Nobel Record: ಕೇವಲ 4 ತಿಂಗಳಿಗೆ ನೊಬೆಲ್ ರೆಕಾರ್ಡ್ ಮಾಡಿದ ಪುಟ್ಟ ಕಂದಮ್ಮ, ಈ ಮಗುವಿನ ಸಾಧನೆ ಅಪಾರ ಮೆಚ್ಚುಗೆ.

ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ನಲ್ಲಿ ಹೆಸರು ದಾಖಲಿಸಿಕೊಂಡ ನಾಲ್ಕು ತಿಂಗಳ ಮಗು

4 Month Baby Nobel Record: ಸಣ್ಣ ಮಕ್ಕಳು ಸಾಕಷ್ಟು ಟ್ಯಾಲೆಂಟ್ ಗಳನ್ನೂ ಹೊಂದಿರುತ್ತಾರೆ. ಆದರೆ ಮಕ್ಕಳು ಸಣ್ಣವರಿದ್ದಾಗ ಅವರ ಟ್ಯಾಲೆಂಟ್ ಹೊರಗೆ ಬರುವುದಿಲ್ಲ. ಸ್ವಲ್ಪ ವರ್ಷವಾದ ಮೇಲೆ ಅವರ ಟ್ಯಾಲೆಂಟ್ ಬೆಳಕಿಗೆ ಬರುತ್ತದೆ. ಇನ್ನು ಕೆಲ ಮಕ್ಕಳು ಹುಟ್ಟಿದ ಕೆಲ ತಿಂಗಳಿನಲ್ಲಿಯೇ ತಮ್ಮ Talent ಅನ್ನು ತೋರಿಸುತ್ತಾರೆ.

ವರ್ಷವಾಗಿರುವ ಮಗು ಯಾವುದಾದರು ಹೊಸ ಪ್ರಯತ್ನ ಮಾಡಿದರೆ ಅಷ್ಟೊಂದು ಅಚ್ಚರಿಯಾಗುವುದಿಲ್ಲ. ಆದರೆ ಇಲ್ಲೊಂದು ಮಗು ಕೇವಲ 4 ತಿಂಗಳಿನಲ್ಲಿ ಊಹೆಗೂ ಮೀರಿದ ಜ್ಞಾಪಕ ಶಕ್ತಿಯನ್ನು ಹೊಂದಿದೆ. ಹೌದು, ಕೇವಲ ನಾಲ್ಕೇ ತಿಂಗಳಿನಲ್ಲಿ ಈ ಮಗು ನೋಬಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ.

4 Month Baby Nobel Record
Image Credit: Boldsky

ಕೇವಲ 4 ತಿಂಗಳಿಗೆ ನೊಬೆಲ್ ರೆಕಾರ್ಡ್ ಮಾಡಿದ ಪುಟ್ಟ ಕಂದಮ್ಮ
ಸಾಮಾನ್ಯವಾಗಿ ನಾಲ್ಕು ತಿಂಗಳು ಮಗು ತನ್ನ ತಾಯಿ, ತಂದೆಯನ್ನು ಗುರಿತಿಸುತ್ತವೆ. ಆದರೆ ಈ ಮಗುವಿನ ಸಾಧನೆ ನಿಜಕ್ಕೂ ದೊಡ್ಡದಿದೆ. ಈ ಮಗು 120ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವ ಮೂಲಕ ಅಚ್ಚರಿ ಮೂಡಿಸಿದೆ. ಆಂಧ್ರಪ್ರದೇಶದ ನಾಡಿಗಾಮಾ ಮೂಲದ ನಾಲ್ಕು ತಿಂಗಳ ಮಗು ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ನಲ್ಲಿ ತನ್ನ ಹೆಸರನ್ನು ನೋಂದಾಯಿಸಿದೆ. ಕೈವಲ್ಯ ಎಂಬ ಮಗು ಪಕ್ಷಿಗಳು ಮತ್ತು ತರಕಾರಿಗಳಿಂದ ಹಿಡಿದು ಪ್ರಾಣಿಗಳ 120 ಫೋಟೋಗಳನ್ನು ಗುರುತಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ನಲ್ಲಿ ಹೆಸರು ದಾಖಲಿಸಿಕೊಂಡ ನಾಲ್ಕು ತಿಂಗಳ ಮಗು
ಕೈವಲ್ಯ “100 ಫ್ಲ್ಯಾಷ್‌ ಕಾರ್ಡ್‌ ಗಳನ್ನು ಗುರುತಿಸಿದ ವಿಶ್ವದ ಮೊದಲ ನಾಲ್ಕು ತಿಂಗಳ ಮಗು” ಎಂದು ಗುರುತಿಸಲಾಗಿದೆ. ವೈರಲ್ ವೀಡಿಯೊದಲ್ಲಿ, ಅವರು 120 ಫ್ಲ್ಯಾಷ್ ಕಾರ್ಡ್‌ ಗಳನ್ನು ಗುರುತಿಸಿದ್ದಾರೆ. ಇದು 12 ಹೂವುಗಳು, 27 ಹಣ್ಣುಗಳು, 27 ತರಕಾರಿಗಳು, 27 ಪ್ರಾಣಿಗಳು ಮತ್ತು 27 ಪಕ್ಷಿಗಳನ್ನು ಒಳಗೊಂಡಿದೆ. ಕೈವಲ್ಯಳ ಸಾಮರ್ಥ್ಯವನ್ನು ಮೊದಲು ಗಮನಿಸಿದ್ದು ಆಕೆಯ ತಾಯಿ ಹೇಮಾ.

Andhra Pradesh 4 Month Baby Girl Kaivalya
Image Credit: Times Of India

ಮಗುವಿನ ಕುಟುಂಬವು ತನ್ನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವೀಡಿಯೊವನ್ನು ರೆಕಾರ್ಡ್ ಮಾಡಿ ನೋಬಲ್ ವರ್ಲ್ಡ್ ರೆಕಾರ್ಡ್ಸ್ಗೆ ಕಳುಹಿಸಿತು. ನೋಬಲ್ ವರ್ಲ್ಡ್ ರೆಕಾರ್ಡ್ಸ್ ತಂಡವು ವೀಡಿಯೊವನ್ನು ಪರಿಶೀಲಿಸಿ ಕೈವಲ್ಯ ಅವರ ವಿಶೇಷ ಪ್ರತಿಭೆಯನ್ನು ಪರೀಕ್ಷಿಸಿತು. ಅವರು ವಿಶೇಷ ಪ್ರಮಾಣಪತ್ರವನ್ನು ನೀಡಿದರು. ಕೇವಲ ನಾಲ್ಕು ತಿಂಗಳ ಚಿಕ್ಕ ವಯಸ್ಸಿನಲ್ಲಿ ಮಗು ವಿಶ್ವದಾಖಲೆ ಬರೆದಿರುವುದು ಪೋಷಕರಿಗೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗುತ್ತಿದ್ದು, ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group