LPG Cylinder Price March: ಮತ್ತೆ ದುಬಾರಿಯಾಯ್ತು ಗ್ಯಾಸ್ ಸಿಲಿಂಡರ್, ಮಾರ್ಚ್ ತಿಂಗಳ ಆರಂಭದಲ್ಲೇ LPG ದರ ಏರಿಕೆ.

LPG Cylinder Price Hike In March Month: ಹೊಸ ವರ್ಷದ ಆರಂಭದಿಂದ ಗ್ರಹ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿಯೇ. ಇದೀಗ ಎಲ್ ಪಿಜಿ ಅಡುಗೆ ಸಿಲಿಂಡರ್ ಗಳ ಬೆಲೆ ಕೂಡ ಏರಿಕೆಯಾಗಿದೆ. ಇಂದಿನಿಂದ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಏರಿಕೆಯಾಗಲಿದೆ.

ಜನವರಿ 1 , 2023 ರಂದು ದೇಶದಾದ್ಯಂತ 19 ಕೆಜಿ ವಾಣಿಜ್ಯ ಎಲ್ ಪಿಜಿ (LPG) ಸಿಲಿಂಡರ್ ಗಳ ಬೆಲೆಯನ್ನು 25 ರೂ ಗಳಷ್ಟು ಹೆಚ್ಚಿಸಲಾಯಿತು. ನಂತರ ಅದನ್ನು ದೆಹಲಿಯಲ್ಲಿ 1768 ರೂ. ಮುಂಬೈನಲ್ಲಿ 1721 ರೂ, ಕೋಲ್ಕತ್ತಾದಲ್ಲಿ ರೂ 1870 ಮತ್ತು ಚೆನೈ ನಲ್ಲಿ ರೂ. 1971 ಮಾರಾಟ ಮಾಡಲಾಯಿತು.

LPG Cylinder Price Hike In March Month
Image Source: India Today

ಇಂದಿನಿಂದ ಎಲ್ ಪಿಜಿ ಬೆಲೆಗಳು ಹೆಚ್ಚಳ
ಇಂದಿನಿಂದ ಎಲ್ ಪಿಜಿ ಬೆಲೆಗಳು ಜಾರಿಗೆ ಬರಲಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 350 .50 ರೂ. ಇನ್ನು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬಾಟಲಿಗೆ 2119 .50 ರೂ. ದೇಶಿಯ ಎಲ್ ಪಿಜಿ ಸಿಲಿಂಡರ್ 14 .2 ಕೆಜಿ ಬೆಲೆಯನ್ನು 50 ರೂ. ಗಳಷ್ಟು ಹೆಚ್ಚಿಸಲಾಗಿದೆ. 14 .2 ಕೆಜಿ ಗೃಹ  ಬಳಕೆಯ ಎಲ್ ಪಿಜಿ ಸಿಲಿಂಡರ್ ನ ಬಾಟಲಿಯು ಈಗ ದೆಹಲಿಯಲ್ಲಿ 1103 ರೂ ಆಗಿದೆ.

LPG Cylinder Price Hike In March Month
Image Source: India Today

ಮುಂಬೈ ನಲ್ಲಿ ಈ ಸಿಲಿಂಡರ್ ಅನ್ನು 1052.50 ರೂ ಬದಲಿಗೆ 1102.5 ರೂ. ಗೆ ಮಾರಾಟ ಮಾಡಲಾಗುತ್ತದೆ. ಕೋಲ್ಕತ್ತಾದಲ್ಲಿ 1079 ರೂ ಬದಲಿಗೆ 1129 ರೂ ಮತ್ತು ಚೆನೈನಲ್ಲಿ 1068.50 ರೂ ಬಳಿಗೆ 1118.5 ರೂ ಆಗಿದೆ.

LPG Cylinder Price Hike In March Month
Image Source: India Today

ಇಂದಿನಿಂದ ವಾಣಿಜ್ಯ LPG ಸಿಲಿಂಡರ್ ಕೋಲ್ಕತ್ತಾದಲ್ಲಿ ರೂ 2221.5 ಕ್ಕೆ ಲಭ್ಯವಿದೆ. ಮುಂಬೈ ನಲ್ಲಿ ಇದ್ರ ಬೆಲೆ ಈಗ 1721 ರೂ. ನಿಂದ 2071.50 ರೂ. ಗೆ ಏರಿಕೆಯಾಗಿದೆ. ಚೆನ್ನೈ ನಲ್ಲಿ 1917 ರೂ ಗೆ ಲಭ್ಯವಿದ್ದ ಸಿಲಿಂಡರ್ 2268 ರೂ. ಗೆ ಲಭ್ಯವಿದೆ.

Join Nadunudi News WhatsApp Group

Domestic gas cylinder prices have again increased in various parts of the country
Image Credit: goodreturns

Join Nadunudi News WhatsApp Group