Yuva Rajkumar Divorce: ರಾಜಕುಮಾರ್ ಕುಟುಂಬದಲ್ಲಿ ವಿಚ್ಛೇದನ, ಪತ್ನಿಗೆ ವಿಚ್ಛೇದನ ನೀಡಿದ ಯುವ ರಾಜಕುಮಾರ್

ಪತ್ನಿಗೆ ವಿಚ್ಛೇದನ ನೀಡಿದ ಯುವ ರಾಜಕುಮಾರ್

Yuva Rajkumar And Sridevi Divorce: ಸದ್ಯ ಎಲ್ಲೆಡೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ. ಚಂದನವನದಲ್ಲಿ ಮತ್ತೊಂದು ಜೋಡಿ ವಿಚ್ಛೇದನದ ಪಡೆದಿರುವುದು ಎಲ್ಲರಿಗು ಆಶ್ಚರ್ಯ ನೀಡಿದೆ.

ಸದ್ಯ ಚಂದನ್ ನಿವೇದಿತಾ ವಿಚ್ಛೇದನದ ಸುದ್ದಿಯ ಶಾಕ್ ಅಲ್ಲಿರುವವರಿಗೆ ಇದೀಗ ಮತ್ತೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ. ಹೌದು, ಸದ್ಯ ವಿಚ್ಛೇದನದ ಗಾಳಿ ಇದೀಗ ದೊಡ್ಮನೆಯನ್ನು ತಲುಪಿದೆ. ಡಾ.ರಾಜ್ ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ Yuva Rajkumar ವಿಚ್ಛೇದನ ಪಡೆದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ವೈರಲ್ ಆಗಿದೆ.

Yuva Rajkumar And Sridevi Divorce
Image Credit: Udayavani

ಯುವರಾಜ್ ಕುಮಾರ್ ದಾಂಪತ್ಯ ಜೀವನದಲ್ಲಿ ಬಿರುಕು
ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಯುವ ರಾಜಕುಮಾರ್ ಇದೀಗ ತಮ್ಮ ವೈವಾಹಿಕ ಜೀವನ ವಿಚಾರವಾಗಿ ಸುದ್ದಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಿನಿ ಕರಿಯರ್ ಆರಂಭಿಸಲು ಸಜ್ಜಾದ ಯುವ ಇದೀಗ ತಮ್ಮ ವೈವಾಹಿಕ ಜೀವನವನ್ನು ಕೊನೆಗಾಣಿಸಲು ಹೊರಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ನಟ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಮತ್ತು ನಟ ರಾಘವೇಂದ್ರ ರಾಜ್‌ ಕುಮಾರ್ ಅವರ ಪುತ್ರ ನಟ ಯುವ ರಾಜ್‌ ಕುಮಾರ್ ಅವರು 2019 ರಲ್ಲಿ ಶ್ರೀದೇವಿ ಅವರನ್ನು ವಿವಾಹವಾದರು.

ಯುವ ರಾಜಕುಮಾರ್ ಅವರ ಐದು ವರ್ಷಗಳ ದಾಂಪತ್ಯ ವೈಯುಕ್ತಿಕ ಕಾರಣಗಳಿಂದ ಮುರಿದುಬಿದ್ದಿದೆ ಎನ್ನಲಾಗಿದೆ. ಈ ಸಂಬಂಧ ಯುವ ಪತ್ನಿಗೆ ನೋಟಿಸ್ ನೀಡಿದ್ದಾರೇ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ವಿದೇಶದಲ್ಲಿದ್ದಾರೆ. ಆರು ತಿಂಗಳ ಹಿಂದೆ ಯುವ ರಾಜ್‌ ಕುಮಾರ್ ಅವರು ಶ್ರೀದೇವಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯದ ಪ್ರಕ್ರಿಯೆಯಂತೆ ಪತ್ನಿಗೆ ನೋಟಿಸ್ ನೀಡಲಾಗಿದೆ.

Yuva Rajkumar And Sridevi
Image Credit: Vistaranews

ಡಿವೋರ್ಸ್ ಗೆ ಕಾರಣ ಏನಿರಬಹುದು..?
ಸದ್ಯ ಯುವರಾಜ್‌ ಕುಮಾರ್ ಪತ್ನಿಯ ವಿಚ್ಛೇದನ ದೊಡ್ಮನೆ ಕುಟುಂಬ ಮತ್ತು ಯುವ ರಾಜ್‌ ಕುಮಾರ್ ಅಭಿಮಾನಿಗಳಿಗೆ ಬೇಸರ ನೀಡಿದೆ. ನಟ ಯುವರಾಜ್ ಕುಮಾರ್ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ಪರಸ್ಪರ ಪ್ರೀತಿಸಿ ಮದುವೆಯಾದರು. ಇವರಿಬ್ಬರ ವಿವಾಹವು ಮೇ 25, 2019 ರಂದು ಅದ್ಧೂರಿಯಾಗಿ ನಡೆದಿತ್ತು. ಇಬ್ಬರು ಮದುವೆಯಾಗಲು ಒಪ್ಪಿದ್ದರು. ಈಗ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ. ಈ ಮೂಲಕ ದೊಡ್ಮನೆ ಕುಟುಂಬದಲ್ಲಿ ಮೊದಲ ಜೋಡಿ ಬೇರ್ಪಟ್ಟಿದ್ದಾರೆ.

Join Nadunudi News WhatsApp Group

ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ಮೂಲತಃ ಮೈಸೂರಿನವರು. ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಈಗ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಯುವರಾಜ್ ಕುಮಾರ್ ಜೂ.6ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಉನ್ನತ ಶಿಕ್ಷಣದ ಕನಸು ಹೊತ್ತಿರುವ ಶ್ರೀದೇವಿ ವಿದೇಶದಲ್ಲಿದ್ದಾರೆ. ಭಾರತವನ್ನು ತೊರೆದು ಕೆಲವು ತಿಂಗಳುಗಳಾಗಿವೆ. ಶಿಕ್ಷಣದ ಕಾರಣ ಅಥವಾ ವೈಯುಕ್ತಿಕ ಕಾರಣಗಳಿಂದ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

Yuva Rajkumar And Sridevi Latest News
Image Credit: Asianetnews

Join Nadunudi News WhatsApp Group