Yuva Nidhi: ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ, ಇಂತವರಿಗೆ ಸಿಗಲ್ಲ ಯುವ ನಿಧಿ ಹಣ

ಯುವ ನಿಧಿ ಯೋಜನೆಗೆ ಅರ್ಹರಾಗಿದ್ದರೆ ಈ ದಿನಾಂಕದಂದು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ

Yuva Nidhi Registration: ಸದ್ಯ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಐದನೇ ಗ್ಯಾರಂಟಿ ಯೋಜನೆಯಾಗಿರುವ Yuva Nidhi ಯೋಜನೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊನ್ನೆಯಷ್ಟೇ ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಹಲವಾರು ತಿಂಗಳುಗಳಿಂದ ಪದವಿ ಮತ್ತು ಡಿಪ್ಲೊಮೊ ಮುಗಿಸಿ ಮನೆಯಲ್ಲಿ ಕಾಯುತ್ತಿರುವವರಿಗೆ ಸದ್ಯ ವರ್ಷದ ಕೊನೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.

ಜನವರಿಯಿಂದ ಡಿಪ್ಲೊಮೊ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಯುವ ನಿಧಿ ನೋಂದಣಿಗೆ ದಿನಾಂಕ ಕೂಡ ಫಿಕ್ಸ್ ಆಗಿದೆ. ನೀವು ಯುವ ನಿಧಿ ಯೋಜನೆಗೆ ಅರ್ಹರಾಗಿದ್ದರೆ ಈ ದಿನಾಂಕದಂದು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Yuva Nidhi Scheme News Update
Image Credit: Original Source

ಯುವ ನಿಧಿ ಯೋಜನೆಯ ನೋಂದಣಿಗೆ ಡೇಟ್ ಫಿಕ್ಸ್
ಇನ್ನು ರಾಜ್ಯದಲ್ಲಿ 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸದ್ಯ ಈ ಯುವ ನಿಧಿ ಯೋಜನೆಯ ನೋಂದಣಿಗೆ ಸಂಬಂಧಿಸಿದಂತೆ  ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ನೀವು ಯುವ ನಿಧಿ ಯೋಜನೆಯ ನೋಂದಣಿಯನ್ನು December 21 ರಿಂದ ಮಾಡಲು ಸರ್ಕಾರ ಅನುಮತಿ ನೀಡಿದೆ. ನಿರುದ್ಯೋಗಿಗಳಾಗಿ ಉಳಿದಿರುವವರಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಕರ್ನಾಟಕ ನಿವಾಸಿಗಳು ಆಗಿದ್ದು, 2022 -23 ರಲ್ಲಿ ವ್ಯಾಸಂಗ ಮಾಡಿದವರು ಮಾತ್ರ ಯುವ ನಿಧಿ ಯೋಜನೆಗೆ ಅರ್ಹರಿಗಿರುತ್ತಾರೆ. ನಿರುದ್ಯೋಗ ಭತ್ಯೆಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

Yuva Nidhi Registration
Image Credit: News 18

ಈ ದಾಖಲೆಗಳು ಇದ್ದರೆ ಮಾತ್ರ ನಿರುದ್ಯೋಗ ಭತ್ಯೆ ಪಡೆಯಬಹುದು
*ಆಧಾರ್ ಕಾರ್ಡ್
*ಆದಾಯ ಪ್ರಮಾಣಪತ್ರ
*ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ
*ಬ್ಯಾಂಕ್ ಖಾತೆಯ ವಿವರ ಇಮೈಲ್ ಐಡಿ
*ಮೊಬೈಲ್ ಸಂಖ್ಯೆ
*ಭಾವಚಿತ್ರ
*ಪದವಿ ಹಾಗೂ ಡಿಪ್ಲೊಮೊ ಮುಗಿಸಿದ ಕೊನೆಯ ವರ್ಷದ ಅಂಕಪಟ್ಟಿ

Join Nadunudi News WhatsApp Group

Join Nadunudi News WhatsApp Group