿ ವಿದ್ಯಾರ್ಥಿಗಳಿಗೆ 3,000 ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆಯನ್ನು ಯುವ ನಿಧಿ ಯೋಜನೆಯಡಿ ಸರ್ಕಾರ ನೀಡುತ್ತಿದೆ. ಈಗಾಗಲೇ ಯುವ ನಿಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಒಂದು ತಿಂಗಳ ಭತ್ಯೆ ಹಣ ಜಮಾ ಆಗಿದೆ. ಫಲಾನುಭವಿಗಳು ಮಾಸಿಕ ಹಣವನ್ನು ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಕಂತಿನ ಭತ್ಯೆ ಪಡೆಯುವ ಸಮಯ ಬಂದಿದೆ. ಎರಡನೇ ತಿಂಗಳ ನಿರುದ್ಯೋಗ ಭತ್ಯೆ ಪಡೆಯಬೇಕಿದ್ದರೆ ಈ ನಿಯಮ ಪಾಲನೆ ಕಡ್ಡಾಯವಾಗಿದೆ.

ನೀವು ಯುವ ನಿಧಿ ಯೋಜನೆಯ ಹಣವನ್ನು ಫೆಬ್ರವರಿ ತಿಂಗಳಲಿನಲ್ಲಿ ಪಡೆಯಬೇಕಿದ್ದರೆ ಈ ದಾಖಲೆ ನೀಡುವುದು ಕಡ್ಡಾಯವಾಗಿದೆ. ಈ ದಾಖಲೇ ನೀಡುವಲ್ಲಿ ವಿಫಲವಾದರೆ ನಿಮಗೆ ಈ ತಿಂಗಳ ಭತ್ಯೆಯ ಹಣ ಜಮಾ ಆಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ. ನಿರುದ್ಯೋಗ ಭತ್ಯೆ ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು “ಸ್ವಯಂ ಘೋಷಿತ ಪ್ರಮಾಣಪತ್ರ”ವನ್ನು Upload ಮಾಡಬೇಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ.

Yuva Nidhi Scheme Latest News
Image Credit: Deccan Herald

ನಿರುದ್ಯೋಗಿಗಳಿಗೆ “ಸ್ವಯಂ ಉದ್ಯೋಗಿಯಲ್ಲ” ಎನ್ನುವ ಘೋಷಣೆ ಕಡ್ಡಾಯ
ಪ್ರತಿ ತಿಂಗಳು ಅಭ್ಯರ್ಥಿಗಳು ತಾವು ಉದ್ಯೋಗ ಪಡೆದಿಲ್ಲ ಮತ್ತು ಉನ್ನತ ಶಿಕ್ಷಣಕ್ಕೆ ಹೋಗಿಲ್ಲ, ಉದ್ಯೋಗಿಯಲ್ಲ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು Upload ಮಾಡಬೇಕು. ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು Upload ಮಾಡಿದರೆ ಮಾತ್ರ ಫಲಾನುಭವಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯಲು ಸಾಧ್ಯವಾಗುತ್ತದೆ.

Join Nadunudi News WhatsApp Group

ಫೆ. 29 ರವರೆಗೆ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್‌ ಲೋಡ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು http://sevasindhugs.karnataka.gov.in ಅಧಿಕೃತ ವೆಬ್ ಸೈಟ್ ನಲ್ಲಿ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು Upload ಮಾಡಬಹುದಾಗಿದೆ.

Join Nadunudi News WhatsApp Group