8th Pay: ಕೇಂದ್ರ ಸರ್ಕಾರದ ಮಹತ್ವದ ಘೋಷಣೆ, ವೇತನ ಆಯೋಗದ ಬಗ್ಗೆ ಇನ್ನೊಂದು ಘೋಷಣೆ.

8 ನೇ ವೇತನ ಅನುಷ್ಠಾನದ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

8th Pay Commission Latest Update: ಸದ್ಯ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಮತ್ತು 18 ತಿಂಗಳ ಡಿಎ (DA) ಬಾಕಿ ಪಾವತಿಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರೀ ನೌಕರರ ವೇತನದ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಲಿದೆ.

ಸದ್ಯ 7 ನೇ ವೇತನದಡಿ ತುಟ್ಟಿಭತ್ಯೆ ಹೆಚ್ಚಳದ ಸುದ್ದಿಯ ಜೊತೆಗೆ ದೇಶದ ಹೊಸ ವೇತನ ಆಯೋಗ ರಚನೆಯಾಗುವ ಆಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಈಗಾಗಲೇ ದೇಶದಲ್ಲಿ 8 ನೇ ವೇತನ (8th Pay Commission) ಜಾರಿಯ ಬಗ್ಗೆ ಸಾಕಷ್ಟು ಬಾರಿ ಸುದ್ದಿ ವೈರಲ್ ಆಗಿದೆ. ಇದೀಗ ಕೇಂದ್ರ ಸರ್ಕಾರ 8 ನೇ ವೇತನದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.

8th Pay Commission News
Image Credit: Original Source

8ನೇ ವೇತನ ಆಯೋಗದ ಬಗ್ಗೆ ಇನ್ನೊಂದು ಘೋಷಣೆ
ಸದ್ಯ ಎಂಟನೇ ವೇತನ ಆಯೋಗ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸದನದಲ್ಲಿ ಪ್ರತಿಕ್ರಿಯಿಸಿದೆ. ಈ ಮೂಲಕ ಸರ್ಕಾರ ತನ್ನ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ನು 2016 ರಲ್ಲಿ ಜಾರಿಗೊಳಿಸಲಾಗಿದೆ ಎನ್ನುವುದು ಎಲ್ಲರಿಗು ತಿಳಿದೇ ಇದೆ. ಈ ಶಿಫಾರಸುಗಳ ಅನುಷ್ಠಾನದಿಂದಾಗಿ ಕೇಂದ್ರ ನೌಕರರ ವೇತನ ಮತ್ತು ಭತ್ಯೆಗಳಲ್ಲಿ ದೊಡ್ಡ ಹೆಚ್ಚಳವಾಗಿದೆ.

ಎಂಟನೇ ವೇತನ ಆಯೋಗ ರಚನೆಗೆ ಸಂಬಂಧಿಸಿದಂತೆ ರಾಜ್ಯಸಭಾ ಸಂಸದ ರಾಮನಾಥ್ ಠಾಕೂರ್ ಅವರು ಹಣಕಾಸು ಸಚಿವಾಲಯಕ್ಕೆ ಲಿಖಿತ ಪ್ರಶ್ನೆಗಳನ್ನು ಕೇಳಿದ್ದರು. ನಾಲ್ಕು ಅಂಶಗಳನ್ನು ಪರಿಗಣಿಸಿ, ಕೇಂದ್ರ ನೌಕರರ ವೇತನವನ್ನು ಪರಿಶೀಲಿಸಲು ಎಂಟನೇ ವೇತನ ಆಯೋಗವನ್ನು ರಚಿಸಲಾಗುತ್ತಿದೆಯೇ…? ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಪರಿಗಣನೆಯಲ್ಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸರಕಾರಿ ನೌಕರರಿಗೆ 8 ನೇ ವೇತನ ಅನುಷ್ಠಾನಗೊಳಿಸುವ ಯೋಜನೆ ಸರ್ಕಾರಕ್ಕಿಲ್ಲ ಎನ್ನುವ ಬಗ್ಗೆ ಸ್ಪಷ್ಟ ಉತ್ತರ ನೀಡಿದ್ದಾರೆ.

Govt Employees 8th Pay Commission Latest
Image Credit: Krishi Jagran

ಈ ಬಾರಿ ನೌಕರರ ವೇತನದಲ್ಲಿ ಬಾರಿ ಹೆಚ್ಚಳ
ಸದ್ಯ ಜನವರಿ 2024 ರಲ್ಲಿ ಸರ್ಕಾರೀ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸುವ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ. ಇನ್ನು ರೂಪಿಸಲಾದ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು.

Join Nadunudi News WhatsApp Group

Join Nadunudi News WhatsApp Group