8th Pay Salary: 8 ನೇ ವೇತನದ ಬಗ್ಗೆ ಕೇಂದ್ರದ ಇನ್ನೊಂದು ಬಿಗ್ ಅಪ್ಡೇಟ್, 8 ನೇ ವೇತನದಲ್ಲಿ ಸಂಬಳ ಇಷ್ಟು ಹೆಚ್ಚಳವಾಗಲಿದೆ

ಹೊಸ ವೇತನ ಆಯೋಗ ರಚನೆಯಾದರೆ ಎಷ್ಟು ಪ್ರಮಾಣದಲ್ಲಿ ನೌಕರರ ವೇತನ ಹೆಚ್ಚಾಗಲಿದೆ...?

8th Pay Commission For Govt Employees: ದೇಶದಲ್ಲಿ ಸರ್ಕಾರೀ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಜಾರಿಯಾಗುತ್ತಲೇ ಇದೆ. ಸದ್ಯ ಕೇಂದ್ರ ಸರ್ಕಾರ ನೌಕರರ 7 ನೇ ವೇತನವನ್ನು ಹೆಚ್ಚಿಸಿದೆ.

ನೌಕರರಿಗೆ 2023 ರ ದೀಪಾವಳಿಯ ಸಮಯದಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗಿತ್ತು. ಕೇಂದ್ರದಿಂದ ಸರ್ಕಾರೀ ನೌಕರಿಗೆ ಹಳೇ ಪಿಂಚಣಿ ಜಾರಿಯಾಗುವ ಬಗ್ಗೆ ಮಾಹಿತಿ ಲಭಿಸಿದೆ. ಪ್ರಸ್ತುತ ದೇಶದಲ್ಲಿ 8 ನೇ ವೇತನ ಜಾರಿಯ ಬಗ್ಗೆ ಸಾಕಷ್ಟು ಸುದ್ದಿಗಳುಹರಿದಾಡುತ್ತಿದೆ. 8 ನೇ ವೇತನ ಜಾರಿಯ ಆ ಬಗ್ಗೆ ಸರ್ಕಾರ ಯಾವ ನಿರ್ಧಾರವನ್ನು ಕೈಗೊಂಡಿದೆ ಎನ್ನುವುದು ಸರ್ಕಾರೀ ನೌಕರರ ಸದ್ಯದ ಪ್ರಶ್ನೆಯಾಗಿದೆ.

8th Pay Commission For Govt Employees
Image Credit: Informal News

ಮುಂದಿನ ವರ್ಷದಲ್ಲಿ 8 ನೇ ವೇತನ ಜಾರಿಯಾಗುತ್ತಾ..?
ಇನ್ನು ದೇಶದಲ್ಲಿ 2024 ರಲ್ಲಿ ಲೋಕಸಭಾ ಚುನಾವಣೆ ಆರಂಭವಾಗಲಿದೆ. ಈ ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರೀ ನೌಕರರಿಗೆ 8 ನೇ ವೇತನ ಜಾರಿಯಾಗಲಿದೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇನ್ನೊಂದೆಡೆ ಸರ್ಕಾರ 8 ನೇ ವೇತನ ಜಾರಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನುವ ಚರ್ಚೆ ಕೂಡ ಕೇಳಿ ಬರುತ್ತಿದೆ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣಾ ಸಮಯದಲ್ಲಿ 8 ನೇ ವೇತನ ಆಯೋಗ ರಚನೆಯ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನುವುದು ತಜ್ಞರ ಅಭಿಪ್ರಾಯ.

8 ನೇ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರ ಹೇಳುವುದೇನು..?
ದೆಹಲಿಯಲ್ಲಿ ಸರ್ಕಾರೀ ನೌಕರರು 8 ನೇ ವೇತನ ಜಾರಿಗಾಗಿ ನೌಕರರು ಹಗೂ ಪಿಂಚಣಿದಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ವೇತನ ಜಾರಿಯ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ. ಮುಂದಿನ ವರ್ಷ ನಡೆಯುವ ರಾಷ್ಟ್ರೀಯ ಚುನಾವಣೆಗೆ ಮುನ್ನ ಸುಮಾರು 54 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಎಂಟನೇ ವೇತನ ಆಯೋಗವನ್ನು ರೂಪಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ. 8 ನೇ ವೇತನ ಆಯೋಗವನ್ನು ರಚಿಸುವ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

 Govt Employees Salary
Image Credit: Informal News

ಹೊಸ ವೇತನ ಆಯೋಗ ರಚನೆಯಾದರೆ ಎಷ್ಟು ಪ್ರಮಾಣದಲ್ಲಿ ನೌಕರರ ವೇತನ ಹೆಚ್ಚಾಗಲಿದೆ..?
2024 ರ ಅಂತ್ಯದ ವೇಳೆಯಲ್ಲಿ 8ನೇ ವೇತನ ಆಯೋಗ ರಚನೆಯಾಗಲಿದೆ ಎನ್ನುವುದು ಸದ್ಯದ ಸುದ್ದಿಯಾಗಿದೆ. ಆದರೆ 2016 ರಲ್ಲಿ 7 ನೇ ವೇತನ ಆಯೋಗ ರಚನೆಯಾಗಿತ್ತು. ಪ್ರತಿ 10 ವರ್ಷಗಳ ನಂತರ ಹೊಸ ವೇತನ ಆಯೋಗ ರಚನೆಯಾಗಲಿದೆ. 2025 ರ ಅಂತ್ಯದಲ್ಲಿ ಅಥವಾ 2026 ರ ಆರಂಭದಲ್ಲಿ 8 ನೇ ವೇತನ ಆಯೋಗ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ವರದಿಯಾಗಿತ್ತು.

Join Nadunudi News WhatsApp Group

ಈ ಬಾರಿಯ 8 ನೇ ವೇತನ ಹೆಚ್ಚಳವು ನೌಕರರ ವೇತನವನ್ನು ಇನ್ನಷ್ಟು ಹೆಚ್ಚಿಸಲಿದೆ. ಫಿಟ್ ಮೆಂಟ್ ಅಂಶವು 3.68 ಪಟ್ಟು ಹೆಚ್ಚಳ ಸಂಭವನೀಯ ಸಾಧ್ಯತೆ ಇದೆ ಹಾಗೂ ವೇತನ ಹೆಚ್ಚಳ 44.44 %, ಕನಿಷ್ಠ ವೇತನ ರೂ. 26,000 ಸಾಧ್ಯತೆ ಇದೆ ಎನ್ನುವ ಬಗ್ಗೆ ಈ ಹಿಂದೆ ವರದಿಯಾಗಿತ್ತು. 8 ನೇ ವೇತನ ಆಯೋಗ ದೇಶದಲ್ಲಿ ಜಾರಿಗೆ ಬಂದರೆ ಸರ್ಕಾರೀ ನೌಕರರ ನೂಲ ವೇತನದಲ್ಲಿ ಗಣನೀಯ ಏರಿಕೆ ಆಗುವುದರಲ್ಲಿ ಎರಡು ಮಾತಿಲ್ಲ.

Join Nadunudi News WhatsApp Group