8th Pay: 8 ನೇ ವೇತನ ಜಾರಿಗೆ ಬಂದರೆ ಕೇಂದ್ರ ಸರ್ಕಾರೀ ನೌಕರರ ಸಂಬಳ ಎಷ್ಟಾಗಲಿದೆ…? ಇಲ್ಲಿದೆ ಡೀಟೇಲ್ಸ್.

ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್, 8 ನೇ ವೇತನದ ಬಗ್ಗೆ ಬಿಗ್ ಅಪ್ಡೇಟ್

8th Pay Latest Update: ಸದ್ಯ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿರುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಹೊರಡಿಸಿದೆ. ನೌಕರರು ಈ ಘೋಷಣೆಯ ಬಳಿಕ ಶೇ. 4 ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

ಇನ್ನು 7 ನೇ ವೇತನದಡಿ ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಇದೀಗ ಸರ್ಕಾರ ನೌಕರರ 8 ನೇ ವೇತನ ಜಾರಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸುತ್ತಿದೆ. ಸರ್ಕಾರೀ ನೌಕರರು 8 ನೇ ವೇತನ ಜಾರಿಗಾಗಿ ಆಗ್ರಹಿಸಿದ್ದಾರೆ. ನೌಕರರಿಗೆ 8 ನೇ ವೇತನ ಜಾರಿಯಾದರೆ ನೌಕರರ ವೇತನದಲ್ಲಿ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

8th Pay Commission
Image Credit: India

ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್
ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗ 2026ರ ಜನವರಿಯಲ್ಲಿ ಬರುವ ಸಾಧ್ಯತೆ ಇದೆ. ವರ್ಷದ ಆರಂಭದಲ್ಲಿ, ಮಾರ್ಚ್ 7 ರಂದು, ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯನ್ನು (ಡಿಎ) ಮೂಲ ವೇತನದ ಶೇಕಡಾ 4 ರಿಂದ 50 ರಷ್ಟು ಹೆಚ್ಚಿಸಲು ಅನುಮೋದಿಸಿತ್ತು. ದೇಶದ 1 ಕೋಟಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಸರ್ಕಾರದ ಶೇಕಡಾ 4 ರಷ್ಟು ಡಿಎ ಹೆಚ್ಚಳದಿಂದ ನೇರವಾಗಿ ಪ್ರಯೋಜನ ಪಡೆದಿದ್ದಾರೆ. ಈ ಹೊಸ ದರಗಳು ಜನವರಿ 1, 2024 ರಿಂದ ಜಾರಿಗೆ ಬಂದಿವೆ. ತುಟ್ಟಿ ಭತ್ಯೆಯ ಹೊರತಾಗಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆ (HRA) ಕೂಡ ಹೆಚ್ಚಿಸಲಾಗಿದೆ.

ಡಿಎ ಮೂಲ ವೇತನದ ಶೇಕಡಾ 50 ಕ್ಕೆ ತಲುಪಿದೆ. ಡಿಎ ಶೇ 50 ತಲುಪಿದ ನಂತರ 8ನೇ ವೇತನ ಆಯೋಗವನ್ನು ತರಬೇಕು ಎಂದು ಕೇಂದ್ರ ಸರ್ಕಾರಿ ನೌಕರರ ಹಲವು ಸಂಘಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ರೈಲ್ವೆ ಯೂನಿಯನ್‌ ಗಳು ಸೇರಿದಂತೆ ಅನೇಕ ಕೇಂದ್ರ ಸರ್ಕಾರಿ ಸಂಸ್ಥೆಗಳು 8 ನೇ ವೇತನ ಆಯೋಗದ ರಚನೆಯ ಬೇಡಿಕೆಯನ್ನು ಎತ್ತಲು ಪ್ರಾರಂಭಿಸಿವೆ. ವರದಿಗಳ ಪ್ರಕಾರ, 8 ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.

8th Pay Commission Latest Update
Image Credit: India

8 ನೇ ವೇತನ ಜಾರಿಗೆ ಬಂದರೆ ಕೇಂದ್ರ ಸರ್ಕಾರೀ ನೌಕರರ ಸಂಬಳ ಎಷ್ಟಾಗಲಿದೆ…?
ಸರ್ಕಾರಿ ನೌಕರರಿಗೆ ಡಿಎ ನೀಡಿದರೆ ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಅಖಿಲ ಭಾರತ CPI-IW ನ 12 ತಿಂಗಳ ಸರಾಸರಿಯಲ್ಲಿ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ DA ಮತ್ತು DR ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.

Join Nadunudi News WhatsApp Group

ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಭತ್ಯೆಗಳನ್ನು ಪರಿಷ್ಕರಿಸಿದರೂ, ನಿರ್ಧಾರವನ್ನು ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ನಲ್ಲಿ ಪ್ರಕಟಿಸಲಾಗುತ್ತದೆ. 2006 ರಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಯೋಜನೆಯನ್ನು ಘೋಷಿಸಿತು.

Govt Employees 8th Pay Commission
Image Credit: Informal Newz

Join Nadunudi News WhatsApp Group