8th Pay: 8 ನೇ ವೇತನದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಕೇಂದ್ರ ಸರ್ಕಾರ, ಸರ್ಕಾರೀ ನೌಕರರ ಸಂಬಳ ಇಷ್ಟು ಹೆಚ್ಚಾಗಬಹುದು.

ಸರ್ಕಾರೀ ನೌಕರರಿಗೆ 8 ನೇ ವೇತನ ಯಾವಾಗ ಜಾರಿಯಾಗುತ್ತದೆ..? ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ..?

8th Pay Commission Update: ಸರ್ಕಾರೀ ನೌಕರರು ಪ್ರಸ್ತುತ 7 ನೇ ವೇತನದಡಿ ವೇತನವನ್ನು ಪಡೆಯುತ್ತಿದ್ದಾರೆ. ಕೇಂದ್ರದಿಂದ ತುಟ್ಟಿಭತ್ಯೆ ಹೆಚ್ಚಳ ಘೋಷಣೆಯಾಗಿದೆ. ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಸದ್ಯ ಇದರ ಬೆನ್ನಲ್ಲೇ ನೌಕರರಿಗೆ ಹೊಸ ವೇತನ ಅಂದರೆ 8 ನೇ ವೇತನ ಜಾರಿ ಮಾಡುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

8 ನೇ ವೇತನ ಜಾರಿಗಾಗಿ ಸರ್ಕಾರೀ ನೌಕರರು ಕಾಯುತ್ತಿದ್ದಾರೆ. ಯಾವ 8th Pay Commission ಜಾರಿಯಾಗುತ್ತದೆ..? ಎನ್ನುವುದು ಸರ್ಕಾರೀ ನೌಕರರ ಸದ್ಯದ ಕುತೂಹಲವಾಗಿದೆ. ಇದೀಗ ಕೇಂದ್ರದಿಂದ 8 ನೇ ವೇತನ ಜಾರಿಯ ಕುರಿತು ಮಹತ್ವದ ಆದೇಶ ಹೊರಬಿದ್ದಿದೆ. ಇದೀಗ ಸರ್ಕಾರೀ ನೌಕರರಿಗೆ 8 ನೇ ವೇತನ ಯಾವಾಗ ಜಾರಿಯಾಗುತ್ತದೆ..? ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ..? ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಮಾಹಿತಿ ತಿಳಿಯೋಣ.

8th Pay Commission Update
Image Credit: Rajneetpg2022

8 ನೇ ವೇತನದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರೀ ನೌಕರರು 8 ನೇ ವೇತನಕ್ಕಾಗಿ ಕಾಯುತ್ತಿದ್ದಾರೆ. ಸದ್ಯ 8 ನೇ ವೇತನ ಹೆಚ್ಚಳದ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಮುಂದಿನ ವರ್ಷ ನಡೆಯುವ ರಾಷ್ಟ್ರೀಯ ಚುನಾವಣೆಗೆ ಮುನ್ನ ಸುಮಾರು 54 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಎಂಟನೇ ವೇತನ ಆಯೋಗವನ್ನು ರೂಪಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ. 8 ನೇ ವೇತನ ಆಯೋಗವನ್ನು ರಚಿಸುವ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಸರ್ಕಾರೀ ನೌಕರರ ಸಂಬಳ ಇಷ್ಟು ಹೆಚ್ಚಾಗಬಹುದು
2024 ರ ಅಂತ್ಯದ ವೇಳೆಯಲ್ಲಿ 8ನೇ ವೇತನ ಆಯೋಗ ರಚನೆಯಾಗಲಿದೆ. 2016 ರಲ್ಲಿ 7 ನೇ ವೇತನ ಆಯೋಗ ರಚನೆಯಾಗಿತ್ತು. ಪ್ರತಿ 10 ವರ್ಷಗಳ ನಂತರ ಹೊಸ ವೇತನ ಆಯೋಗ ರಚನೆಯಾಗಲಿದೆ. 2025 ರ ಅಂತ್ಯದಲ್ಲಿ ಅಥವಾ 2026 ರ ಆರಂಭದಲ್ಲಿ 8 ನೇ ವೇತನ ಆಯೋಗ ಜಾರಿಗೆ ಬರಲಿದೆ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ವರದಿಯಾಗಿತ್ತು.

Central Government Employees
Image Credit: Asianetnews

ಈ ಬಾರಿಯ 8 ನೇ ವೇತನ ಹೆಚ್ಚಳವು ನೌಕರರ ವೇತನವನ್ನು ಇನ್ನಷ್ಟು ಹೆಚ್ಚಿಸಲಿದೆ. ಫಿಟ್ ಮೆಂಟ್ ಅಂಶವು 3.68 ಪಟ್ಟು ಹೆಚ್ಚಳ ಸಂಭವನೀಯ ಸಾಧ್ಯತೆ ಇದೆ ಹಾಗೂ ವೇತನ ಹೆಚ್ಚಳ 44.44 %, ಕನಿಷ್ಠ ವೇತನ ರೂ. 26,000 ಸಾಧ್ಯತೆ ಇದೆ ಎನ್ನುವ ಬಗ್ಗೆ ಈ ಹಿಂದೆ ವರದಿಯಾಗಿತ್ತು.

Join Nadunudi News WhatsApp Group

Join Nadunudi News WhatsApp Group