Sridevi Byrappa: ವಿಚ್ಛೇದನಕ್ಕೆ ಅರ್ಜಿ ಕೊಟ್ಟ ಯುವನಿಗೆ ತಿರುಗೇಟು ಕೊಟ್ಟ ಪತ್ನಿ ಶ್ರೀದೇವಿ, ಖಡಕ್ ಹೇಳಿಕೆ

ವಿಚ್ಛೇದನಕ್ಕೆ ಅರ್ಜಿ ಕೊಟ್ಟ ಯುವನಿಗೆ ತಿರುಗೇಟು ಕೊಟ್ಟ ಪತ್ನಿ ಶ್ರೀದೇವಿ

Yuva Rajkumar Wife Sridevi About Divorce: ಸದ್ಯ ಸ್ಯಾಂಡಲ್ ವುಡ್ ನಲ್ಲಿ ವಿಚ್ಛೇದನದ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ಬೆನ್ನಲ್ಲೇ ನಟ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ವಿಚ್ಛೇದನದ ಸುದ್ದಿ ಕೂಡ ಹೊರಬಿದ್ದಿದೆ.

ರಾಜ್ ಕುಟುಂಬದಲ್ಲಿ ಮೊದಲ ಬಾರಿಗೆ ಸಾಂಸಾರಿಕ ಜೀವನದ ಸಮಸ್ಯೆಗಾಗಿ ಕೋರ್ಟ್ ಮೆಟ್ಟಿಲೇರುವಂತಾಗಿದೆ. ನಟ ಯುವ ಅವರು ತನ್ನ ಪತ್ನಿಯ ವಿರುದ್ಧ ಆರೋಪಗಳನ್ನು ಮಾಡಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವ ಅವರು ನೋಟಿಸ್ ಕಳುಹಿಸುತ್ತಿದ್ದಂತೆ, ತಮ್ಮ ಬಗ್ಗೆ ಮಾಡಿದ ಆರೋಪಗಳಿಗೆ ಯುವ ಪತ್ನಿ ಶ್ರೀದೇವಿ ಅವರು ಉತ್ತರ ನೀಡಿದ್ದಾರೆ.

Yuva Rajkumar Wife Sridevi About Divorce
Image Credit: Hosa Kannada

ಪತ್ನಿ ವಿರುದ್ಧ ಯುವ ರಾಜಕುಮಾರ್ ಆರೋಪ
ಯುವರಾಜ್ ಕುಮಾರ್ ಜೂ.6 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಯುವ ರಾಜ್‌ಕುಮಾರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪತ್ನಿ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ. ಪತ್ನಿ ಮನೆಯಲ್ಲಿ ಅಗೌರವ ತೋರುತ್ತಾರೆ. ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಶ್ರೀದೇವಿಗೆ ಅನೈತಿಕ ಸಂಬಂಧವಿದೆ, ರಾಜ್ ಕುಮಾರ್ ಅಕಾಡೆಮಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪವಿದೆ. ಈ ಆರೋಪಗಳಿಗೆ ಶ್ರೀದೇವಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಯುವ ಪರ ವಕೀಲರು, ‘ಯುವನಿಗೆ ಶ್ರೀದೇವಿ ಚಿತ್ರಹಿಂಸೆ ನೀಡಿದ್ದಾರೆ. ರಾಜ್‌ಕುಮಾರ್ ಅವರ ಅಕಾಡೆಮಿಯಿಂದ 3 ಕೋಟಿ ರೂಪಾಯಿಯನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಾರೆ. ನಿನ್ನನ್ನು ಬೀದಿಗೆ ತರುತ್ತೇನೆ ಎಂದು ಪತಿಗೆ ಬೆದರಿಕೆ ಹಾಕಿದ್ದಾರೆ. ಯುವ ಚಿತ್ರದ ನಂತರ ಅಮೆರಿಕಕ್ಕೆ ಬರುವಂತೆ ಒತ್ತಾಯಿಸಿದರು. ತನ್ನ ಬಾಯ್ ಫ್ರೆಂಡ್ ಮೂಲಕ ಮಗುವನ್ನು ಪಡೆಯುವ ಯೋಚನೆಯಲ್ಲಿದ್ದರು. ರಾಧಯ್ಯ ಎಂಬುದು ಶ್ರೀದೇವಿಯ ಗೆಳೆಯನ ಹೆಸರು ಎಂದು ಆರೋಪಿಸಿದರು.

Join Nadunudi News WhatsApp Group

Yuva Rajkumar Wife Sridevi
Image Credit: Oneindia

ವಿಚ್ಛೇದನಕ್ಕೆ ಅರ್ಜಿ ಕೊಟ್ಟ ಯುವನಿಗೆ ತಿರುಗೇಟು ಕೊಟ್ಟ ಪತ್ನಿ ಶ್ರೀದೇವಿ
ಈ ಆರೋಪಗಳಿಗೆ ಶ್ರೀದೇವಿ ಉತ್ತರಿಸಿದರು. “ವೃತ್ತಿಪರ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕಾದ ವ್ಯಕ್ತಿಯೇ ಮಹಿಳೆಯ ಚಾರಿತ್ರ್ಯದ ಬಗ್ಗೆ ಸಾರ್ವಜನಿಕವಾಗಿ ಕೀಳುಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ತುಂಬಾ ನೋವುಂಟುಮಾಡುತ್ತದೆ” ಎಂದು ಫೇಸ್‌ ಬುಕ್ ನಲ್ಲೂ ಪೋಸ್ಟ್ ಹಂಚಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳ ನೋವುಗಳ ನಡುವೆಯೂ ನಾನು ಕುಟುಂಬದ ಗೌರವವನ್ನು ಕಾಪಾಡಲು ಮೌನವಾಗಿದ್ದೆ. ಆದರೆ, ನನ್ನ ಸಭ್ಯತೆ, ಮಾನವೀಯತೆಗಳನ್ನು ಗೌರವಿಸದೆ ಕೀಳುಮಟ್ಟದ ಆರೋಪಗಳನ್ನು ಮಾಡುತ್ತಿರುವುದು ವಿಷಾದನೀಯ. ಸತ್ಯ ಮತ್ತು ನ್ಯಾಯ ಖಂಡಿತವಾಗಿ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

Yuva Rajkumar Wife Sridevi Latest News
Image Credit: Filmibeat

Join Nadunudi News WhatsApp Group