Pakistan Financial Crisis: ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಗೋತ್ತಾ…? ಪಾತಾಳಕ್ಕೆ ಕುಸಿದ ಆರ್ಥಿಕತೆ

ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಗೋತ್ತಾ...?

1 Liter Petrol Price In Pakistan: ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಪಾಕಿಸ್ತಾನದ ಪರಿಸ್ಥಿತಿ ಬಹಳ ಕೆಟ್ಟಿದೆ. ಹಣದುಬ್ಬರತೆಯ ಕಾರಣ ಜನರು ರೋಸಿಹೋಗಿದ್ದಾರೆ. ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಕೂಡ ಪಾಕ್ ಜನತೆ ದುಪ್ಪಟ್ಟು ಹಣವನ್ನು ನೀಡುವ ಪರಿಸ್ಥಿತಿ ಬಂದೊದಗಿದೆ.

ಪಾಕಿಸ್ತಾನದ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ಎಲ್ಲ ವಸ್ತುಗಳ ಬೆಲೆಯಂತು ಗಗನಕ್ಕೇರಿದೆ. ಸದ್ಯ ಹೆಚ್ಚು ಆರ್ಥಿಕ ನಷ್ಟವನ್ನು ಎದುರಿಸುತ್ತಿರುವ ಪಾಕ್ ಜನತೆಗೆ ಇನ್ನೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ಈ ವಸ್ತುವಿನ ಬೆಲೆಯನ್ನು ಇನ್ನಷ್ಟು ಏರಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.

1 Liter Petrol Price In Pakistan
Image Credit: India TV News

ಪಾಕಿಸ್ತಾನದಲ್ಲಿ ಈ ವಸ್ತುವಿನ ಬೆಲೆ ದಿಢೀರ್ ಏರಿಕೆ
ಪಾಕಿಸ್ತಾನದಲ್ಲಿ ದಿನಬಳಕೆಯ ವಸ್ತು ಸೇರಿದಂತೆ ಪ್ರತಿಯೊಂದು ವಸ್ತುವು ದುಬಾರಿಯಾಗುತ್ತಿದೆ. ಕೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿ ಸಿಲುಕಿರುವ ಪಾಕ್ ಜನತೆಗೆ ಇದೀಗ ಮತ್ತೊಂದು ಬೆಲೆ ಏರಿಕೆಯ ಬಿಸಿ ತಗಲಿದೆ. ಹೌದು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಪೆಟ್ರೋಲ್ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿದೆ. ವರದಿಗಳ ಪ್ರಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಗೋತ್ತಾ…?
ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇಳಿದರೆ ನೀವು ಅಚ್ಚರಿ ಪಡುವುದಂತೂ ಖಂಡಿತ. ಪಾಕಿಸ್ತಾನದಲ್ಲಿ ಒಂದು ಲೀಟರ್ ನ ಪೆಟ್ರೋಲ್ ಬೆಲೆ ಕನಿಷ್ಠ 10 ರೂ. ಹೆಚ್ಚಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಕನಿಷ್ಠ 10 ರೂ. ಏರಿಕೆ ಮಾಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಪ್ರಸ್ತುತ 1 ಲೀಟರ್ ಪೆಟ್ರೋಲ್ ಬೆಲೆ 279 ರೂ. ಆಗಿದೆ. ಮುಂದಿನ 15 ದಿನಗಳಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 289 ರುಪಾಯಿ ಹೆಚ್ಚಳವಾಗಲಿದೆ ಎಂದು ವರದಿಯಾಗಿದೆ.

Petrol Price In Pakistan
Image Credit: Dailyausaf

ಇದರ ಜೊತೆಗೆ ಹೈಸ್ಪೀಡ್ ಡೀಸೆಲ್ ಬೆಲೆ ಲೀಟರ್‌ ಗೆ 1.30 ರೂಪಾಯಿ ಇಳಿಕೆಯಾಗಿದೆ. ಹೀಗಾಗಿ ಹೈಸ್ಪೀಡ್ ಡೀಸೆಲ್ ಬೆಲೆ 285.86 ರೂ.ನಿಂದ 284.26 ರೂ.ಗೆ ಇಳಿಕೆಯಾಗಿದೆ. ಪಾಕಿಸ್ತಾನದಲ್ಲಿ ವಾಹನ ಬಳಸುವವರಿಗೆ ಈ ಬೆಲೆ ಏರಿಕೆಯ ಬಿಸಿ ತಗಲಿದೆ. ಪಾಕಿಸ್ತಾನದಲ್ಲಿನ ಒಂದು ಲೀಟರ್ ಪೆಟ್ರೋಲ್ ಬೆಲೆಯೂ ಭಾರತದಲ್ಲಿನ ಒಂದು ಲೀಟರ್ ಪೆಟ್ರೋಲ್ ಬೆಲೆಗಿಂತ ದುಪ್ಪಟ್ಟು ಹೆಚ್ಚಿದೆ. ಮೊದಲೇ ಹೆಚ್ಚು ಹಣ ನೀಡಿ ಪೆಟ್ರೋಲ್ ಖರೀದಿಸುತ್ತಿರುವ ಪಾಕ್ ಜನತೆ ಇನ್ನುಮುಂದೆ ಇನ್ನು ಹೆಚ್ಚು ಹಣ ನೀಡಿ ಪೆಟ್ರೋಲ್ ಖರೀದಿಸುವ ಅನಿವಾರ್ಯತೆ ಬಂದೊದಗಿದೆ.

Join Nadunudi News WhatsApp Group

Pakistan Financial Crisis
Image Credit: Business Today

Join Nadunudi News WhatsApp Group