Public Exam: 5 8 ಮತ್ತು 9 ನೇ ತರಗತಿ ಮಕ್ಕಳಿಗೆ ಬಿಗ್ ಅಪ್ಡೇಟ್, ಯಾವ ಪ್ರಶ್ನೆಗೆ ಎಷ್ಟು ಮಾರ್ಕ್ಸ್ ಗೊತ್ತಾ…?

5, 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಅಂಕಗಳ ವಿವರ ಬಿಡುಗಡೆ

5,8,9 Standard Public Exam Question Paper Pattern: ಶಿಕ್ಷಣ ಇಲಾಖೆ ಈ ಬಾರಿ ಶಿಕ್ಷಣ ನೀತಿಯಲ್ಲಿ ಸಂಪೂರ್ಣ ಬದಲಾವಣೆಯನ್ನು ಮಾಡಿದೆ. ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನು ರಾಜ್ಯದಲ್ಲಿ 5,8 ಹಾಗೂ 9 ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆ (Public Exam) ಕುರಿತು ಶಿಕ್ಷಣ ಇಲಾಖೆ ಈಗಾಗಲೇ ಹೇಳಿಕೆ ನೀಡಿದೆ.

ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಪರೀಕ್ಷಾ ವೇಳಾಪಟ್ಟಿ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಯನ್ನು ಕೂಡ ಬಿಡುಗಡೆ ಮಾಡಿದೆ. ಇದೀಗ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಅಂಕಗಳ ವಿವರವನ್ನು ಕೂಡ ಬಿಡುಗಡೆ ಮಾಡಿದೆ.

5,8,9 Standard Public Exam All Details
Image Credit: Indianexpress

5,8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಶಾಲಾ ಶಿಕ್ಷಣ ಇಲಾಖೆಯು 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿದ್ದು ವಿದ್ಯಾರ್ಥಿಗಳು ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಬೇಕಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5ನೇ, 8ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ (SA-2) ಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.

ಇದೀಗ ಅಂತಿಮ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಮೌಲ್ಯಮಾಪನದ ಅಂತಿಮ ವೇಳಾಪಟ್ಟಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ವೆಬ್‌ ಸೈಟ್‌ https://kseeb.karnataka.gov.in/ ನಲ್ಲಿ ಪ್ರಕಟಿಸಲಾಗಿದೆ.

5,8,9 Standard Public Exam Question Paper Pattern
Image Credit: Thequint

ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಸಂಖ್ಯೆ ಮತ್ತು ಅಂಕಗಳು
*5 ನೇ ತರಗತಿಗೆ 40 ಅಂಕದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಇದಕ್ಕೆ 2 ಗಂಟೆಯ ಸಮಯಾವಕಾಶ ಇರುತ್ತದೆ. 40 ಅಂಕಕ್ಕೆ 1 ಅಂಕದ ಪ್ರಶ್ನೆ 14, 2 ಅಂಕದ ಪ್ರಶ್ನೆ 4, 3 ಅಂಕದ ಪ್ರಶ್ನೆ 2, 4 ಅಂಕದ ಪ್ರಶ್ನೆ 3 ಅನ್ನು ನೀಡಲಾಗುತ್ತದೆ.

Join Nadunudi News WhatsApp Group

*8 ನೇ ತರಗತಿಗೆ 50 ಅಂಕದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಇದಕ್ಕೆ 02:30 ಗಂಟೆಯ ಸಮಯಾವಕಾಶ ಇರುತ್ತದೆ. 50 ಅಂಕಕ್ಕೆ 1 ಅಂಕದ ಪ್ರಶ್ನೆ 20, 2 ಅಂಕದ ಪ್ರಶ್ನೆ 6, 3 ಅಂಕದ ಪ್ರಶ್ನೆ 3, 4 ಅಂಕದ ಪ್ರಶ್ನೆ 1, 5 ಅಂಕದ ಪ್ರಶ್ನೆ 1 ಅನ್ನು ನೀಡಲಾಗುತ್ತದೆ.

*9 ನೇ ತರಗತಿಗೆ 100 ಅಂಕದ ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿದೆ. ಇದಕ್ಕೆ 03:15 ಗಂಟೆಯ ಸಮಯಾವಕಾಶ ಇರುತ್ತದೆ. 100 ಅಂಕಕ್ಕೆ 1 ಅಂಕದ ಪ್ರಶ್ನೆ 17, 2 ಅಂಕದ ಪ್ರಶ್ನೆ 10, 3 ಅಂಕದ ಪ್ರಶ್ನೆ 11, 4 ಅಂಕದ ಪ್ರಶ್ನೆ 5, 5 ಅಂಕದ ಪ್ರಶ್ನೆ 2 ಅನ್ನು ನೀಡಲಾಗುತ್ತದೆ.

Join Nadunudi News WhatsApp Group